ಸಾರಾಂಶ
ಉಗ್ರಾಣದ ಪ್ರಭಾರ ವ್ಯವಸ್ಥಾಪಕ ಆಕಾಶ ಮತ್ತು ಶಶಿಕುಮಾರ ಇಬ್ಬರೂ ಸೇರಿಕೊಂಡು ಗದಗ ಹಾಗೂ ಧಾರವಾಡದ ವಿವಿಧ ಖಾಸಗಿ ಟ್ರೇಡರ್ಸ್‌ಗಳಿಗೆ ಕಡಲೆ ಮತ್ತು ಹೆಸರು ಮಾರಾಟ ಮಾಡಿದ್ದಾರೆ.
ಧಾರವಾಡ:
ಅಣ್ಣಿಗೇರಿ ಎಪಿಎಂಸಿ ಆವರಣದ ಸರ್ಕಾರಿ ಉಗ್ರಾಣದಲ್ಲಿದ್ದ ಕಡಲೆ ಮತ್ತು ಹೆಸರು ಕಾಳು ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣದ ಪ್ರಭಾರ ವ್ಯವಸ್ಥಾಪಕ ಆಕಾಶ ಮೂಶಣ್ಣವರ ಮತ್ತು ಸಹೋದ್ಯೋಗಿ ಶಶಿಕುಮಾರ ಹಿರೇಮಠ ಅವರನ್ನು ಬಂಧಿಸಿದ್ದು, ₹ 70 ಲಕ್ಷ ಮೌಲ್ಯದ 1,859 ಕಡಲೆ ಮತ್ತು ಹೆಸರು ಕಾಳಿನ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ವಿಕಾಸಕುಮಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರಾಣದ ಪ್ರಭಾರ ವ್ಯವಸ್ಥಾಪಕ ಆಕಾಶ ಮತ್ತು ಶಶಿಕುಮಾರ ಇಬ್ಬರೂ ಸೇರಿಕೊಂಡು ಗದಗ ಹಾಗೂ ಧಾರವಾಡದ ವಿವಿಧ ಖಾಸಗಿ ಟ್ರೇಡರ್ಸ್‌ಗಳಿಗೆ ಕಡಲೆ ಮತ್ತು ಹೆಸರು ಮಾರಾಟ ಮಾಡಿದ್ದಾರೆ. ಅಲ್ಲದೇ ಸರ್ಕಾರಿ ಉಗ್ರಾಣದಲ್ಲಿಯ ಕಡಲೆ ಮತ್ತು ಹೆಸರು ಕಾಳುಗಳಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಅಣ್ಣಿಗೇರಿಯ ರಡ್ಡಿ ಬ್ಯಾಂಕ್‍ನಲ್ಲಿ ₹ 37 ಲಕ್ಷ ಸಾಲ ಪಡೆದರೆ, ಶಶಿಕುಮಾರ ಆಕಾಶನ ಸಹಾಯದಿಂದ ಗದಗನ ಸೆಂಟ್ರಲ್ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಡಿಎಸ್‍ಪಿ ಎಸ್.ಎಂ. ನಾಗರಾಜ, ಸಿಪಿಐಗಳಾದ ಶಿವಾನಂದ ಕಮತಗಿ, ಪ್ರಮೋದ ಯಲಿಗಾರ, ಶಿವಾನಂದ ಕಟಗಿ, ರವಿಕುಮಾರ ಕಪ್ಪತನವರ ಇದ್ದರು.