ಕ್ರೈಸ್ತರಿಂದ ಚರ್ಚ್ ನಲ್ಲಿ ಆಯುಧ ಪೂಜೆ; ನೂರಾರು ವಾಹನಗಳಿಗೆ ಪೂಜೆ

| Published : Oct 13 2024, 01:02 AM IST

ಕ್ರೈಸ್ತರಿಂದ ಚರ್ಚ್ ನಲ್ಲಿ ಆಯುಧ ಪೂಜೆ; ನೂರಾರು ವಾಹನಗಳಿಗೆ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು, ಆಯುಧ ಪೂಜೆ ಅಂಗವಾಗಿ ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್‌ಗೆ ಕೊಂಡೊಯ್ದು ಆಯುಧ ಪೂಜೆ ನೆರವೇರಿಸಿದ್ದಾರೆ.

ಚಾಮರಾಜನಗರ: ಕ್ರೈಸ್ತ ಸಮುದಾಯದವರು ಹಿಂದೂಗಳ ಪವಿತ್ರ ಆಚರಣೆಯಾದ ಆಯುಧ ಪೂಜೆಯನ್ನು ಮಾಡುವ ಮೂಲಕ ಗಮನ ಸೆಳೆದ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು, ಆಯುಧ ಪೂಜೆ ಅಂಗವಾಗಿ ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್‌ಗೆ ಕೊಂಡೊಯ್ದು ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲಿನ ಪಾದ್ರಿ ಸಗಾಯ್ ರಾಜ್ ಪ್ರಾರ್ಥನೆ ಸಲ್ಲಿಸಿ, ಶುಭ ಸಂದೇಶ ತಿಳಿಸಿ ಪವಿತ್ರ ಜಲವನ್ನು ನೂರಾರು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಯಾವುದೇ ಅಪಘಾತಗಳಾಗದಿರಲಿ, ಶುಭ-ಲಾಭ ತರಲಿ ಎಂದು ಹಾರೈಸಿದ್ದಾರೆ‌.