ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಆರ್‌ಓ ಘಟಕಗಳಿಗೂ ನೀರಿನ ಸಮಸ್ಯೆ ಎದುರಾಗಿದ್ದು, 209 ಘಟಕಗಳು ಸ್ಥಗಿತಗೊಂಡಿವೆ.
ನಗರದಲ್ಲಿ ನೀರಿನ ಸಮಸ್ಯೆಗೆ ಉಲ್ಬಣಗೊಳ್ಳುತ್ತಿದಂತೆ ನಗರದ ಜನರಿಗೆ ನಾನಾ ಸಮಸ್ಯೆಗಳು ಎದುರಾಗಿತ್ತಿವೆ. ಇದೀಗ ಶುದ್ಧ ಕುಡಿಯುವ ನೀರಿಗೂ ಬರ ಉಂಟಾಗಿದೆ. ನಗರದಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 209 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಮೊದಲಾದ ಕಾರಣದಿಂದ ಸ್ಥಗಿತಗೊಂಡಿವೆ ಎಂದು ಅಧಿಕೃತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.ಮನೆ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವ ಪರಿಣಾಮ ಸಾರ್ವಜನಿಕರು ಕಿಲೋ ಮೀಟರ್‌ಗಟ್ಟಲೇ ದೂರ ಹೋಗಿ ಶುದ್ಧ ಕುಡಿಯುವ ನೀರನ್ನು ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಬಂದ್:ಬಂದ್ ಆಗಿರುವ 209 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಬಿಬಿಎಂಪಿಯ ಕೇಂದ್ರ ಭಾಗದ ಮೂರು ವಲಯದಲ್ಲಿಯೇ ನೂರಕ್ಕೂ ಅಧಿಕ ಘಟಕಗಳು ಬಂದ್ ಆಗಿವೆ. ಈ ಪೈಕಿ ದಕ್ಷಿಣ ವಲಯದಲ್ಲಿ 58, ಪೂರ್ವ ವಲಯದಲ್ಲಿ 54 ಹಾಗೂ ಪಶ್ಚಿಮ ವಲಯದಲ್ಲಿ 44 ಘಟಕ ಬಂದ್ ಆಗಿವೆ. ಉಳಿದಂತೆ ಆರ್.ಆರ್.ನಗರ ವಲಯದಲ್ಲಿ 31, ಬೊಮ್ಮನಹಳ್ಳಿಯಲ್ಲಿ 9, ದಾಸರಹಳ್ಳಿಯಲ್ಲಿ 6, ಯಲಹಂಕದಲ್ಲಿ 5 ಹಾಗೂ ಮಹದೇವಪುರ ವಲಯದಲ್ಲಿ 2 ಘಟಕ ಬಂದ್ ಆಗಿವೆ.ಭಾರೀ ಕ್ಯೂ
ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವ ಪರಿಣಾಮ ನೀರು ಇರುವ ಘಟಕಗಳಿಗೆ ಜನರು ಮುಗಿ ಬಿದ್ದಿದ್ದಾರೆ. ಮತ್ತಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಸಣ್ಣ ಪ್ರಮಾಣದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಭಾರಿ ಉದ್ದದ ಸರತಿ ಸಾಲಿನಲ್ಲಿ ಗಂಟೆ ಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಯಂತೂ ರಾತ್ರಿ ಇಡೀ ನಿಂತು ನೀರು ಪಡೆಯಬೇಕಾಗಿದೆ.ಬಾಟಲಿ ನೀರಿಗೆ ಹೆಚ್ಚಿದ ಬೇಡಿಕೆಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ಹೆಚ್ಚಾಗುತ್ತಿದಂತೆ ಬಾಟಲಿ ನೀರು ಮಾರಾಟದ ವ್ಯಾಪಾರ ಹೆಚ್ಚಾಗಿದೆ. ಶೇ.30ರಷ್ಟು ಬಾಟಲಿ ನೀರಿನ ಮಾರಾಟ ಹೆಚ್ಚಾಗಿದೆ. ಇದರೊಂದಿಗೆ ಮನೆಯಲ್ಲಿ ಅಳವಡಿಕೆ ಮಾಡುವ ವಾಟರ್ ಫಿಲ್ಟರ್‌ಗಳಿಗೂ ಬೇಡಿಕೆ ಹೆಚ್ಚಾಗಿರುವುದು ಕಂಡು ಬರುತ್ತಿದೆ.ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಮತ್ತು ನೀರಿನ ವ್ಯವಸ್ಥೆಗೆ ಹಣ ಬಿಡುಗಡೆ ಮಾಡಲಾಗಿದೆ. ವಲಯ ಆಯುಕ್ತರು ಈ ಬಗ್ಗೆ ಕ್ರಮ ವಹಿಸುತ್ತಿದ್ದಾರೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ.ಶುದ್ಧ ಕುಡಿಯುವ ನೀರಿನ ಘಟಕಗಳ ವಿವರವಲಯಒಟ್ಟುಕಾರ್ಯಬಂದ್ಪೂರ್ವ17812454ಪಶ್ಚಿಮ27022644ದಕ್ಷಿಣ21115358ಬೊಮ್ಮನಹಳ್ಳಿ81729ಆರ್.