ಅಂಬಿಗರ ಚೌಡಯ್ಯನವರ ವಚನಗಳು ಮತ್ತು ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಸೈದಾಪುರ
ಅಂಬಿಗರ ಚೌಡಯ್ಯನವರ ವಚನಗಳು ಮತ್ತು ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಕರೆ ನೀಡಿದರು.ಸಮೀಪದ ನೀಲಹಳ್ಳಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ, ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಿ ಮಾತನಾಡಿದರು.
12ನೇ ಶತಮಾನದ ಮಹಾ ವಚನಕಾರರಾಗಿದ್ದ ಚೌಡಯ್ಯನವರು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ನೀಡಿದ್ದಾರೆ. ಅಂತಹವರ ಜಯಂತಿ ಸಮುದಾಯದ ಹಬ್ಬವಾಗಿದ್ದು, ಶರಣರ ಸಂದೇಶಗಳನ್ನು ಸ್ಮರಿಸುವ ಮತ್ತು ಗೌರವಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ಆದ್ದರಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಪ್ರತಿವರ್ಷ ಜನವರಿ 21ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದೆ. ಆ ಹಿನ್ನಲೆಯಲ್ಲಿ ಜ-4 ರಿಂದ ಜ-19 ರವರೆಗೆ ಪ್ರತಿ ಹೋಬಳಿ ಮಟ್ಟದಲ್ಲಿ ಹಂತ ಹಂತವಾಗಿ ಕೋಲಿ ಸಮಾಜದ ಜನಜಾಗೃತಿ ಜಾಥಾವು ಜಾಗೃತಿ ಅಭಿಯಾನ ತೆರಳಲಿದೆ. ಈ ಅಭಿಯಾನದಲ್ಲಿ ಕೋಲಿ ಸಮುದಾಯದ ಪ್ರತಿಯೊಬ್ಬರು ಕೂಡ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಇಂದ್ರಮ್ಮ, ಲಕ್ಷ್ಮಿ, ಯಂಕಮ್ಮ, ಸುಶೀಲಮ್ಮ, ಮಹಾದೇವಮ್ಮ, ಪವನ, ಮಲ್ಲೇಶಿ, ರಾಜಪ್ಪ, ಮಲಮ್ಮ, ಸಾಯಮ್ಮ, ಸಿದ್ರಾಮ, ಹಣಮಂತ, ಶೇಕಪ್ಪ, ಬಾಲಪ್ಪ, ನರಸಪ್ಪ ಬನ್ನಪ್ಪಾ, ಹುಸೇನಪ್ಪ, ಶಂಕರ್, ಚಂದ್ರು, ಸಾಬಪ್ಪಾ, ಯಂಕಪ್ಪ, ಬಸಲಿಂಗಪ್ಪ, ಸೈದಪ್ಪ ಸೇರಿದಂತೆ ಅನೇಕ ಯುವಕರು, ಕೋಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.