-ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ । ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರಕ್ಕೆ ಸಚಿವರ ಭೇಟಿ ಪರಿಶೀಲನೆ
-----ಕನ್ನಡಪ್ರಭ ಕೊಡೇಕಲ್
ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು ಮುಂಗಾರು ಕೊರತೆಯಿಂದ ಈ ಭಾರಿ ರಾಜ್ಯದ ಬಹುತೇಕ ಕಡೆ ಬರದ ಛಾಯೆ ಆವರಿಸಿದೆ.
ಆಲಮಟ್ಟಿ ಹಾಗೂ ನಾರಾಯಣಪುರದ ಬಸವಸಾಗರ ಅವಳಿ ಜಲಾಶಯಗಳಲ್ಲಿ ಕೃಷಿಗಾಗಿ ಕಾಲುವೆಗಳಿಗೆ ನೀರು ಬಿಡಲು ಕೇವಲ 10 ಟಿಎಂಸಿಯಷ್ಟು ಲಭ್ಯವಿದೆ ಒಂದೊಮ್ಮೆ ಕೃಷ್ಣಾ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅವಳಿ ಜಲಾಶಯಗಳು ಸಂಪೂರ್ಣ ಭರ್ತಿಯಾದರೆ ಮಾತ್ರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸಲು ಯೋಚಿಸಲಾಗುವದು ಎಂದು ಸಚಿವರು ಹೇಳಿದರು.
ಒಂದೊಮ್ಮೆ ಮಹಾರಾಷ್ಟದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದರೆ ನಿತ್ಯ 10 ಟಿಎಂಸಿಯಷ್ಟು ನೀರಿನ ಸಂಗ್ರಹ ಹೆಚ್ಚಾದರೆ ಅವಳಿ ಜಲಾಶಯಗಳು ಭರ್ತಿಯಾಗಲಿವೆ. ಆಗ ಕಾಲುವೆ ಜಾಲಗಳಿಗೆ ನೀರು ಹರಿಸಲು ಯೋಚಿಸಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಈಗಾಗಲೇ ಸಿಎಂ ಡಿ.ಕೆ ಶಿವಕುಮಾರ್ ಅವರು ಜಲಾಶಯ ನೀರು ನಂಬಿ ವ್ಯವಸಾಯ ಮಾಡದಂತೆ ರೈತರಲ್ಲಿ ಮನವಿ ಮಾಡಿದ್ದಾರೆ.ಜೊತೆಗೆ ದೇಶದ 12 ದೊಡ್ಡ ರಾಜ್ಯಗಳಿಗೆ ಬರಗಾಲ ಆವರಿಸಿದೆ ರಾಜ್ಯದ ಅಂದಾಜು 175 ಬರಗಾಲ ಪೀಡಿತ ತಾಲ್ಲೂಕುಗಳಾಗಿವೆ ಎಂದು ವಿವರಿಸಿದ ಸಚಿವರು ಬಸವಸಾಗರ ಜಲಾಶಯದ ಮುಂಭಾಗದಲ್ಲಿ ಆಲಮಟ್ಟಿ ಮಾದರಿಯ ಸುಂದರ ಉದ್ಯಾವನ ನಿರ್ಮಿಸಲು ಕೇಂದ್ರ ಸರ್ಕಾರದ ಡ್ರಿಪ್ ಯೋಜನೆ ಅಡಿಯಲ್ಲಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವಾಗಿ ಉದ್ಯಾನ ನಿರ್ಮಾಣಕ್ಕೆ ಮುಂದಾಗುವದಾಗಿ ಹೇಳಿದರು.
ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಪ್ರಗತಿ ಹಂತದದಲ್ಲಿರುವ ಬೂದಿಹಾಳ ಪೀರಾಪುರ ಎರಡನೇ ಹಂತದ ಕಾಮಗಾರಿ ವೀಕ್ಷಣೆ ಮಾಡಿ ಕಾರ್ಯವಿಧಾನದ ಕುರಿತು ಪರಿವೀಕ್ಷಣೆ ಮಾಡಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ರೈತರು ಸೇರಿದಂತೆ ಸಾರ್ವಜನಿಕರು ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು. ಮುಖ್ಯಮಂತ್ರಿಯವರು ಈ ಹಿಂದೆ ನೀಡಿದ್ದ ಕೆಲವು ಭರವಸೆಗಳ ಬಗ್ಗೆ ಮತ್ತು ಅವುಗಳ ಅನುಷ್ಠಾನದ ಕುರಿತು ಚರ್ಚೆ ನಡೆಯಿತು. ಜಲಾಶಯದ ಅಭಿವೃದ್ಧಿ ಬೇಡಿಕೆಗಳು ಮತ್ತು ನದಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸಹ ಸ್ಥಳೀಯ ಸಚಿವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ನಿಗಮದ ಎಂಡಿ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಎಂಜಿನಿಯರ್ ಜಿ.ಜಿ.ಪವಾರ. ಜಿಲ್ಲಾಧಿಕಾರಿ ರಾಹುಲ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರತ್ವಿಕ್ ಶಂಖರ್, ಎಡಿಶನಲ್ ಎಸ್ಪಿ ಧರಣೀಶ, ಎಸ್.ಇ ರಮೇಶ ರಾಠೋಡ, ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತ ಕೊಣ್ಣೂರ್, ಡಿವೈಎಸ್‌ಪಿ ಜಾವೇದ ಇನಾಮದಾರ, ರಾಜಾ ಕುಮಾರನಾಯಕ, ರಾಜಾ ಸುಶಾಂತ ನಾಯಕ, ಯಂಕೋಬ ಯಾದವ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಮಲ್ಲಣ್ಣ ಸಾಹು ಮುಧೋಳ, ಗುಂಡಪ್ಪ ಸೊಲ್ಲಾಪುರ, ಗೋಪಾಲ ದೊರಿ, ರವಿಚಂದ್ರ ಆಲ್ದಾಳ, ದೊಡ್ಡದೇಸಾಯಿ ದೇವರಗೋನಾಲ, ಎ.ಜಿ ಕುಂಬಾರ, ತಿಮ್ಮಣ್ಣ ಮಿಂಚೇರಿ, ಅಮರೇಶ ಕೋಳೂರ, ಶಾಂತಪ್ಪ ಮೇಸ್ತಾಕ, ಗಣಪತಿ ನಾಯಕ, ಸಂತೋಷ ಪವಾರ ರಾಮೂನಾಯಕ ಇದ್ದರು.....ಬಾಕ್ಸ್....
ಅವಳಿ ಜಲಾಶಯಗಳಲ್ಲಿನ ಡೆಡ್ ಸ್ಟೋರೇಜ್ ಹೊರತುಪಡಿಸಿ 86 ಟಿಎಂಸಿ ನೀರಿನ ಸಂಗ್ರಹ ಇದೆ ಇದರಲ್ಲಿ ಕುಡಿಯಲು, ಆರ್ಟಿಪಿಸಿ ಸೇರಿ ಇತರೆ ಉದ್ಯಮಿಗಳಿಗೆ, ಬ್ರಿಜ್ ಕಮ್ ಬ್ಯಾರೆಜುಗಳಿಗೆ, ಕೆರೆ ತುಂಬುವುದು, ಬಾಷ್ಪೀಕರಣ, ನದಿ ಪಾತ್ರಕ್ಕೆ ನೀರು ಹರಿಸುವುದು ಸೇರಿ ಇತರೆ ಬೇಡಿಕೆ ಅನುಗುಣವಾಗಿ ವಾರ್ಷಿಕವಾಗಿ 76 ಟಿಎಂಸಿ ಯಷ್ಟು ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಕಾಲುವೆ ನೀರು ಕೊಡಲು ಆಗುವದಿಲ್ಲ. ಒಂದೊಮ್ಮೆ ಆಗಸ್ಟ್ ವೇಳೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಸಧ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಅಂದಾಜು 40 ಸಾವಿರ ಕ್ಯೂಸೆಕ್ ಒಳಹರಿವು ಇದೆ, ನಿತ್ಯ ಜಲಾಶಯದಲ್ಲಿ 3 ರಿಂದ 4 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ, ಇದೇ ತರಹನಾಗಿ ಒಳಹರಿವು ಬಂದಲ್ಲಿ ಜಲಾಶಯ ಶೀಘ್ರವೇ ಭರ್ತಿಯಾಗಲಿದೆ ಎಂದರು.ಪೊಟೋ ಶಿರ್ಷಿಕೆ01
ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ರಾಜ್ಯದ ಜಲಸಂಪನ್ಮೂಲ ಸಚಿವ ರಾಮಲಿಂಗಾರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರಾದ ರಾಜಾ ವೇಣುಗೋಪಾಲನಾಯಕ, ಅಪ್ಪಾಜಿ ನಾಡಗೌಡ, ನಿಗಮದ ಎಂಡಿ ಕೃಷ್ಣಮೂರ್ತಿ ಕುಲಕರ್ಣಿ ಇದ್ದರು.----
ಪೊಟೋ ಶಿರ್ಷಿಕೆ02:ಬಸವಸಾಗರ ಜಲಾಶಯದ ಕುರಿತಂತೆ ಸಮಗ್ರ ಮಾಹಿತಿಯುಳ್ಳ ಕಿರುಚಿತ್ರವನ್ನು ಸಚಿವರು ವಿಕ್ಷೀಸಿದರು.