ಆರ್.ನಗರ14611531ಮಹದೇವಪುರ37352ಯಲಹಂಕ93885ದಾಸರಹಳ್ಳಿ36306ಒಟ್ಟು1,052843209ನೀರಿನ ಸಮಸ್ಯೆ ಐಪಿಎಲ್ ಮೇಲೆ ಪರಿಣಾಮ ಬೀರಲ್ಲಬೆಂಗಳೂರು: ನಗರದಲ್ಲಿ ಉದ್ಭವವಾಗಿರುವ ನೀರಿನ ಸಮಸ್ಯೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಸ್ಪಷ್ಟನೆ ನೀಡಿದೆ.ಮಾ.25ರಿಂದ ಏ.2ರ ವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 3 ಪಂದ್ಯಗಳು ನಿಗದಿಯಾಗಿವೆ. ಆದರೆ ನೀರಿನ ಅಭಾವ ಇರುವುದರಿಂದ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಸಿಎ ಸಿಇಒ ಶುಭೇಂದು ಘೋಷ್, ‘ನಮಗೆ ನೀರಿನ ಅಭಾವವಿಲ್ಲ. ನೀರಿನ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದೇವೆ’ ಎಂದಿದ್ದಾರೆ.ನಾವು ಈಗಾಗಲೇ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ನೀರು ಉಪಯೋಗಿಸುತ್ತಿದ್ದೇವೆ. ಅದೇ ನೀರಿನಿಂದ ಔಟ್‌ಫೀಲ್ಡ್ ಹಾಗೂ ಪಿಚ್ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿ ಪಂದ್ಯಗಳಿಗೆ ನಮಗೆ 10,000-15000 ಲೀಟರ್ ನೀರು ಬೇಕಾಗಬಹುದು. ಅದನ್ನು ಕೂಡಾ ಕ್ರೀಡಾಂಗಣದಲ್ಲಿರುವ ನೀರು ಶುದ್ಧೀಕರಣ ಘಟಕದಿಂದ ಉಪಯೋಗಿಸುತ್ತೇವೆ. ನಾವು ಯಾವುದೇ ನೀರಿನ ಉದ್ದೇಶಕ್ಕಾಗಿ ಅಂತರ್ಜಲವನ್ನು ಬಳಸಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.25ಕ್ಕೆ ಪಂಜಾಬ್, 29ಕ್ಕೆ ಕೋಲ್ಕತಾ ಹಾಗೂ ಏ.2ಕ್ಕೆ ಲಖನೌ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ.ಈಜು ಕೊಳಕ್ಕೆ ಕಾವೇರಿ ನೀರು ಹರಿಸಿದರೆ 5 ಸಾವಿರ ದಂಡಕನ್ನಡಪ್ರಭ ವಾರ್ತೆ ಬೆಂಗಳೂರುನೀರಿನ ಸಮಸ್ಯೆ ಉಲ್ಬಣ ಆಗಿರುವುದರಿಂದ ನಗರದ ಈಜುಕೊಳಗಳಿಗೆ ಕಾವೇರಿ ನೀರನ್ನು ಬಳಸಬಾರದು ಎಂದು ಬೆಂಗಳೂರು ಜಲಮಂಡಳಿ ಆದೇಶಿಸಿದ್ದು, ಈ ನಿಯಮ ಉಲ್ಲಂಘಿಸಿದಲ್ಲಿ ₹5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.ನಗರದ ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿರುವುದರಿಂದ ನೀರನ್ನು ಪೋಲಾಗುವುದನ್ನು ತಡೆಗಟ್ಟಲು ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈಜುಕೊಳ ಉದ್ದೇಶಗಳಿಗೆ ಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ಆರಂಭಿಕವಾಗಿ ₹5 ಸಾವಿರ ದಂಡ, ನಂತರವೂ ಉಲ್ಲಂಘಿಸಿದಲ್ಲಿ ₹5,500 ದಂಡ ವಿಧಿಸುವ ಜೊತೆಗೆ ಈಜುಕೊಳದ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದೆ. ಈ ನಿಯಮ ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿರುವವರಿಗ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.1916ಕ್ಕೆ ಕರೆ ಮಾಡಿನಿರ್ಬಂಧಗಳನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ದೂರವಾಣಿ 1916ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದೆ.