ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯವನ್ನು ನಾವು ಸಾಧಿಸಲು ಹೆಚ್ಚು ಶ್ರಮಿಸಬೇಕಾಗಿದೆ ಎಂದು ಲೇಖಕ ಹಾಗೂ ಚಿಂತಕ ವಿ.ಎಲ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯವನ್ನು ನಾವು ಸಾಧಿಸಲು ಹೆಚ್ಚು ಶ್ರಮಿಸಬೇಕಾಗಿದೆ ಎಂದು ಲೇಖಕ ಹಾಗೂ ಚಿಂತಕ ವಿ.ಎಲ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ. ಸ್ಲಂ ಜನಾಂದೋಲನ ಕರ್ನಾರ‍್ನಾಟಕ. ಹಾಗೂ ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಜಂಟಿಯಾಗಿ ಮನ- ಮನೆಗೂ ಸಂವಿಧಾನ ಜಾಥಾದ ಸಮಾರೋಪ ಸಮಾರಂಭದ ಭಾಗವಾಗಿ ಆಯೋಜಿಸಿದ್ದ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದ ಕೊನೆಯ ಭಾಷಣವನ್ನು ಉಲ್ಲೇಖಿಸಿ ದೇಶ ಹೊಸ ಸಂವಿಧಾನವನ್ನು ಸ್ವೀಕರಿಸುತ್ತಿದ್ದಾಗ, ನಾವು ರಾಜಕೀಯ ಪ್ರಜಾಪ್ರಭುತ್ವವನ್ನು ಹೊಂದಬಹುದು, ಆದರೆ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಮುಂದುವರಿದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ ಎಂದು ಅಂಬೇಡ್ಕರ್ ರವರು ಎಚ್ಚರಿಸಿದ್ದನ್ನು ಅವರು ನೆನಪಿಸಿದರು.

ಹಿರಿಯ ಹೋರಾಟಗಾರ ಕೆ. ಚಾವಡೆ ಲೋಕೇಶ್ ಮಾತನಾಡಿ, ಸಂವಿಧಾನ ಪೀಠಿಕೆಯನ್ನು ಕರ್ನಾಟಕದ ವಿವಿಧ ಭಾಷೆಗಳಲ್ಲಿ ಅನುವಾದಿಸಿ, ಓದಿಸಿ ಚಿತ್ರಿಕರಿಸಿರುವುದು ಭಾರತದಲ್ಲೇ ಮೊದಲು, ಇಂಥಾ ಕೆಲಸಗಳು ಇನ್ನೂ ಆಗಬೇಕು ಎಂದು ತಂಡಕ್ಕೆ ಶುಭಕೋರಿದರು.

17 ಭಾಷೆಗಳಾದ ಅರವು, ಅರೆ ಭಾಷೆ, ಬ್ಯಾರಿ, ದಖ್ನಿ, ಗೋಸಾಂಗಿ, ಇರುಳ, ಕೊಡವ, ಕೊಂಕಣಿ, ಕೊರಚ, ಕೊರಗ, ಲಂಬಾಣಿ, ಮಲಾಮೆ, ನವಾಯತ್, ಸಂಕೇತಿ, ತುಳು, ವಾಘ್ರಿ ಹಾಗೂ ಕನ್ನಡ ಇವುಗಳಲ್ಲಿ ಅನುವಾದಗೊಂಡ ನಮ್ಮ ಸಂವಿಧಾನದ ಪ್ರಸ್ತಾವನೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ‍್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕ ಕೃಷ್ಣಪ್ಪ, ನರಸಿಂಹಮೂರ್ತಿ, ಕೊಟ್ಟ ಶಂಕರ್, ಡಿ.ಟಿ. ವೆಂಕಟೇಶ್, ಡಾ. ಓಬಳೇಶ್. ಶಿವಣ್ಣ ವಿರೂಪಾಕ್ಷ ಡ್ಯಾಗೇರಳ್ಳಿ, ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆಯ ಅನುಪಮಾ, ಸಂವಿಧಾನ ಸ್ನೇಹಿ ಬಳಗದ ಅಶ್ವಿನಿ ಬೋಧ್ ಮತ್ತು ಪೂರ್ಣ ರವಿಶಂಕರ್ ಲಲಿತಾ ಕಲಾ ಅಕಾಡೆಮಿಯ ಮನು ಚಕ್ರವರ್ತಿ. ಯುವ ಮುಖಂಡರಾದ ಕಿಶೋರ್. ನವೀನ್. ಚಂದನ್.ಮುರುಳಿ ಕುಂದೂರು. ತರಬೇತಿದಾರರದ ಮೇಘನಾ. ವಿನೀತ್ ಕುಮಾರ್. ಶಿವಕುಮಾರ್. ಮನೋಜ್ ಕುಮಾರ್. ಸ್ಲಂ ಸಮಿತಿಯ ಅರುಣ್. ತಿರುಮಲಯ್ಯ. ಕೃಷ್ಣಮರ‍್ತಿ. ಮುಬಾರಕ್. ರಾಮಕೃಷ್ಣ ಮುಂತಾದ ನಾಯಕರು ಉಪಸ್ಥಿತರಿದ್ದರು.