ಸಾರಾಂಶ
ವಾರದ ಕಾರ್ಯಕ್ರಮ
--------ಬೆಲಗೂರಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಬಸವರಾಜ್
----ಕನ್ನಡಪ್ರಭವಾರ್ತೆ, ಹೊಸದುರ್ಗ
ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ನಾವಿನ್ಯತೆ ಮನೋಭಾವ ಬೆಳೆಸಲು ಶಿಕ್ಷಾ ಸಪ್ತ ಕಾರ್ಯಕ್ರಮ ಸಹಕಾರಿ ಎಂದು ಡಯಟ್‍ನ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು.ಹೊಸದುರ್ಗ ತಾಲೂಕು ಬೆಲಗೂರು ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಾ ಸಪ್ತ ಕಾರ್ಯಕ್ರಮದ ಚಟುವಟಿಕೆ ಮತ್ತು ಅಂತರ್ಜಾಲ ಬಳಕೆ ಕುರಿತು ಪರಿಶೀಲಿಸಿ ಮಾತನಾಡಿದ ಅವರು ಶಿಕ್ಷಣ ಮಂತ್ರಾಲಯ ಸೂಚನೆಯಂತೆ ಕಾರ್ಯಕ್ರಮ ನಡೆಯುತ್ತಿದೆ. ಕಲಿಕೆ ಮತ್ತು ಅಭಿವೃದ್ಧಿ ಅಂಶಗಳನ್ನು ಕೇಂದ್ರೀಕರಿಸಿಕೊಂಡು ರಾಷ್ಟ್ರಾದ್ಯಂತ ವಾರದ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ ಎಂದರು.
ನಿರ್ದೇಶಕರು (ಗುಣಮಟ್ಟ) ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು, ಡಯಟ್ ಉಪನಿರ್ದೇಶಕ ಎಂ.ಆರ್. ಮಂಜುನಾಥ್ ಮತ್ತು ಪ್ರಾಚಾರ್ಯ ಎಂ.ನಾಸಿರುದ್ದೀನ್‍ರವರ ಮಾರ್ಗದರ್ಶನದಲ್ಲಿ ಬ್ಲಾಕ್ ಹಂತದ ಎಲ್ಲಾ ಅನುಷ್ಟಾನಾಧಿಕಾರಿಗಳ ನೇತೃತ್ವದಲ್ಲಿ 22 ರಿಂದ 28 ರವರೆಗೆ ವಾರದ ಪ್ರತಿಯೊಂದು ದಿನ ಒಂದು ನಿರ್ದಿಷ್ಟ ವಿಷಯದ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕಲಿಕೋಪಕರಣಗಳ ದಿನ, ಎಫ್ಎಲ್ಎನ್ ದಿನ, ಕ್ರೀಡಾ ದಿನ, ಸಾಂಸ್ಕೃತಿಕ, ಕೌಶಲ್ಯ ಮತ್ತು ಡಿಜಿಟಲ್ ಉಪಕ್ರಮಗಳ ದಿನ, ಪೌಷ್ಠಿಕಾಂಶ, ಸಮುದಾಯ ಪಾಲ್ಗೊಳ್ಳುವಿಕೆ ದಿನವಾಗಿಯೂ ಆಚರಿಸಲಾಗುತ್ತಿದೆ ಎಂದರು.ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಏಕತೆ, ವೈವಿಧ್ಯತೆ ಪ್ರಜ್ಞೆ, ಕ್ರೀಡೆ ಮತ್ತು ಫಿಟ್‍ನೆಸ್ ಮಹತ್ವ, ಸಾಮಾಜಿಕ-ಭಾವನಾತ್ಮಕ ಯೋಗಕ್ಷೇಮ ಉತ್ತೇಜಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ಭಾಗಿ ದಾರರ ನಡುವೆ ಸಮನ್ವಯತೆ, ಸಂವೇದನಾಶೀಲತೆ ಬೆಳೆಸಲು ಶಿಕ್ಷಾ ಸಪ್ತ ಪೂರಕವಾಗಿದ್ದು, ಶಿಕ್ಷಕರು ಎಲ್ಲಾ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳ ಕಲಿಕಾ ಸಾಧನೆ ಪರಿಶೀಲಿಸಿ ಮಾತನಾಡಿದ ಉಪನ್ಯಾಸಕ ಸಿದ್ದೇಶ್, ಶಿಕ್ಷಕರು ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಸಾಮಥ್ರ್ಯ ಗುರುತಿಸಿಕೊಳ್ಳಬೇಕು. ಕೌನ್ ಬನೆಗಾ ಸ್ವರಾಧಿಪತಿ ಕಾರ್ಯಕ್ರಮದ ಮೂಲಕ ಸ್ವರ, ವ್ಯಂಜನ, ಗುಣಿತಾಕ್ಷರಗಳ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.ಉಪನ್ಯಾಸಕ ಕೆ.ಜಿ.ಪ್ರಶಾಂತ್ ಮಾತನಾಡಿ, ಶಿಕ್ಷಕರಿಗೆ ತಾಂತ್ರಿಕ ಜ್ಞಾನ ಅಗತ್ಯ. ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವಿಷಯವಾರು ಪೂರಕ ಚಿತ್ರಗಳು, ವಿಡಿಯೋಕ್ಲಿಪ್, ಚಟುವಟಿಕೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಜನಪದ ಕಲಾವಿದ ರಂಗನಾಥ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಿಆರ್ ಪಿ ನೇತ್ರಾವತಿ. ಮುಖ್ಯ ಶಿಕ್ಷಕಿ ವಿಜಯಕುಮಾರಿ. ಶಿಕ್ಷಕರಾದ ಲತಾ, ಶೋಭಾ ಮತ್ತು ವಿದ್ಯಾರ್ಥಿಗಳು ಇದ್ದರು.
-----------------ಪೋಟೋ: ಹೊಸದುರ್ಗ ತಾಲೂಕು ಬೆಲಗೂರು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಯಟ್ ಉಪನ್ಯಾಸಕರ ತಂಡ ಭೇಟಿ ನೀಡಿ ಶಿಕ್ಷಾ ಸಪ್ತ ಚಟುವಟಿಕೆ ವೀಕ್ಷಿಸಿತು.
--------------ಫೋಟೋ: 25 ಸಿಟಿಡಿ 4