ನಾವು ಜಗತ್ತಿನಲ್ಲಿಯೇ ಅತ್ಯಂತ ವಿದ್ಯಾವಂತರಾಗುವತ್ತ ದಾಪುಗಾಲಿಡಬೇಕಾಗಿದೆ

| Published : Feb 16 2025, 01:47 AM IST

ನಾವು ಜಗತ್ತಿನಲ್ಲಿಯೇ ಅತ್ಯಂತ ವಿದ್ಯಾವಂತರಾಗುವತ್ತ ದಾಪುಗಾಲಿಡಬೇಕಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಲ್ಲಿನ ಕ್ರಾಂತ್ರಿಕಾರಿ ಬೆಳವಣಿಗೆಗಳು, ವಿಶ್ವದಲ್ಲಿಯೇ ಶೈಕ್ಷಣಿಕ ಸ್ಪರ್ಧೆಯನ್ನು ಹುಟ್ಟುಹಾಕಿವೆ. ಕೇವಲ ಕಾಲೇಜು ಕ್ಲಸ್ಟರ್ ಸೇರಿದಂತೆ ರಾಜ್ಯಕ್ಕೆ ಸೀಮಿತವಾಗಿದ್ದ ಸ್ಪರ್ಧೆ ಇದೀಗ ವಿಶ್ವವ್ಯಾಪಿ ಹಮ್ಮಿಕೊಂಡಿದ್ದು ನಾವು ಜಗತ್ತಿನಲ್ಲಿಯೇ ಅತ್ಯಂತ ವಿದ್ಯಾವಂತರಾಗುವತ್ತ ದಾಪುಗಾಲಿಡಬೇಕಾಗಿದೆ ಎಂದು ರಾಣಿಬೆನ್ನೂರ ಬಿ.ಕೆ. ಗುಪ್ತ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬ್ಯಾಡಗಿ: ಶಿಕ್ಷಣದಲ್ಲಿನ ಕ್ರಾಂತ್ರಿಕಾರಿ ಬೆಳವಣಿಗೆಗಳು, ವಿಶ್ವದಲ್ಲಿಯೇ ಶೈಕ್ಷಣಿಕ ಸ್ಪರ್ಧೆಯನ್ನು ಹುಟ್ಟುಹಾಕಿವೆ. ಕೇವಲ ಕಾಲೇಜು ಕ್ಲಸ್ಟರ್ ಸೇರಿದಂತೆ ರಾಜ್ಯಕ್ಕೆ ಸೀಮಿತವಾಗಿದ್ದ ಸ್ಪರ್ಧೆ ಇದೀಗ ವಿಶ್ವವ್ಯಾಪಿ ಹಮ್ಮಿಕೊಂಡಿದ್ದು ನಾವು ಜಗತ್ತಿನಲ್ಲಿಯೇ ಅತ್ಯಂತ ವಿದ್ಯಾವಂತರಾಗುವತ್ತ ದಾಪುಗಾಲಿಡಬೇಕಾಗಿದೆ ಎಂದು ರಾಣಿಬೆನ್ನೂರ ಬಿ.ಕೆ. ಗುಪ್ತ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದ ಎಸ್.ಜೆ.ಜೆ.ಎಂ.ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣಕ್ಕೆ ಸೈದ್ಧಾಂತಿಕ ಹಿನ್ನೆಲೆಯಿದೆ. ಗಂಡಿರಲಿ ಹೆಣ್ಣಿರಲಿ ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದವ ರೆಗೂ ಕನಿಷ್ಠ ವಿದ್ಯಾರ್ಹತೆ ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು, ಪ್ರಾಯೋಗಿಕ ಬದುಕಿಗೆ ಶೈಕ್ಷಣಿಕ ಜ್ಞಾನ ವೊಂದೇ ಅಂತಿಮ ಪರಿಹಾರ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಾಲತೇಶ ಬಂಡೆಪ್ಪನವರ ಮಾತನಾಡಿ, ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಬದುಕಿನ ಭದ್ರಬುನಾದಿಯಾಗಿದ್ದು ಯಾವುದೇ ವಿದ್ಯಾರ್ಥಿಗಳು ಶೈಕ್ಷಣಿಕ ಜವಾಬ್ದಾರಿಯಿಂದ ಹೊರಗುಳಿಯಬಾರದು, ಇಲ್ಲಿ ಪಡೆಯುವ ನಿಮ್ಮ ಸಾಧನೆಗಳು ಬಹುಶಃ ನಿಮ್ಮ ಭವಿಷ್ಯದ ಬದುಕನ್ನು ನಿರ್ಧರಿ ಸಲಿದ್ದು ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಹೆಚ್ಚಿನ ಶಿಕ್ಷಣಕ್ಕೆ ಮುಂದುವರಿಯಬೇಕು ಅಂದಾಗ ಮಾತ್ರ ಪಾಲಕರು ಮತ್ತು ಉಪನ್ಯಾಸಕರ ಋಣವನ್ನು ತೀರಿಸಿದಂತಾಗಲಿದೆ ಎಂದರು.

ಅತಿಥಿಗಳಾಗಿದ್ದ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಎ.ಎಂ. ಸೌದಾಗರ ಮಾತನಾಡಿ, ಶಿಕ್ಷಣದ ಅಭಿವೃದ್ದಿಯ ವಿಚಾರದಲ್ಲಿ ನಾವ್ಯಾರು ಹಿಂದೆ ಬೀಳುವ ಪ್ರಶ್ನೆಯಿಲ್ಲ, ಕಠಿಣ ಪರಿಶ್ರಮ ಹಾಕುವ ಮೂಲಕ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಹಿಂದಿಕ್ಕುವ ಪ್ರಯತ್ನಕ್ಕೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧವಾಗಬೇಕು, ಇದಕ್ಕೆ ಬೇಕಾಗಿರುವ ಸಕಲ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳು ಮಕ್ಕಳಿಗೆ ನೀಡಲು ಸಿದ್ಧವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಿದ ಕೆಲ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ದುರ್ಗೇಶ ಗೋಣೆಮ್ಮನವರ, ಕಬಡ್ಡಿ ಕೋಚ್ ಮಂಜುಳ ಭಜಂತ್ರಿ, ಟಾಟಾ ಕಂಪನಿ ಮ್ಯಾನೇಜರ್ ರಾಜು ಬಳ್ಳಾರಿ, ಸಿಡಿಸಿ ಸದಸ್ಯರಾದ ದತ್ತಾತ್ರೇಯ ಸಾಳುಂಕೆ, ವೀರೇಶ ಮತ್ತೀಹಳ್ಳಿ, ಮುನ್ನಾ ಎರೇಶೀಮಿ, ಜೈಭೀಮ್ ರಾರಾವಿ, ಚನ್ನಮ್ಮ ಎಮ್ಮೇರ, ರುಕ್ಮಿಣಿ ನಾಯಕ್, ಸುವರ್ಣಾ ಸೇರಿದಂತೆ ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕ್ಯಾಪ್ಟನ್‌ ಡಿ.ಬಿ.ಕುಸಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಸ್ವಾಗತಿಸಿದರು. ಎಸ್.ಎಂ.ಲಿಂಗದಳ್ಳಿ ವಂದಿಸಿದರು.