ರಾಮನಗರ: ಜಿಲ್ಲಾ ಕೇಂದ್ರ ನಗರದ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ನಾಗರಿಕರು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಾಕಲು ನಗರಸಭೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದೆ
ರಾಮನಗರ: ಜಿಲ್ಲಾ ಕೇಂದ್ರ ನಗರದ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ನಾಗರಿಕರು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಾಕಲು ನಗರಸಭೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದೆ.
ನಗರದ ಪ್ರಮುಖ ವೃತ್ತ, ರಸ್ತೆ ಹಾಗೂ ಬೀದಿಗಳಲ್ಲಿರುವ ಬ್ಲ್ಯಾಕ್ ಸ್ಪಾಟ್‌ಗಳ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೂ ಹಿಂಜರಿಯುತ್ತಿಲ್ಲ. ಗುಲಾಬಿ ಹೂ ನೀಡಿದರು ಒಪ್ಪುತ್ತಿಲ್ಲ, ದಂಡ ಪ್ರಯೋಗ ಮಾಡಿದರು ನಾಗರಿಕರು ಹೆದರುತ್ತಿಲ್ಲ.ಈ ಹಿನ್ನೆಲೆಯಲ್ಲಿ ನಗರಸಭೆ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿರುವ ಬ್ಲ್ಯಾಕ್ ಸ್ಪಾಟ್ ಗಳನ್ನು ತ್ಯಾಜ್ಯ ಮುಕ್ತಗೊಳಿಸಲು ಅವುಗಳನ್ನು ಸೌಂದರ್ಯೀಕರಣಗೊಳಿಸಿ ನಾಗರಿಕರ ಗಮನ ಸೆಳೆಯುವ ಹೊಸ ಪ್ರಯತ್ನ ಇದಾಗಿದೆ.
ಈಗಾಗಲೇ ನಗರದ 15 ಬ್ಲ್ಯಾಕ್ ಸ್ಪಾಟ್ ಗಳ ಸೌಂದರ್ಯೀಕರಣಗೊಳಿಸಲು ಉದ್ದೇಶಿಸಲಾಗಿದೆ. ಸ್ವಚ್ಛತೆ ಕಾರ್ಯ ಕೈಗೊಂಡಿರುವ ಆ ಸ್ಥಳಗಳಲ್ಲಿ ಹಳೆಯ ಟೈರ್, ಟೈಲ್ಸ್ , ಹಾಲೋ ಬ್ಲಾಕ್ಸ್ ಸೇರಿದಂತೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಳಸಿಕೊಂಡು ಅದಕ್ಕೆ ಬಣ್ಣ ಬಣ್ಣದಿಂದ ಅಲಂಕಾರ ಮಾಡಿ ಅದರೊಳಗೆ ಗಿಡಗಳನ್ನು ನೆಟ್ಟು ಬೆಳೆಸುವುದು.ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರುವುದು. ಸ್ವಚ್ಛತೆ ಹಾಗೂ ದಂಡ ವಿಧಿಸುವ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಇನ್ನೂ ಹಲವು ವಿಶಿಷ್ಟ ರೀತಿಯಲ್ಲಿ ಆಕರ್ಷಣೆ ಮತ್ತು ಸೌಂದರ್ಯೀಕರಣ ಮಾಡಲಾಗುತ್ತಿದೆ.
ಬ್ಲ್ಯಾಕ್ ಸ್ಪಾಟ್‌ಗಳಿಗೆ ಕಲಾತ್ಮಕ ರೂಪ ಕೊಟ್ಟು ಸುಂದರಗೊಳಿಸಲಾಗುತ್ತಿದ್ದು, ಮೂಗು ಮರಿದು ಓಡಾಡಬೇಕಾದ ಸ್ಥಳಗಳನ್ನು ಸುಂದರಗೊಳಿಸಿ ನಾಗರಿಕರ ಗಮನ ಸೆಳೆಯಲು ನಗರಸಭೆ ಪ್ರಯತ್ನಿಸುತ್ತಿದೆ.ಬ್ಲ್ಯಾಕ್ ಸ್ಪಾಟ್‌ಗಳನ್ನು ಸುಂದರಗೊಳಿಸುವ ಕೆಲಸಕ್ಕೆ ನಗರಸಭೆ ನೇಮಿಸಿರುವ ಸ್ವಚ್ಛತೆಯ ರಾಯಭಾರಿ ಚಿತ್ರಾರಾವ್ ಅವರ ತಂಡ, ಎನ್ನೆಸ್ಸೆಸ್ ವಿದ್ಯಾರ್ಥಿಗಳ ತಂಡ ಹಾಗೂ ನಗರಸಭೆಯ ಕಮ್ಯುನಿಟಿ ಮೊಬಿಲೈಸರ್‌ಗಳು ತೊಡಗಿದ್ದಾರೆ ಎಂದು ನಗರಸಭೆ ಪರಿಸರ ವಿಭಾಗದ ಎಇಇ ಸುಬ್ರಹ್ಮಣ್ಯ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಬಾಕ್ಸ್ .............ಕಸದ ತಿಪ್ಪೆ ತೆರವು, ಸೂಚನಾ ಫಲಕ ಅಳವಡಿಕೆ
ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆಯು, ನಗರದ 31 ವಾರ್ಡ್‌ಗಳಲ್ಲಿ 45ಕ್ಕೂ ಹೆಚ್ಚು ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿದೆ. ಅಲ್ಲಿದ್ದ ಕಸದ ತಿಪ್ಪೆಗಳನ್ನು ತೆರವುಗೊಳಿಸಿ ಸಿಂಗರಿಸಿ, ಮತ್ತೆ ಕಸ ಎಸೆಯದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.ಆ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರ ಮೇಲೆ ನಿಗಾ ಕೂಡ ಇಡಲಾಗಿತ್ತು. ಆಗಲೂ ನಿಯಂತ್ರಣಕ್ಕೆ ಬರದಿದ್ದಾಗ ಕಾರ್ಯಾಚರಣೆಗೆ ಇಳಿದ ನಗರಸಭೆ ಸಿಬ್ಬಂದಿ ಕಸ ಎಸೆಯಲು ಬರುವ ನಾಗರಿಕರಿಗೆ ಗುಲಾಬಿ ಹೂ ನೀಡಿದರು. ಆನಂತರ ದಂಡಾಸ್ತ್ರ ಪ್ರಯೋಗ ಪ್ರಾರಂಭಿಸಿದ್ದಾರೆ. ಇಷ್ಟಾದರೂ ರಾತ್ರಿ ಕಳೆದು ಬೆಳಗಾಗುವುದೊರಳಗೆ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಕಸದ ರಾಶಿ ತುಂಬಿರುತ್ತದೆ. ಈಗ ನಗರಸಭೆ ಬ್ಲ್ಯಾಕ್ ಸ್ಪಾಟ್ ಗಳ ಸೌಂದರ್ಯೀಕರಣ ಹೆಚ್ಚಿಸಿ ಕಸ ಮುಕ್ತಗೊಳಿಸಲು ಮುಂದಾಗಿದೆ.
