ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು

| Published : Jul 08 2024, 12:32 AM IST

ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಉಡಗಣೆ ತಾಳಗುಂದ ಏತ ನೀರಾವರಿ ಯೋಜನೆ ಅಡಿಯಲ್ಲಿ ತಾಲೂಕಿನ ಚಿಕ್ಕೇರೂರ ಶೆಟ್ಟರ ಕೆರೆಗೆ ಹಾಗೂ ದೊಡ್ಡ ಕೆರೆಗೆ ನೀರು ಹರಿಸಲು ಮಾಜಿ ಸಚಿವ ಬಿ.ಸಿ. ಪಾಟೀಲ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭವಾಗಿದೆ.

ಹಿರೇಕೆರೂರ: ಉಡಗಣೆ ತಾಳಗುಂದ ಏತ ನೀರಾವರಿ ಯೋಜನೆ ಅಡಿಯಲ್ಲಿ ತಾಲೂಕಿನ ಚಿಕ್ಕೇರೂರ ಶೆಟ್ಟರ ಕೆರೆಗೆ ಹಾಗೂ ದೊಡ್ಡ ಕೆರೆಗೆ ನೀರು ಹರಿಸಲು ಮಾಜಿ ಸಚಿವ ಬಿ.ಸಿ. ಪಾಟೀಲ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಕೆಲ ದಿನಗಳ ಹಿಂದೆ ಬಿ.ಸಿ. ಪಾಟೀಲ್ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಈ ಯೋಜನೆಯಲ್ಲಿ ಕೆರೆ ತುಂಬಿಸುವಂತೆ ಒತ್ತಾಯಿಸಿದ್ದರು. ಅಧಿಕಾರಿಗಳು ಚಿಕ್ಕೇರೂರ ಶೆಟ್ಟರ ಕೆರೆಗೆ ಹಾಗೂ ದೊಡ್ಡ ಕೆರೆಗಳಿಗೆ ನೀರು ಹರಿಸಿದ್ದರು. ಅದರಿಂದ ಭಾನುವಾರ ಮಾಜಿ ಸಚಿವ ಬಿ.ಸಿ. ಪಾಟೀಲ್ ಭೇಟಿ ನೀಡಿ ಕೆರೆಗಳಿಗೆ ನೀರು ಬರುತ್ತಿರುವುದನ್ನು ವೀಕ್ಷಿಸಿದ್ದರು.ನಂತರ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹೊಸೂರು ಉಡತಡಿ ತಾಳಗುಂದ ಏತನೀರಾವರಿ ಯೋಜನೆಯಲ್ಲಿ ತಾಲೂಕಿನ ಚನ್ನಳ್ಳಿ ಹಾಗೂ ಚಿಕ್ಕೇರೂರಿನ ಶೆಟ್ಟರ ಮತ್ತು ದೊಡ್ಡಕೆರೆ ತುಂಬಿಸಲು ಅವಕಾಶವಿದೆ. ಇನ್ನು ಉಳಿದ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಬೇಕು. ಬೇಕಾಬಿಟ್ಟಿ ಬರಿ ನಾಲ್ಕು ಐದು ದಿನ ನೀರು ಹರಿಸಿ ಬಂದ್ ಮಾಡಿದರೆ ಸರಿಯಲ್ಲ. ಯೋಜನೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.ಈ ವೇಳೆ ರವಿ ಶಂಕರ ಬಾಳಿಕಾಯಿ, ಚಂದ್ರಪ್ಪ ಎಲಿ, ಮಹೇಶ ಮತ್ತಿಹಳಿ, ಆನಂದ ಬಣಕಾರ, ಮಲ್ಲಿಕಾರ್ಜುನ ಬಣಕಾರ ಹಾಗೂ ಗ್ರಾಮದ ರೈತರು ಮುಖಂಡರಿದ್ದರು,