ಸಾರಾಂಶ
ವಕ್ಫ್ ಬೋರ್ಡ್ ಕರ್ನಾಟಕದಲ್ಲಿ 6 ಲಕ್ಷ 20 ಸಾವಿರ ಎಕರೆ ಹಾಗೂ ಭಾರತದಲ್ಲಿ 38 ಲಕ್ಷ ಎಕರೆ ಭೂಮಿಯನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ.
ತೇರದಾಳ(ರ-ಬ) : ವಕ್ಫ್ ಬೋರ್ಡ್‌ನ ಈಗಲೂ ಬೆಂಬಲಿಸುವ ಗೋಸುಂಬೆ ರಾಜಕಾರಣಿಗಳು ಅದರಿಂದ ಬೆಲೆಬಾಳುವ ಆಸ್ತಿ ಪಡೆದಿದ್ದಾರೆ. ಅದಕ್ಕೆ ಬೆಂಬಲಿಸುತ್ತಾರೆ. ಇಂದು ಹಿಂದೂ ದೇವಸ್ಥಾನಗಳಿಗೆ ದೇಣಿಗೆ ನೀಡಿ ಮುಂದೊಂದು ದಿನ ಅದು ನಮ್ಮ ಆಸ್ತಿ ಎಂದು ತಿರುಗಿ ಬಿದ್ದರೆ ಅಚ್ಚರಿ ಪಡಬೇಕಿಲ್ಲ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡ ವಕ್ಫ್ ಹಠಾವೋ, ದೇಶ ಬಚಾವೊ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ವಕ್ಫ್ ಬೋರ್ಡ್ ಕರ್ನಾಟಕದಲ್ಲಿ 6 ಲಕ್ಷ 20 ಸಾವಿರ ಎಕರೆ ಹಾಗೂ ಭಾರತದಲ್ಲಿ ೩೮ಲಕ್ಷ ಎಕರೆ ಭೂಮಿಯನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಿಂದುಗಳ ಹತ್ಯೆ ಮಾಡಿದರು, ಕೂಡ ಮುಸ್ಲಿಮರ ಓಲೈಕೆಗಾಗಿ ಅವರ ವಿರುದ್ಧದ ಕೇಸ್ ತೆಗೆದುಹಾಕುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲೀಬಾನಿ ಆಡಳಿತ ಜಾರಿಗೆ ಬರಲಿದೆ ಎಂದು 2015 ರಲ್ಲೆ ಹೇಳಿದ್ದೆ ಈಗ ಅದೇ ಆಗಿದೆ ಎಂದು ತಮ್ಮ ಹಳೆಯ ಮಾತು ನೆನೆಪಿಸಿದರು.
ಸಿದ್ದರಾಮಯ್ಯ ತಮ್ಮನ್ನು ದೇವರಾಜ ಅರಸುರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಅರಸು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ ಅನ್ವಯ ಉಳುಮೆ ಮಾಡುವ ರೈತರಿಗೆ ವಕ್ಫ್‌ನಿಂದ ಜಮೀನು ನೀಡಲಿ ಎಂದರು. ಮಾಣಿಪ್ಪಾಡಿ ವರದಿ ಪ್ರಕಾರ ಇಂದು ಅದನ್ನು ಬೆಂಬಲಿಸುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ.ಇಬ್ರಾಹಿಂ ಸೇರಿ ಇತರೆ ರಾಜಕಾರಣಿಗಳು ಪಡೆದ ವಕ್ಫ್ ಆಸ್ತಿ ಬೆಲೆ 15 ವರ್ಷಗಳ ಹಿಂದೆ ೨ಲಕ್ಷ ೭೦ ಸಾವಿರ ಕೋಟಿ ರು. ಆಗಿತ್ತು ಎಂದು ಗಂಭೀರವಾಗಿ ಆರೋಪಿಸಿದರು.
ವಿಜಯಪುರ ಶಾಸಕ ಯತ್ನಾಳ ಮಾತನಾಡಿ, ಹಿಂದೂಗಳು ದೇವಸ್ಥಾನ ಕಟ್ಟುವಾಗ ಮುಸ್ಲಿಮ ಹತ್ತಿರ ದೇಣಿಗೆ ಪಡೆಯಬೇಡಿ. ತೇರದಾಳದಲ್ಲಿ ಭಾಷಣ ಮೊಟಕುಗೊಳಿಸಿದ್ದು ಅಲ್ಲಿ ಹಲವು ಮಠಾದೀಶರು ಉಪಸ್ಥಿತರಿದ್ದರೆಂಬ ಕಾರಣಕ್ಕೆ ಹೊರತು ಯಾರಿಗೂ ಹೆದರಿ ಅಲ್ಲ. ಅದಕ್ಕುತ್ತರಿಸಲು ಮತ್ತೇ ಈ ಮೂಲಕ ಬರಬೇಕಾಯಿತು. ತೇರದಾಳದಲ್ಲಿ ೪೫೦ ಎಕರೆ ಆಸ್ತಿಯಲ್ಲಿ ವಕ್ಫ್ ಹೆಸರು ಬಂದಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ೬೫೯೦ ಎಕರೆಗೆ ನೋಟಿಸ್ ನೀಡಿದ್ದಾರೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ವಕ್ಫ್ ಆಸ್ತಿ ಎಂದರೆ ಅದು ದಾನ ಪಡೆದ ಆಸ್ತಿಯೆಂದಾದರೆ ದಾನ ನೀಡಿದವರ ಪಟ್ಟಿ ಬಿಡುಗಡೆಗೆ ವಕ್ಫ್ ಬೋರ್ಡ್ ಮುಂದಾಗಲಿ ಎಂದರು. ಮೈಗೂರಿನ ಗುರುಪ್ರಸಾದ ಶ್ರೀ, ಹಳಿಂಗಳಿ ಶಿವಾನಂದ ದೇವರು ಆಶೀರ್ವಚಿಸಿದರು. ತೇರದಾಳದಲ್ಲಿ ವಕ್ಫ್ ಬೋರ್ಡ್‌ನಿಂದ ನೋಟಿಸ್ ಪಡೆದ ರೈತರು ಬಸನಗೌಡ ಪಾಟೀಲ್ ಯತ್ನಾಳರಿಗೆ ವಕ್ಪ್ ರದ್ದು ಪಡಿಸುವಂತೆ ಮನವಿ ಸಲ್ಲಿಸಿದರು. ತೇರದಾಳದ ಗಂಗಾಧರ ದೇವರು, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಮಹದೇವರಪುರ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಎನ್.ಆರ್.ಸಂತೋಷ, ವಿರೂಪಾಕ್ಷ ಹಿರೇಮಠ, ಸುಬ್ರಾಯಗೌಡ ಪಾಟೀಲ, ಮೋಹನ ಜಾಧವ ಸೇರಿದಂತೆ ಸಾವಿರಾರು ರೈತರು, ಕಾರ್ಯಕರ್ತರು ಇದ್ದರು.