ನೀವು ಕುಡಿವ ಬಾಟಲಿ ನೀರೂ ಸೇಫಲ್ಲ! 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ - 88 ಮಾದರಿಗಳು ಕಳಪೆ

| N/A | Published : Apr 09 2025, 12:35 AM IST / Updated: Apr 09 2025, 06:00 AM IST

ನೀವು ಕುಡಿವ ಬಾಟಲಿ ನೀರೂ ಸೇಫಲ್ಲ! 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ - 88 ಮಾದರಿಗಳು ಕಳಪೆ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯದ ವಿವಿಧೆಡೆ ಬಾಟಲಿ ಕುಡಿಯುವ ನೀರಿನ 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಅದರಲ್ಲಿ 95 ಮಾದರಿಗಳು ಅಸುರಕ್ಷಿತ ಮತ್ತು 88 ಮಾದರಿಗಳು ಕಳಪೆ ಎಂದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

 ಬೆಂಗಳೂರು :  ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯದ ವಿವಿಧೆಡೆ ಬಾಟಲಿ ಕುಡಿಯುವ ನೀರಿನ 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಅದರಲ್ಲಿ 95 ಮಾದರಿಗಳು ಅಸುರಕ್ಷಿತ ಮತ್ತು 88 ಮಾದರಿಗಳು ಕಳಪೆ ಎಂದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ವಿಶೇಷ ತಪಾಸಣಾ ಅಭಿಯಾನ ನಡೆಸಿದೆ. ಅದರಲ್ಲಿ ಬಾಟಲಿ ನೀರಿನ 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಅದರಲ್ಲಿ 72 ಮಾದರಿಗಳಷ್ಟೇ ಸುರಕ್ಷಿತ ಎಂದು ಕಂಡುಬಂದಿದ್ದು, ಉಳಿದಂತೆ 95 ಮಾದರಿಗಳು ಅಸುರಕ್ಷಿತ ಮತ್ತು 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿದೆ ಎಂದು ಹೇಳಿದರು.

ವಿವಿಧ ಬ್ರ್ಯಾಂಡ್‌ನ ಬಾಟಲಿ ಕುಡಿಯುವ ನೀರಿನ ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬಾಟಲಿ ಕುಡಿಯುವ ನೀರು ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲೂ ಕಳಪೆ ಎಂದು ಕಂಡುಬಂದರೆ ಸಂಸ್ಥೆ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು. 88 ನೀರಿನ ಬಾಟಲಿಗಳಲ್ಲಿ ರಾಸಾಯನಿಕ ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದು ಗಂಭೀರ ವಿಷಯವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

41 ಔಷಧಗಳು ಕಳಪೆ:

ಔಷಧ ಆಡಳಿತ ವಿಭಾಗವು ಮಾರ್ಚ್‌ ತಿಂಗಳಲ್ಲಿ 1,891 ಔಷಧ ಮಾದರಿಗಳನ್ನು ವಿಶ್ಲೇಷಣೆ ನಡೆಸಿದೆ. ಅದರಲ್ಲಿ 1,298 ಔಷಧಗಳು ಉತ್ತಮ ಗುಣಮಟ್ಟದ್ದೆಂದು ಸಾಬೀತಾಗಿದ್ದು, 41 ಔಷಧಗಳು ಗುಣಮಟ್ಟದ್ದಲ್ಲ ಎಂದು ಪತ್ತೆಯಾಗಿದೆ. ಹೀಗೆ ಕಳಪೆ ಔಷಧ ಪೂರೈಸುತ್ತಿರುವವರ ವಿರುದ್ಧ ನ್ಯಾಯಾಲಯದಲ್ಲಿ ಫೆಬ್ರವರಿಯಲ್ಲಿ 10 ಮತ್ತು ಮಾರ್ಚ್‌ನಲ್ಲಿ 18 ಮೊಕದ್ದಮೆ ದಾಖಲಿಸಲಾಗಿದೆ. ಒಟ್ಟಾರೆ ವಿವಿಧ ಔಷಧ ತಯಾರಿಕಾ ಸಂಸ್ಥೆಗಳ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಹಾಗೆಯೇ ಕರಿದ ಹಸಿರು ಬಟಾಣಿ, ತುಪ್ಪ, ಖೋವಾ, ಪನ್ನೀರ್‌, ಸಿಹಿ ತಿಂಗಳು, ಮಿಕ್ಸರ್‌, ಪಾನೀಯಗಳ ತಪಾಸಣೆ ನಡೆಸಲಾಗಿದೆ. ಜನರು ಸೇವಿಸುವ ಆಹಾರ ಗುಣಮಟ್ಟದಿಂದ ಕೂಡಿರುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೆಯೇ, 590 ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಕಾರಣಕ್ಕೆ 214 ಹೋಟೆಲ್‌ಗಳಿಗೆ ನೋಟಿಸ್‌ ನೀಡಲಾಗಿದೆ. ಉಳಿದಂತೆ 11 ಹೋಟೆಲ್‌ಗಳಿಗೆ 1.15 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

- ಸರ್ಕಾರದ ಪರಿಶೀಲನೆ ವೇಳೆ ಅಪಾಯಕಾರಿ ಬ್ಯಾಕ್ಟೀರಿಯಾ, ರಾಸಾಯನಿಕ ಪತ್ತೆ- ಆಹಾರ ಸುರಕ್ಷತಾ ಇಲಾಖೆಯಿಂದ 255 ಮಾದರಿ ಟೆಸ್ಟ್‌ । 72 ಮಾದರಿಯಷ್ಟೇ ಸುರಕ್ಷಿತ: ದಿನೇಶ್

- ಆಹಾರ ಸುರಕ್ಷತಾ ಇಲಾಖೆಯಿಂದ ಫೆಬ್ರವರಿ- ಮಾರ್ಚ್‌ನಲ್ಲಿ ವಿಶೇಷ ತಪಾಸಣಾ ಅಭಿಯಾನ- 255 ಮಾದರಿಗಳು ಪರೀಕ್ಷೆಗೆ. ಆ ಪೈಕಿ 95 ಮಾದರಿ ಸುರಕ್ಷಿತ. 88 ಮಾದರಿ ಕಳಪೆ ಎಂದು ಪತ್ತೆ- 88 ಬಾಟಲಿಗಳಲ್ಲಿ ರಾಸಾಯನಿಕ, ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆ. ಇದು ಗಂಭೀರ ಸಂಗತಿ- ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ, ಪರಿಶೀಲನೆಯೂ ಮುಂದುವರಿಯುತ್ತೆ ಎಂದ ಸಚಿವ ದಿನೇಶ್‌

ಮಾರ್ಚ್‌ನಲ್ಲಿ ಆಹಾರ ಪರೀಕ್ಷೆ ವರದಿಆಹಾರ ಪದಾರ್ಥಸಂಗ್ರಹವಿಶ್ಲೇಷಣೆಕಳಪೆಸುರಕ್ಷಿತತುಪ್ಪ49060006ಖೋವಾ43090306ಪನ್ನೀರ್‌231320230ಸಿಹಿತಿಂಡಿ198830281ಖಾರಾ ಮಿಕ್ಸರ್‌119270423