ಭದ್ರೆಯಿಂದ ತರೀಕೆರೆ ಕ್ಷೇತ್ರದ ಕೆರೆಗಳಿಗೆ ನೀರು: ಜಿ.ಎಚ್.ಶ್ರೀನಿವಾಸ್

| Published : Aug 12 2024, 12:45 AM IST

ಭದ್ರೆಯಿಂದ ತರೀಕೆರೆ ಕ್ಷೇತ್ರದ ಕೆರೆಗಳಿಗೆ ನೀರು: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಭದ್ರಾ ಜಲಾಶಯದಿಂದ ತರೀಕೆರೆ ಕ್ಷೇತ್ರದ ನೂರಾರು ಕೆರೆಗಳಿಗೆ ನೀರು ಕೊಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಭದ್ರಾ ಜಲಾಶಯದಿಂದ ತರೀಕೆರೆ ಕ್ಷೇತ್ರದ ನೂರಾರು ಕೆರೆಗಳಿಗೆ ನೀರು ಕೊಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಭಾನುವಾರ ಸಮೀಪದ ಲಕ್ಕವಳ್ಳಿ ಬಳಿ ಭದ್ರಾ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿರುವುದು ಸಂತೋಷ ತಂದಿದೆ, ಭದ್ರಾ ಜಲಾಶಯದಿಂದ ತರೀಕೆರೆ ಕ್ಷೇತ್ರದ 55 ಸಾವಿರ ಎಕರೆಗೆ ನೀರು ಒದಗಿಸಲಾಗುತ್ತಿದೆ. ಉಬ್ರಾಣಿೃ-ಅಮೃತಾಪುರ ಏತ ನೀರಾವರಿ ಯೋಜನೆಯಿಂದ ಹಲವಾರು ಕೆರೆಗಳಿಗೆ ನೀರು ಕೊಡಲಾಗುತ್ತಿದೆ, ಭದ್ರಾ ನದಿ ಕಾಲುವೆ ಕಾರ್ಯ ಪೂರ್ಣ ಗೊಂಡರೆ ಕ್ಷೇತ್ರದ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಭದ್ರಾ ಜಲಾಶಯ ರೈತರ ಆಶಾಕಿರಣವಾಗಿದೆ. ಪ್ರತಿ ವರ್ಷ ಒಳ್ಳೆಯ ಮಳೆ ಬೆಳೆ ಅಗಲಿ ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ರಾಜ್ಯದಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಎಲ್ಲ ಕರೆಗಳಿಗೂ ನೀರು ತುಂಬಿಸಲಾಗುವುದು, ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ.ಸಂಗಮೇಶ್ ಅವರಿಗೆ ಸಚಿವ ಸ್ಥಾನ ದೊರೆಯುತ್ತದೆ ಎಂದು ಹೇಳಿದರು.

ತರೀಕೆರೆ ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ ಕರ್, ವಾಣಿ ಶ್ರೀನಿವಾಸ್, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಪುರಸಭೆ ಸದಸ್ಯರು, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಮುಖಂಡರಾದ ಜಗದೀಶ್, ಸಮೀವುಲ್ಲಾ ಷರೀಫ್. ಅಮ್ಜದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.11ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.