ಚಿಕ್ಕಮಗಳೂರುಕೇವಲ 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ಒಂದು ನೂರು ಎಕರೆಯಷ್ಟು ಕೃಷಿ ಭೂಮಿಗೆ ನೀರುಣಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಚಿಕ್ಕಮಗಳೂರು ಮೂಲದ ವಾಟರ್‌ ಜೆಟ್ ಎಂಜಿನಿಯರ್ಸ್ ಮತ್ತು ಫಾರಂ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರೇಹಳ್ಳಿಯ ಕಾಫಿ ತೋಟದಲ್ಲಿ ಯಶಸ್ವಿಯಾಗಿ ಪರಿಚಯಿಸಿದೆ.

ಸಕಲೇಶಪುರ ತಾಲೂಕಿನ ಕಿರೇಹಳ್ಳಿಯ ಕಾಫಿ ತೋಟದಲ್ಲಿ ಯಶಸ್ವಿ ಪ್ರಾತ್ಯಕ್ಷಿಕೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೇವಲ 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ಒಂದು ನೂರು ಎಕರೆಯಷ್ಟು ಕೃಷಿ ಭೂಮಿಗೆ ನೀರುಣಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಚಿಕ್ಕಮಗಳೂರು ಮೂಲದ ವಾಟರ್‌ ಜೆಟ್ ಎಂಜಿನಿಯರ್ಸ್ ಮತ್ತು ಫಾರಂ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರೇಹಳ್ಳಿಯ ಕಾಫಿ ತೋಟದಲ್ಲಿ ಯಶಸ್ವಿಯಾಗಿ ಪರಿಚಯಿಸಿದೆ.

ಇಡೀ ಪ್ರಪಂಚ ಮತ್ತು ದೇಶದಲ್ಲೇ ಮೊದಲ ಬಾರಿಗೆ ಇಂತಹ ಒಂದು ತಂತ್ರಗಾರಿಕೆಯನ್ನು ಮೊಟ್ಟದ ಮೊದಲ ಬಾರಿಗೆ ಆನಂದ್‌ ಫರೇರಾ ಅವರ ಸುಂಡೇಕೆರೆ ಬಳಿ ಕಿರೇಹಳ್ಳಿಯ ‘ಜೋಸ್‌ ಇಕೋ ಫ್ರೆಂಡ್ಲಿ ಕಾಫಿ ಪ್ಲಾಂಟೇಶನ್‌’ನಲ್ಲಿ ಕಾರ್ಯಗತಗೊಳಿಸಲಾಗಿದೆ.

ಈ ತಂತ್ರಜ್ಞಾನಕ್ಕೆ ಆಷ್ಟ್ರೀಯನ್ ಕಂಪನಿ ಕೋಮೆಟ್‌ ಸಹಯೋಗದಲ್ಲಿ ತಯಾರಿಸರುವ ಸ್ಪ್ರಿಂಕ್ಲರ್, ಕಿಲ್ಲೋಸ್ಕರ್‌ ಸಂಸ್ಥೆ ಜನರೇಟರ್‌, ಪಂಪ್‌, ಪೈಪ್‌ ಮೊದಲಾದ ಪರಿಕರಗಳನ್ನು ವಿವಿಧ ಸಂಸ್ಥೆಗಳು ಸಹಕಾರದಲ್ಲಿ ರೂಪಿಸಲಾಗಿದೆ.

ಗುರುವಾರ ಆಯೋಜಿಸಿದ್ದ ಸ್ಪ್ರಿಂಕ್ಲರ್ ಪ್ರಾತ್ಯಕ್ಷಿಕೆಗೆ ಸಾವಿರಾರು ಕಾಫಿ ಬೆಳೆಗಾರರ ಸಮ್ಮುಖದಲ್ಲಿ ಹಾಸನ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಚಾಲನೆ ನೀಡಿದರು.

