ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಮಾಡುವ ಮೂಲಕ ನೀಡಿದ್ದೇವೆ ಉತ್ತರ

| Published : Oct 08 2023, 12:02 AM IST

ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಮಾಡುವ ಮೂಲಕ ನೀಡಿದ್ದೇವೆ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಮಾಡುವ ಮೂಲಕ ನೀಡಿದ್ದೇವೆ ಉತ್ತರ
ರಾಹುಲ್‌ ಗಾಂಧಿಗೆ ಅವಮಾನ ಖಂಡಿಸಿ ನಡೆದ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ರಾಮಚಂದ್ರಪ್ಪ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಮಾಡುವ ಮೂಲಕ ಉತ್ತರ ನೀಡಿದ್ದೇವೆ ಎಂದು ಕರ್ನಾಟಕ ಪ್ರದೇಶ ಸಮಿತಿ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹೇಳಿದ್ದಾರೆ. ರಾಹುಲ್ ಗಾಂಧಿಯವರನ್ನು ಅವಮಾನಿಸಿರುವವರ ವಿರುದ್ಧ ಶನಿವಾರ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ರಾಹುಲ್ ಗಾಂಧಿಯವರನ್ನು ರಾವಣನಿಗೆ ಹೋಲಿಸಿರುವ ಬಿಜೆಪಿಯವರು ಯಾವ ಸಂಸ್ಕೃತಿಯವರು ಎಂದು ಹೇಳಬೇಕು. ಅವರಿಗೆ ಸಂಸ್ಕೃತಿಯೇ ಇಲ್ಲ. ಜಾತಿ, ಭಾಷೆ, ಧರ್ಮಗಳ ನಡುವೆ ವಿಷಬೀಜ ಬಿತ್ತಿ, ಸಮಾಜ ಒಡೆಯುವುದೇ ಬಿಜೆಪಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು. ಸಾರ್ವಜನಿಕವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಸಿ.ಟಿ ರವಿ ಅವರನ್ನು ಸೋಲಿಸುವ ಮೂಲಕ ಇಲ್ಲಿನ ಜನರು ತಕ್ಕ ಪಾಠ ಕಲಿಸಿದ್ದಾರೆ, ಅದೇ ರೀತಿ ರಾಜ್ಯದಲ್ಲಿಯೂ ಬಿಜೆಪಿಯನ್ನು ಸೋಲಿಸಿ ಜನರು ಪಾಠ ಕಲಿಸಿದ್ದಾರೆ, ಆದರೂ ಬಿಜೆಪಿಯವರಿಗೆ ಬುದ್ಧಿ ಬಂದಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಇಲ್ಲದಂತಾಗಿದೆ, ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿಯವರಿಗೆ ಬಿಜೆಪಿ ಮುಕ್ತ ದಕ್ಷಿಣ ಭಾರತ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ರಾಹುಲ್ ಗಾಂಧಿಯವರ ಜನಪ್ರಿಯತೆಯಿಂದ ಆತಂಕದಲ್ಲಿ ಇರುವ ಬಿಜೆಪಿಯವರು ರಾಹುಲ್ ಗಾಂಧಿಯವರನ್ನು ರಾವಣನಿಗೆ ಹೋಲಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಭಾರತ್ ಜೋಡೋ ನಂತಹ ಕಾರ್ಯಕ್ರಮಗಳ ಮೂಲಕ ಇಡೀ ದೇಶದ ಜನ ರಾಹುಲ್ ಗಾಂಧಿ ಪರವಾಗಿದ್ದು ಮುಂದಿನ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆ ನಂತರ ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎಲ್ ಮೂರ್ತಿ, ಎಚ್.ಪಿ, ಮಂಜೇಗೌಡ, ಹಿರೇಮಗಳೂರು ರಾಮಚಂದ್ರ, ತನುಜ್‌ಕುಮಾರ್‌ ನಾಯ್ಡು, ಎಂ.ಡಿ. ರಮೇಶ್, ಎಸ್.ಪೇಟೆ ಸತೀಶ್, ಮಹಮ್ಮದ್ ಹನೀಫ್, ಮಹಮ್ಮದ್ ಅಕ್ಬರ್, ಸಿ.ಸಿ ಮಧುಗೌಡ, ಜಯರಾಜ್ ಅರಸ್, ಎಂ.ಸಿ. ಶಿವಾನಂದಸ್ವಾಮಿ, ಪ್ರಕಾಶ್ ರೈ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ---ಬಾಕ್ಸ್‌--- ಜನಪ್ರಿಯತೆ ಸಹಿಸದೆ ಅಪಪ್ರಚಾರ ರಾಹುಲ್ ಗಾಂಧಿಯವರ ಜನಪ್ರಿಯತೆ ಸಹಿಸಲಾರದೆ ಭಯ ಭೀತರಾಗಿರುವ ಬಿಜೆಪಿಯವರು ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ತಿಳಿಸಿದರು. 7 ಕೆಸಿಕೆಎಂ 4 ರಾಹುಲ್ ಗಾಂಧಿಯವರನ್ನು ಅವಮಾನಿಸಿರುವವರ ವಿರುದ್ಧ ಶನಿವಾರ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.