ಮುಂದಿನ ಪೀಳಿಗೆಗೆ ಭೂಮಿ, ಜಲ ಉಳಿಸಬೇಕಿದೆ: ಕನ್ನಯ್ಯ ನಾಯ್ಡು

| Published : Dec 23 2024, 01:04 AM IST

ಮುಂದಿನ ಪೀಳಿಗೆಗೆ ಭೂಮಿ, ಜಲ ಉಳಿಸಬೇಕಿದೆ: ಕನ್ನಯ್ಯ ನಾಯ್ಡು
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಪೀಳಿಗೆಗೆ ನಾವು ಭೂಮಿ, ಜಲವನ್ನು ಉಳಿಸಬೇಕಾಗಿದೆ.

ಸನ್ಮಾನ ಸ್ವೀಕರಿಸಿದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿಯ ನೇತೃತ್ವ ವಹಿಸಿದ್ದ ತಾಂತ್ರಿಕ ತಜ್ಞ

ಕನ್ನಡಪ್ರಭ ವಾರ್ತೆ ಕಾರಟಗಿ

ಬರದಿಂದ ತತ್ತರಿಸಿದ್ದ ಈ ಭಾಗಕ್ಕೆ ತುಂಗಭದ್ರಾ ಅಣೆಕಟ್ಟೆ ಭಾಗ್ಯದ ಬಾಗಲು ತೆರೆದು ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಭತ್ತ ಬೆಳೆಯುವ ನಾಡಾಗಿದೆ. ಮುಂದಿನ ಪೀಳಿಗೆಗೆ ನಾವು ಭೂಮಿ, ಜಲವನ್ನು ಉಳಿಸಬೇಕಾಗಿದೆ ಎಂದು ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿಯ ನೇತೃತ್ವ ವಹಿಸಿದ್ದ ತಾಂತ್ರಿಕ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.

ಇಲ್ಲಿನ ನ್ಯಾಷನಲ್ ಗ್ರೀನ್ ವ್ಯಾಲಿ ಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಣೆಕಟ್ಟೆ ನಿರ್ಮಿಸಿ ಇಷ್ಟೊಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಕ್ರಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿದ್ದು. ಇದು ಆಘಾತಕಾರಿ ಘಟನೆ. ಆದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಸವಾಲುಗಳನ್ನು ಬೆನ್ನಟ್ಟಿ ಕ್ರಸ್ಟ್‌ಗೇಟ್‌ನ್ನು ಅಳವಡಿಸಿ ವ್ಯರ್ಥ ಪೋಲಾಗುತ್ತಿದ್ದ ನೀರನ್ನು ತಡೆದಿದ್ದೇವೆ. ತಂತ್ರಜ್ಞಾನ, ಆಧುನಿಕತೆಯ ಎಲ್ಲ ಸೌಲಭ್ಯಗಳು ಇದ್ದರೂ ಸಹ ಕ್ರಸ್ಟ್ ಗೇಟ್ ಅಳವಡಿಸುವುದು ಬಹುದೊಡ್ಡ ಸವಾಲಾಗಿತ್ತು. ಜಲಾನಯನ ಪ್ರದೇಶದ ೭೦ ಕಿಮೀ ದೂರದವರೆಗೂ ನೀರು ನಿಂತಿದೆ. ಇಂಥ ಸ್ಥಿತಿಯಲ್ಲಿ ನಮ್ಮ ತಂತ್ರಜ್ಞರು ಕಠಿಣ ಸಮಸ್ಯೆ ಎದುರಿಸಿ ಕ್ರಸ್ಟ್‌ಗೇಟ್ ಅಳವಡಿಸಿ ಇಡೀ ನಾಲ್ಕು ಜಿಲ್ಲೆಗಳ ನೀರಾವರಿ ಪ್ರದೇಶವನ್ನು ಉಳಿಸಿದ್ದು ಸಣ್ಣ ಮಾತಲ್ಲ ಎಂದು ಕ್ರಸ್ಟ್ ಗೇಟ್ ಅಳವಡಿಸಿದಾಗ ಪಟ್ಟ ಕಷ್ಟಗಳನ್ನು ಕನ್ನಯ್ಯ ನಾಯ್ಡು ವಿವರಿಸಿದರು.

ವಿನ್ಯಾಸ ಎಂಜಿನಿಯರ್ ಸೂರಿಬಾಬು, ನಿವೃತ್ತ ಎಂಜಿನಿಯರ್ ನಾಗೇಂದ್ರ ಅವರನ್ನು ಶಾಲೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಶಾಲೆ ಅಧ್ಯಕ್ಷ ವೆಂಕಟರಾವ್ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಶಾಲೆಯ ಶಿಕ್ಷಕರು, ಪಾಲಕರು ಇದ್ದರು.