ಏಕಕಾಲಕ್ಕೆ ಸುಮಾರು 50 ಎಚ್‌ಪಿಯ 10 ಪಂಪ್‌ಗಳು ನೀರೆತ್ತಿ 100 ಎಕರೆ ಕಾಫಿ ತೋಟಕ್ಕೆ ರೈನಿ ಜೆಟ್‌ ಗಳ (ಸ್ಪ್ರಿಂಕ್ಲರ್) ಮೂಲಕ ನೀರು ಚಿಮ್ಮಿಸಲು ಆರಂಭಿಸಿದವು. ನೋಡ ನೋಡುತ್ತಿದ್ದಂತೆ ಇಡೀ ಕಾಫಿ ತೋಟದಲ್ಲಿ ವಿಶೇಷ ಮೈಕ್ರೋ ಕ್ಲೈಮೆಟ್‌ ಸೃಷ್ಟಿಯಾಗಿ ತೋಟದಲ್ಲಿ ಸಹಜವಾಗೇ ಮಳೆ ಸುರಿದ ವಿಶೇಷ ಅನುಭವ ಉಂಟಾಯಿತು.

ಸಮಾರಂಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಅಧ್ಯಕ್ಷೆ ಹಲಸೆ ಶಿವಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ವಿಠಲ್‌ ಮೂರ್ತಿ, ಜೋಸ್‌ ಇಕೋ ಫ್ರೆಂಡ್ಲಿ ಕಾಫಿ ಪ್ಲಾಂಟೇಶನ್‌’ನ ಆನಂದ್‌ ಫೆರೇರಾ, ಗೀತಾ ಫೆರೇರಾ, ‘ವಾಟರ್‌ ಜೆಟ್‌ಎಂಜಿನಿಯರ್ಸ್‌’ ಸಂಸ್ಥೆ ಸಹ ಪಾಲುದಾರರಾದ ವಿಜಯ್‌ ರಾಜ್‌, ಡಿ.ಎಚ್‌.ನಟರಾಜ್‌ ಮೊದಲಾದವರಿದ್ದರು.

---ಕೋಟ್‌---

ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರಿಗೆ ಯುನಿಫಾರಂ ರೈನಿ ಜೆಟ್‌ ಕೊರತೆ ಇತ್ತು. ಅಧ್ಯಯನ ನಡೆಸಿ ವಿಶ್ವದ ಮಳೆ ರೀತಿಯಲ್ಲೇ ನೀರು ಚಿಮ್ಮಿಸುವ ಆಷ್ಟ್ರೀಯನ್ ಕಂಪನಿ ರೈನಿಜೆಟ್‌ ಬಗ್ಗೆ ತಿಳಿದು ಆಷ್ಟ್ರೀಯನ್‌ ದೇಶದಿಂದ ರೈನ್‌ ಜೆಟ್‌ ಆಮದು ಮಾಡಿಕೊಂಡು ಬಳಸಿದಾಗ ಅತ್ಯುತ್ತಮ ಫಲಿತಾಂಶ ಸಿಕ್ಕಿದೆ. ಕಾಫಿ ಹೂವು, ಗಿಡಗಳಿಗೆ ಯಾವುದೇ ತೊಂದರೆಯಾಗದಂತೆ ಈ ರೈನ್‌ ಗನ್‌ ಕಾರ್ಯ ನಿರ್ವಹಿಸಲಿದೆ. ದೊಡ್ಡ ಮಾದರಿಯಲ್ಲಿ ಮಾತ್ರವಲ್ಲ ಸಣ್ಣ ರೈತರಿಗೂ ಅಗತ್ಯವಿರುವ ರೈನಿ ಜೆಟ್‌, ಪಂಪ್‌ ವ್ಯವಸ್ಥೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಿಸುತ್ತೇವೆ.

- ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಮುಖ್ಯಸ್ಥರು, ವಾಟರ್‌ ಜೆಟ್ ಎಂಜಿನಿಯರ್ಸ್ ಮತ್ತು ಫಾರಂ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್, ಚಿಕ್ಕಮಗಳೂರು

--ಕೋಟ್‌--

ಆಷ್ಟ್ರೀಯನ್ ಕಂಪನಿ ರೈನ್‌ ಗನ್ ಕಾಫಿ ಬೆಳೆಗಾರರ ಗೇಮ್‌ ಚೇಂಜರ್ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿಂದೆ ಬಳಕೆ ಮಾಡುತ್ತಿದ್ದ ರೈನ್‌ ಗನ್‌ಗಳಲ್ಲಿ ಇಷ್ಟೊಂದು ಗುಣಮಟ್ಟದ ನೀರು ಚಿಮ್ಮಿ ಸುವ ಕಾರ್ಯ ಆಗುತ್ತಿರಲಿಲ್ಲ. ಕಾಫಿ ತೋಟಕ್ಕೆ ನೀರು ಪೂರೈಕೆಗೆ ವಾಟರ್‌ ಜೆಟ್‌ಎಂಜಿನಿಯರ್ಸ್‌ ಮತ್ತು ರೈನಿ ರಿಸರ್ಚ್‌ ಸಂಸ್ಥೆ ನಿರ್ಮಿಸಿದ ಜಾಕ್‌ವೆಲ್‌ ವಿಶೇಷ. ಇದನ್ನು ನಗರ ಮತ್ತು ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಬಳಕೆ ಮಾಡಬಹುದಾದ ಸುಧಾರಿತ ತಂತ್ರಜ್ಞಾನವಾಗಿದೆ.

- ನವೀನ್‌ ರಾಜ್‌ ಸಿಂಗ್‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಹಾಸನ ಜಿಲ್ಲೆ

--ಕೋಟ್‌---

ಕಾಫಿ ಮಂಡಳಿ ಈ ತಂತ್ರಜ್ಞಾನದ ಒಂದು ಮಾದರಿ ನಿರ್ಮಾಣ ಮಾಡಿದರೆ ಕಾಫಿ ಬೆಳೆಗಾರರಿಗೆ ಮಂಡಳಿಯಿಂದ ಸಹಾಯಧನ ನೀಡಿ ಸಹಕಾರ ನೀಡುವ ಕೆಲಸ ಮಾಡಬಹುದು. ಕಾಫಿ ಮಂಡಳಿ ಸೌಲಭ್ಯವನ್ನು ಬೆಳೆಗಾರರು ಸದುಪಯೋಗ ಮಾಡಿಕೊಳ್ಳಿ.

-ಎಂ.ಜೆ. ದಿನೇಶ್ ಅಧ್ಯಕ್ಷ, ಕಾಫಿ ಮಂಡಳಿ

ಫೋಟೋಸ್ಪ್ರಿಂಕ್ಲರ್ ಪ್ರಾತ್ಯಕ್ಷಿಕೆಗೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಚಾಲನೆ ನೀಡಿದರು. ಈ ವೇಳೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಹಲಸೆ ಶಿವಣ್ಣ, ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಆನಂದ್‌ ಫೆರೇರಾ ಮೊದಲಾದವರಿದ್ದರು.

ಫೋಟೋ

ಕಾಫಿ ತೋಟದಲ್ಲಿ ವಿನೂತ ತಂತ್ರಜ್ಞಾನದ ಸ್ಪ್ರಿಂಕ್ಲರ್ ನಿಂದ ಮಳೆ ವಾತಾವರಣ ಸೃಷ್ಟಿಯಾಗಿರುವುದು.

ಫೋಟೋ

ಜಾಕ್‌ವೆಲ್‌ಗೆ ಅಳವಡಿಕೆ ಮಾಡಿರುವ 50 ಎಚ್‌ಪಿ ಸಾಮರ್ಥ್ಯದ 10 ಪಂಪ್‌