ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರುಣಿಸಿ: ಡಿಸಿ ದಿವಾಕರ

| Published : Mar 31 2024, 02:04 AM IST

ಸಾರಾಂಶ

ಮುಂಗಾರು ಹಿಂಗಾರು ಮಳೆ ಕೈಕೊಟ್ಟ ಹಿನ್ನಲೆ ಈ ವರ್ಷ ತುಂಗಭದ್ರಾ ಜಲಾಶಯ ಒಳಗೊಂಡಂತೆ ಕೆರೆ ಕುಂಟೆಗಳು ಭರ್ತಿಯಾಗದೇ ಎಲ್ಲಾ ಖಾಲಿಯಾಗಿವೆ.

ಹೊಸಪೇಟೆ: ಬೇಸಿಗೆ ಸಮಯದಲ್ಲಿ ಮೂಕ ಪ್ರಾಣಿಗಳಿಗೆ ನೀರುಣಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕೆಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಹೇಳಿದರು.

ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಒಂದೂವರೆ ಎಕರೆ ಏರಿಯಾದ ಪ್ರದೇಶದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ವತಿಯಿಂದ ಪ್ರಾಣಿ ಮತ್ತು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದನ್ನ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂಗಾರು ಹಿಂಗಾರು ಮಳೆ ಕೈಕೊಟ್ಟ ಹಿನ್ನಲೆ ಈ ವರ್ಷ ತುಂಗಭದ್ರಾ ಜಲಾಶಯ ಒಳಗೊಂಡಂತೆ ಕೆರೆ ಕುಂಟೆಗಳು ಭರ್ತಿಯಾಗದೇ ಎಲ್ಲಾ ಖಾಲಿಯಾಗಿವೆ, ಮನುಷ್ಯರಿಗೂ ಸಹ ಕುಡಿಯುವ ನೀರಿಗೆ ಬರ ಉಂಟಾಗಿದ್ದು, ಟ್ಯಾಂಕರ್ ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ.

ಕಡು ಬೇಸಿಗೆಯಲ್ಲಿ ಉಷ್ಣಾಂಶ ೩೯ ರಿಂದ ೪೦ ಡಿಗ್ರಿ ಉಷ್ಣಾಂಶ ಇದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇವಲಾಪುರ ಗ್ರಾಮಸ್ಥರು ಮತ್ತು ಗ್ರಾ.ಪಂ ಸದಸ್ಯರು ಒಂದುಗೂಡಿ ಬಾಯಿಲ್ಲದ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಅದರಲ್ಲಿ ಕಳೆದ ೧೫ ದಿನಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನಿತ್ಯ ನೀರುಣಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರತಿಯೊಬ್ಬರು ಇಂತಹ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದರು.

ಇನ್ನು ಇದೆ ವೇಳೆ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ನ ಕಾರ್ಯದರ್ಶಿ ಅಶೋಕ ಮಾತನಾಡಿ, ಕಳೆದ ೧೫ ದಿನಗಳಿಂದ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ ಎರಡುಬಾರಿ ಪಕ್ಷಿಗಳಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯವಾಗಿ ಬಿಸಾಡಿದ ಪ್ಲಾಸ್ಟಿಕ್ ಡಬ್ಬಗಳನ್ನ ಮರು ಬಳಿಕೆ ಮಾಡಿ ಮರಗಳಿಗೆ ಕಟ್ಟಿ ನೀರು ಹಾಕಲಾಗುತ್ತದೆ ಜತೆಗೆ ಕರಿಡಿ, ಚಿರತೆ, ಹಾವು ಹಾಗೂ ಇನ್ನಿತರ ಪ್ರಾಣಿಗಳಿಗೆ ಅನುಕೂಲವಾಗುವುದಕ್ಕೆ ನೀರಿನ ಗಚ್ಚು ಮೂಲಕ ನೀರನ್ನು ಹಾಕಲಾಗುತ್ತದೆ ಇದರ ಜತೆಗೆ ನಮ್ಮ ದೇವಲಾಪುರ ಗ್ರಾಮಸ್ಥರು ಮತ್ತು ಗ್ರಾ.ಪಂ ಸದಸ್ಯರು ನಮ್ಮ ಸಂಸ್ಥೆಗೆ ಕೈ ಜೋಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ, ಹೊಸಪೇಟೆ ತಾಹಶೀಲ್ದಾರ್ ಶೃತಿ,ಮರಿಯಮ್ಮನಹಳ್ಳಿ ಉಪ ತಾಹಶೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷ ಅಂದಾನಗೌಡ, ಗ್ರಾ.ಪಂ ಅಭಿವೃದ್ಧಿಕಾರಿ ಜಿಲಾನ್ ಭಾಷ, ಗ್ರಾಪಂ ಸದಸ್ಯರು ಹೆಚ್.ಪರಶುರಾಮ,ಮಾಬು, ಜಿಲಾನ್ ಎಂ ನಾಗರಾಜ್ ಹಾಗೂ ಇನ್ನಿತರರಿದ್ದರು.