ಸಂಸದ ಬೊಮ್ಮಾಯಿ ನೇತೃತ್ವದಲ್ಲಿ ಉಪಚುನಾವಣೆ ಎದುರಿಸುತ್ತೇವೆ :ಶ್ರೀಕಾಂತ ದುಂಡಿಗೌಡ್ರ

| Published : Aug 11 2024, 01:41 AM IST / Updated: Aug 11 2024, 12:26 PM IST

ಸಂಸದ ಬೊಮ್ಮಾಯಿ ನೇತೃತ್ವದಲ್ಲಿ ಉಪಚುನಾವಣೆ ಎದುರಿಸುತ್ತೇವೆ :ಶ್ರೀಕಾಂತ ದುಂಡಿಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬೊಮ್ಮಾಯಿಯವರು ನಮಗೆ ಕೃಷ್ಣ ಇದ್ದ ಹಾಗೆ. ಅವರ ನೇತೃತ್ವದಲ್ಲಿ ಉಪಚುನಾವಣೆ ಎದುರಿಸಲು ಶ್ರಾವಣದಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸಂಘಟನೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಶಿಗ್ಗಾಂವಿ: ಬೊಮ್ಮಾಯಿಯವರು ನಮಗೆ ಕೃಷ್ಣ ಇದ್ದ ಹಾಗೆ. ಅವರ ನೇತೃತ್ವದಲ್ಲಿ ಉಪಚುನಾವಣೆ ಎದುರಿಸಲು ಶ್ರಾವಣದಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸಂಘಟನೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಪಟ್ಟಣದ ಹಳೆಪೇಟೆ ಓಣಿಯ ಗಜಾನನ ದೇವಸ್ಥಾನದಲ್ಲಿ ವಿವಿಧ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪಕ್ಷದ ಸಂಘಟನಾ ಭೇಟಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ಷೇತ್ರದಲ್ಲಿಯ ಅಭಿವೃದ್ಧಿ ಮತ್ತು ಕ್ಷೇತ್ರದ ರಕ್ಷಣೆಯನ್ನು ಮುಂದುವರೆಸಲು ಈಗ ಪ್ರತಿಯೊಂದು ಹಳ್ಳಿಗಳಿಗೆ ನಮ್ಮ ಮುಖಂಡರೊಂದಿಗೆ ಭೇಟಿ ನೀಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರಲು ಬಿಜೆಪಿಯ ಬೂತ್‌ ಮಟ್ಟದ ಅದ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ಮಾಡಲಾಗುವುದು. ಬೊಮ್ಮಾಯಿಯವರ ಹಾಗೂ ಜೋಶಿಯವರ ಕಾರ್ಯಗಳನ್ನು ಜನರ ಎದುರು ಇಟ್ಟು ಸಂಘಟನೆ ರೂಪುರೇಷಗಳನ್ನು ಹಾಕಿ ಈ ಅನಿರೀಕ್ಷಿತ ಉಪಚುನಾವಣೆಯಲ್ಲಿ ಗೆಲ್ಲಲು ಸರ್ವ ಸನ್ನದ್ಧವಾಗಿದ್ದೇವೆ ಎಂದರು.ನಾನು ಸೇರಿದಂತೆ ಪಕ್ಷದಲ್ಲಿ ಹಲವಾರು ಜನರು ಆಕಾಂಕ್ಷಿಗಳಿದ್ದಾರೆ.

 ಜೊತೆಗೆ ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿದ್ದಾರೆ. ಅದನ್ನ ನಾನು ಸ್ವಾಗತಿಸುತ್ತೇನೆ. ತಾಲೂಕಿನಲ್ಲಿ ಪಕ್ಷ ಸಂಘಟನೆಯ ಜೊತೆಗೆ ಹಲವಾರು ಸಾಮಾಜಿಕ ರಂಗದಲ್ಲಿ ನನ್ನದೇ ಆದ ಸಾಮಾಜಿಕ ಸೇವೆ ಮಾಡಿದ ತೃಪ್ತಿ ಇದೆ ಎಂದರು.

ಈ ಸಂದರ್ಭದಲ್ಲಿ ಸಿ.ವಿ. ಮತ್ತಿಗಟ್ಟಿ, ಎಂ.ಎನ್. ವೆಂಕೋಜಿ, ದಯಾನಂದ ಅಕ್ಕಿ, ಹನುಮರೆಡ್ಡಿ ನಡುವಿನಮನಿ, ಭರಮಜ್ಜ ನವಲಗುಂದ, ಗಂಗಣ್ಣ ಕುನ್ನೂರ, ರಮೇಶ ಸಾತಣ್ಣವರ, ಶಂಕರಗೌಡ ಪಾಟೀಲ, ರಮೇಶ ವನಹಳ್ಳಿ, ಶೇಖಣ್ಣ ಹಾದಿಮನಿ, ಬಸವರಾಜ ನಾರಾಯಣಪೂರ, ಮುತ್ತು ಯಲಿಗಾರ, ಶಿವಣ್ಣ ಗಂಜೀಗಟ್ಟಿ, ಶಿವಾನಂದ ಹೊಸಮನಿ, ರಘವೇಂದ್ರ ದೇಶಪಾಂಡೆ, ಬಸವರಾಜ ಹಾವೇರಿ, ಮಾಲತೇಶ ಯಲಿಗಾರ, ಸುರೇಶ ಹರಿಗೊಂಡ, ಮಹಾಲಿಂಗಪ್ಪ ಹಡಪದ ಸೇರಿದಂತೆ ಮುಖಂಡರು ಇದ್ದರು.