ದೇಶಕ್ಕಾಗಿ ಯುದ್ಧ ಭೂಮಿಯಲ್ಲಿ ಕಾದಾಡಲು ನೆರವಾಗಿ ಡಿಕಮಿಷನ್ (ನಿವೃತ್ತಿ) ಆಗಿರುವ ಭಾರತೀಯ ಸೇನೆಯ ಟಿ-55 ಸರಣಿಯ ಟ್ಯಾಂಕ್‌ನ್ನು ಬುಧವಾರ ಕ್ರೇನ್ ಮೂಲಕ ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕ ಪಕ್ಕದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಅಳವಡಿಕೆ ಮಾಡಲಾಯಿತು.

ಮಂಗಳೂರು: ದೇಶಕ್ಕಾಗಿ ಯುದ್ಧ ಭೂಮಿಯಲ್ಲಿ ಕಾದಾಡಲು ನೆರವಾಗಿ ಡಿಕಮಿಷನ್ (ನಿವೃತ್ತಿ) ಆಗಿರುವ ಭಾರತೀಯ ಸೇನೆಯ ಟಿ-55 ಸರಣಿಯ ಟ್ಯಾಂಕ್‌ನ್ನು ಬುಧವಾರ ಕ್ರೇನ್ ಮೂಲಕ ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕ ಪಕ್ಕದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಅಳವಡಿಕೆ ಮಾಡಲಾಯಿತು.

ಪುಣೆಯ ಆರ್ಮಿ ಆರ್ಡಿನೆನ್ಸ್ ಡಿಪೋದಿಂದ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಂಗಳೂರಿಗೆ ತರಲಾಗಿತ್ತು. ಒಂದು ವರ್ಷದಿಂದ ಟ್ರೇಲರ್‌ನಲ್ಲಿತ್ತು. ಕದ್ರಿ ಯುದ್ಧ ಸ್ಮಾರಕ ಪಕ್ಕದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸುಮಾರು 38 ಲಕ್ಷ ರು. ವೆಚ್ಚದಲ್ಲಿ ಅದನ್ನಿಡಲು ವ್ಯವಸ್ಥೆ ಮಾಡಲಾಗಿತ್ತು. ಟ್ಯಾಂಕ್‌ಗೆ ಬಣ್ಣ ಬಳಿದಿದ್ದು, ಅದನ್ನು ಇದೀಗ ತಂದಿಡಲಾಗಿದೆ.ಸದ್ಯ ಟ್ಯಾಂಕನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿಡಲಿದ್ದು, ಜು.26ರ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣ ಮಾಡಲು ನಿರ್ಧರಿಸಲಾಗಿದೆ. ಇದು ಕದ್ರಿ ಪಾರ್ಕ್ ಮತ್ತು ಯುದ್ಧ ಸ್ಮಾರಕದ ಪ್ರಮುಖ ಆಕರ್ಷಣೆಯಾಗಲಿದೆ.