ಸಾರಾಂಶ
ಇತ್ತೀಚೆಗೆ ನಿರಂತರ ನಡೆಯುತ್ತಿರುವ ಮೋಟಾರ್ ಬೈಕ್ ಅಪಘಾತದಲ್ಲಿ ಬೈಕ್ ಸವಾರರು ಹೆಲ್ಮೇಟ್ ಧರಿಸದೆ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕುಮಾರ್‌ಮೀನಾ ಮಾರ್ಗದರ್ಶನದಂತೆ ಪೊಲೀಸರು ಹಲ್ಮೇಟ್ ಜಾಗೃತಿ ಜಾಥ ಕಾರ್ಯಕ್ರಮವನ್ನು ಮಂಗಳವಾರ ನಡೆಸಿದರು.
ಚಳ್ಳಕೆರೆ: ಇತ್ತೀಚೆಗೆ ನಿರಂತರ ನಡೆಯುತ್ತಿರುವ ಮೋಟಾರ್ ಬೈಕ್ ಅಪಘಾತದಲ್ಲಿ ಬೈಕ್ ಸವಾರರು ಹೆಲ್ಮೇಟ್ ಧರಿಸದೆ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕುಮಾರ್‌ಮೀನಾ ಮಾರ್ಗದರ್ಶನದಂತೆ ಪೊಲೀಸರು ಹಲ್ಮೇಟ್ ಜಾಗೃತಿ ಜಾಥ ಕಾರ್ಯಕ್ರಮವನ್ನು ಮಂಗಳವಾರ ನಡೆಸಿದರು.
ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೆಲ್ಮೇಟ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಮೋಟಾರ್ ಬೈಕ್ ಅಪಘಾತದಲ್ಲಿ ಹೆಲ್ಮೇಟ್ ರಹಿತ ಪ್ರಯಾಣ ಮಾಡಿದರೆ ಸಾವಿನ ಬಾಗಿಲನ್ನು ಸುಲಭವಾಗಿ ತಟ್ಟಬೇಕಾಗುತ್ತದೆ. ಹೆಲ್ಮೇಟ್ ಧರಿಸಿ ಬೈಕ್ ಚಾಲನೆ ಮಾಡಿದರೆ ಪ್ರಾಣಾಪಾಯದಿಂದ ಪಾರಾಗಬಹುದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಯೋಗಾರ್ಥವಾಗಿ ಇಂದು ಮೋಟಾರ್ ಬೈಕ್ ಸವಾರರಿಗೆ ಇಲಾಖೆಯಿಂದ ಗುಲಾಬಿ ಹೂ ನೀಡಿ ವಿನಂತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಾದರೂ ಬೈಕ್ ಸವಾರರು ಈ ನಿಯಮಪಾಲಿಸಿ ಎಂದರು.ಠಾಣಾ ವೃತ್ತ ನಿರೀಕ್ಷಕ ರಾಜಫಕೃದ್ದೀನ್ ದೇಸಾಯಿ ಮಾತನಾಡಿ, ವಾಲ್ಮೀಕಿ, ಅಂಬೇಡ್ಕರ್, ನೆಹರೂ ವೃತ್ತ, ಬಳ್ಳಾರಿ ರಸ್ತೆ, ಹಳೇಟೌನ್, ಪಾವಗಡ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಹೆಲ್ಮೇಟ್ ಜಾಗೃ ಜಾಥಾ ನಡೆಸಲಾಗಿದೆ. ನೆಹರೂ ವೃತ್ತದಲ್ಲಿ ಎಲ್ಲಾ ಬೈಕ್ ಸವಾರರಿಗೆ ಇಲಾಖೆಯಿಂದ ಹೆಲ್ಮೇಟ್ ಧರಿಸಲು ವಿನಂತಿಸಿದೆ. ಸಾರ್ವಜನಿಕರು ಸಹ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ಪಿಎಸ್‌ಐ ಕೆ.ಸತೀಶ್‌ನಾಯ್ಕ, ಜೆ.ಶಿವರಾಜ್, ಧರೆಪ್ಪಬಾಳಪ್ಪದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.