ತುಮಕೂರಿಗೆ ನೀರು ಹರಿಸುತ್ತಿದ್ದಾರೆ. ಹರಿಸಲಿ ನಮ್ಮದೇನು ಅಭ್ಯಂತರ ಇಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಜಿಲ್ಲೆಯಲ್ಲಿ ೨ ಲಕ್ಷದ ೨೦ ಸಾವಿರ ಎಕರೆಯಿಂದ ೩ ಲಕ್ಷ ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದರು. ಬಿಳಿಸುಳಿ ರೋಗದಿಂದಾಗಿ ಈ ಪ್ರಮಾಣ ಭಾರೀ ಇಳಿಕೆಯಾಗಿದೆ. ಕೃಷಿ ಇಲಾಖೆಗೆ ಈ ಬಗ್ಗೆ ಗಮನವೇ ಇಲ್ಲ. ಮತ್ತೆ ಜಿಲ್ಲಾಧಿಕಾರಿಗಳಿಗೆ ಪಕ್ಕಾ ಸರ್ವೆ ಮಾಡಿಸೋಕೆ ಯೋಗ್ಯತೆ ಇಲ್ಲ. ಅಂತ ಜಿಲ್ಲಾಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ. ಬರೀ ಭಾಷಣ ಮಾಡಿಕೊಂಡು ಇದ್ದಾರೆ ಎಂದು ಜಿಲ್ಲಾಧಿಕಾರಿಗಳ ಮೇಲೆ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಈ ಭಾಗದ ಜನಕ್ಕೆ ನೀರು ಕೊಡಬಾರದು ಅನ್ನೋ ದುರುದ್ದೇಶದಿಂದ ಗೊರೂರು ಡ್ಯಾಂನಲ್ಲಿ ನೀರು ಇದ್ದರೂ ಈ ಸರ್ಕಾರ ಇವತ್ತಿನವರೆಗೆ ನೀರು ಬಿಟ್ಟಿಲ್ಲ. ಹಲವು ವರ್ಷಗಳಿಂದ ಎರಡು ಬೆಳೆ ಬೆಳೆಯುತ್ತಿದ್ದ ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಕೆ.ಆರ್.ಪೇಟೆ ತಾಲೂಕಿನ ಅಚ್ಚುಕಟ್ಟು ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಅವರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಂತ್ರಿಯಾಗಿದ್ದ ಕಾಲದಲ್ಲಿ ಜೂನ್ ಮೊದಲನೇ ವಾರದಲ್ಲಿ ನೀರು ಬಿಡಿಸೋ ಕೆಲಸ ಮಾಡ್ತಾ ಇದ್ದೆ. ಉತ್ತರ ನಾಲೆ, ದಕ್ಷಿಣ ನಾಲೆ, ಶ್ರೀರಾಮದೇವರ ಉತ್ತರ ನಾಲೆಗಳಿಗೆ ಬೇಕಾಗಿರೋದು ಅರ್ಧ ಟಿಎಂಸಿ ಅಥವಾ ಮುಕ್ಕಾಲು ಟಿಎಂಸಿ ನೀರು. ನಿಮ್ಮ ಕೈಯಲ್ಲಿ ಅರ್ಧ ಟಿಎಂಸಿ ನೀರು ಕೊಡಲು ಆಗಲ್ಲ ಅಂದ್ರೆ ಬೆಳೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.