ವಿವಿಧ ಬೇಡಿಕೆ ಈಡೇರಿಕೆಗೆ ನೇಕಾರರ ಆಗ್ರಹ

| Published : Jan 18 2024, 02:01 AM IST

ವಿವಿಧ ಬೇಡಿಕೆ ಈಡೇರಿಕೆಗೆ ನೇಕಾರರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ವಿದ್ಯುತ್‌ ಚಾಲಿತ ಮಗ್ಗದ ನೇಕಾರಿರಿಗೆ 10ಹೆಚ್‌ಪಿಯಿಂದ 20 ಹೆಚ್‌ಪಿವರೆಗಿನ ಮಗ್ಗಗಳಿಗೆ 500 ಯೂನಿಟ್‌ವರೆಗೆ ಮಾತ್ರ ₹1.25 ಎಂದು ನಿಯಮ ಇರುವುದನ್ನು ತೆರವುಗೊಳಿಸಿ, ಯಾವುದೇ ಇತರೆ ಶುಲ್ಕಗಳನ್ನು ಹಾಕದೆ ವಿದ್ಯುತ್‌ ಸರಬರಾಜು ಮಾಡಿದ್ದಲ್ಲಿ ಅನೇಕ ನೇಕಾರರಿಗೆ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ವಿದ್ಯುತ್‌ ಚಾಲಿತ ಮಗ್ಗದ ನೇಕಾರರಿಗೆ 500 ಯುನಿಟ್‌ ಉಚಿತ ವಿದ್ಯುತ್‌ ನಿಬಂಧನೆಯನ್ನು ತೆಗೆದು ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ರಾಜ್ಯ ವಿದ್ಯುತ್‌ ಚಾಲಿತ ಮಗ್ಗದ ನೇಕಾರಿರಿಗೆ 10ಹೆಚ್‌ಪಿಯಿಂದ 20 ಹೆಚ್‌ಪಿವರೆಗಿನ ಮಗ್ಗಗಳಿಗೆ 500 ಯೂನಿಟ್‌ವರೆಗೆ ಮಾತ್ರ ₹1.25 ಎಂದು ನಿಯಮ ಇರುವುದನ್ನು ತೆರವುಗೊಳಿಸಿ, ಯಾವುದೇ ಇತರೆ ಶುಲ್ಕಗಳನ್ನು ಹಾಕದೆ ವಿದ್ಯುತ್‌ ಸರಬರಾಜು ಮಾಡಿದ್ದಲ್ಲಿ ಅನೇಕ ನೇಕಾರರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.

20 ವರ್ಷಗಳ ಹಿಂದೆ 1 ಹೆಚ್‌ಪಿಯಿಂದ 20 ಹೆಚ್‌ಪಿವರೆಗೆ ಕೇವಲ ₹1.25 ಯುನಿಟ್‌ನ ರಿಯಾಯತಿ ದರದಲ್ಲಿ ವಿದ್ಯುತ್‌ ಒದಗಿಸಿದ್ದು ಈಗ ಅದನ್ನು ಹಿಂಪಡೆದಿದೆ. ಇದರಿಂದ ಅನೇಕ ಘಟಕಗಳು ಬಂದ ಆಗಿದ್ದು, ಕೆಲವು ಬಂದ ಆಗುವ ಹಂತಕ್ಕೆ ತಲುಪಿವೆ. ಆದ್ದರಿಂದ 20 ಹೆಚ್‌ಪಿವರೆಗೆ ಯಾವುದೇ ದರ ಇಲ್ಲದೆ ಹಾಗೂ ಎಪ್ರಿಲ್‌ 1ರಿಂದ ಹೆಚ್ಚುವರಿಯಾಗಿರುವ ಬಾಕಿ ಬಿಲ್‌ ಕೆಲವು ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರು ಉಳಿಸಿಕೊಂಡಿದ್ದು, ಅದನ್ನು ಸರ್ಕಾರವೇ ಭರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ಈ ವೇಳೆ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.