ಬಾಕ್ಸ್ .....................ಬ್ಲ್ಯಾಕ್ ಸ್ಪಾಟ್‌ಗಳು ಎಲ್ಲೆಲ್ಲಿವೆ ?
2ನೇ ವಾರ್ಡಿನ ಕಾಳಿಕಾಂಬ ದೇವಸ್ಥಾನ ಎದುರು, 8ನೇ ವಾರ್ಡಿನ ವಿವೇಕಾನಂದ ನಗರ ಆರ್ ವಿಸಿಎಸ್ ಕಲ್ಯಾಣ ಮಂಟಪದ ಬಳಿಯ ತಿರುವು, 12ನೇ ವಾರ್ಡಿನ ಮಸೀದಿ ರಸ್ತೆ, 13ನೇ ವಾರ್ಡಿನ ಚರ್ಚ್ ಎದುರು, 14ನೇ ವಾರ್ಡಿನ ನಾಲಬಂದವಾಡಿ, 15ನೇ ವಾರ್ಡಿನ ಫುಲ್ ಬಾಗ್ , 18ನೇ ವಾರ್ಡಿನ ರಾಯಲ್ ಸ್ಕೂಲ್ ಪಕ್ಕ, 22ನೇ ವಾರ್ಡಿನ ಎವಿಕೆ ಹಾಸ್ಪಿಟಲ್ ಎದುರು, 25ನೇ ವಾರ್ಡಿನ ಜಾಲಮಂಗಲ ರಸ್ತೆ, 28ನೇ ವಾರ್ಡಿನ ತಾಲೂಕು ಕಚೇರಿ ಎದುರು, 29ನೇ ವಾರ್ಡಿನ ಮುಜೀಬ್ ಮನೆ ಎದುರು ಹಾಗೂ 30ನೇ ವಾರ್ಡಿನ ಹಳೇಯ ಮೊರಾರ್ಜಿ ದೇಸಾಯಿ ರಸ್ತೆಗಳನ್ನು ಬ್ಲ್ಯಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ.ಕೋಟ್ ................
ಸ್ವಚ್ಛ ರಾಮನಗರಕ್ಕೆ ಸಂಕಲ್ಪ ಮಾಡಿದ್ದು, ಇದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಬಹುತೇಕ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಕಸ ವಿಲೇವಾರಿ ನಿಯಂತ್ರಣಕ್ಕೆ ಬಂದಿದೆ. ಇನ್ನುಳಿದ 15 ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಕಸ ಸಂಗ್ರಹಣೆಯಾಗುತ್ತಿದೆ. ಆ ಬ್ಲ್ಯಾಕ್ ಸ್ಪಾಟ್‌ಗಳಿಗೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಪರಿಕಲ್ಪನೆ ಮೂಲಕ ಹೊಸ ರೂಪ ಕೊಡಲಾಗುತ್ತಿದೆ. ತ್ಯಾಜ್ಯ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕ.- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
ಕೋಟ್ .............ಸ್ವಚ್ಛ ರಾಮನಗರ ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೀಗ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಇದನ್ನು ಮೊದಲ ಆದ್ಯತೆಯಾಗಿಯೂ ಪರಿಗಣಿಸಿದ್ದೇವೆ. ಬೀದಿ ಬದಿಯಲ್ಲಿ ಕಸ ಎಸೆಯುವುದು ನಿಯಂತ್ರಣ ಬಾರದ ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳನ್ನು ನಿರುಪಯುಕ್ತ ವಸ್ತುಗಳನ್ನು ಬಳಸಿ ಸುಂದರಗೊಳಿಸುವ ಪರಿಕಲ್ಪನೆಗೆ ಮುಂದಾಗಿದ್ದೇವೆ.
- ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ19ಕೆಆರ್ ಎಂಎನ್ 3,4,5,6.ಜೆಪಿಜಿ
3.ಲೂರ್ದು ಮಾತಾ ಚರ್ಚ್ ಎದುರು ಮೊದಲು4.ಲೂರ್ದು ಮಾತಾ ಚರ್ಚ್ ಆನಂತರ
5.ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು,ನಗರಸಭೆ, ರಾಮನಗರ.6.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.