ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ನೂತನ ವರ್ಷದಲ್ಲಾದರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕು, ಉತ್ತಮ ಮಳೆಯಾಗಿ ಸಮೃದ್ಧವಾಗಿ ಬೆಳೆ ಬರಲಿ. ಇದರಿಂದ ರೈತರ ಸಾಲಗಳೆಲ್ಲಾ ತೀರಿ, ಸಂಕಷ್ಟಗಳು ಪರಿಹಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ನಾರಾಯಣ ಹೆಗಡೆ
ಹಾವೇರಿ: ಸಿಹಿ-ಕಹಿ ಘಟನೆಗಳ ನೆನಪುಗಳೊಂದಿಗೆ 2025ನೇ ವರ್ಷಕ್ಕೆ ವಿದಾಯ ಹೇಳಿ ಹೊಸ ಕಸನು, ನಿರೀಕ್ಷೆಗಳೊಂದಿಗೆ 2026ನೇ ಇಸ್ವಿಯನ್ನು ಜಿಲ್ಲೆಯ ಜನತೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ನೂತನ ವರ್ಷದಲ್ಲಾದರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕು, ಉತ್ತಮ ಮಳೆಯಾಗಿ ಸಮೃದ್ಧವಾಗಿ ಬೆಳೆ ಬರಲಿ. ಇದರಿಂದ ರೈತರ ಸಾಲಗಳೆಲ್ಲಾ ತೀರಿ, ಸಂಕಷ್ಟಗಳು ಪರಿಹಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
೨೦೨೪ರಲ್ಲಿ ಕೈಗೂಡದ ಹಲವು ಅಭಿವೃದ್ಧಿ ಕಾರ್ಯಗಳು ನೂತನ ವರ್ಷದಲ್ಲಾದರೂ ಈಡೇರಲಿ ಎಂಬ ಆಶಾಭಾವನೆಯೊಂದಿಗೆ ನೂತನ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಜಿಲ್ಲಾ ಕೇಂದ್ರಕ್ಕೆ ಕಾಯಕಲ್ಪ
ಹಾವೇರಿ ಜಿಲ್ಲೆಯಾಗಿ 28 ವರ್ಷ ಕಳೆದರೂ ಜಿಲ್ಲಾ ಕೇಂದ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಧರ್ಮಾ ನದಿಗಳು ಹರಿದಿದ್ದರೂ ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಇದುವರೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ೨೦೧೬ರಲ್ಲಿ ಆರಂಭವಾಗಿರುವ ೨೪*೭ನೀರು ಪೂರೈಸುವ ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಅಲ್ಲದೇ ನಗರದಲ್ಲಿ ಆರಂಭಗೊಂಡಿದ್ದ ಯುಜಿಡಿ ಕಾಮಗಾರಿ ಹಲವು ವರ್ಷಗಳು ಕಳೆದಿದ್ದರೂ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದೆ. ಈ ವರ್ಷವಾದರೂ 24*7 ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳಬೇಕಿದೆ. ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ, ಚರಂಡಿ ನಿರ್ಮಾಣದ ಬಗ್ಗೆಯೂ ಗಮನ ನೀಡಬೇಕಿದೆ.
ಬೇಡ್ತಿ- ವರದಾ ನದಿ ಜೋಡಣೆಕೃಷಿ ಪ್ರಧಾನ ಜಿಲ್ಲೆಯಲ್ಲಿ ನೀರಾವರಿ ಯೋಜನೆಗೆ ಆದ್ಯತೆ ಸಿಗಬೇಕಿದೆ. ಕುಡಿಯುವ ನೀರು ಮತ್ತು ಕೃಷಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕಾದರೆ ಬೇಡ್ತಿ- ವರದಾ ನದಿ ಜೋಡನೆ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಜಿಲ್ಲೆಯ ರೈತರ ಹಲವು ದಶಕಗಳ ಬೇಡಿಕೆಯಾಗಿರುವ ಈ ಯೊಜನೆ ಅನುಷ್ಠಾನದ ಹಾದಿಯಲ್ಲಿ ರಾಜ್ಯ ಸರ್ಕಾರ ಡಿಪಿಆರ್‌ಗೆ ಅನುಮತಿ ನೀಡಿರುವುದಲ್ಲದೇ ಇತ್ತೀಚೆಗೆ ಕೇಂದ್ರ ಜಲಶಕ್ತಿ ಆಯೋಗದ ಸಭೆಯಲ್ಲಿ ಚರ್ಚೆ ನಡೆದಿದ್ದು ಶೀಘ್ರದಲ್ಲಿ ಯೋಜನೆ ಜಾರಿಯಾಗುವ ಭರವಸೆ ಮೂಡಿದೆ.
ಈಗ ಹಿಂದಿನ ಯೋಜನೆಯ ಸ್ವರೂಪ ಬದಲಿಸಿ, ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಬೇಡ್ತಿ ನದಿ ನೀರನ್ನು ವರದೆಗೆ ಜೋಡಿಸುವ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇತ್ತೀಚೆಗೆ ಕೇಂದ್ರ ಜಲಶಕ್ತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, ಯೋಜನೆಯ ಡಿಪಿಆರ್ ತಯಾರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅಲ್ಲದೇ ಕೇಂದ್ರ ಸರ್ಕಾರ ಯೋಜನೆಗೆ ₹10 ಸಾವಿರ ಕೋಟಿ ಮೀಸಲಿಟ್ಟಿದ್ದು ನಮ್ಮ ಪಾಲಿನ ₹1 ಸಾವಿರ ಕೋಟಿ ಹೂಡಿಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದು ಮಹತ್ವ ಪಡೆದುಕೊಂಡಿದೆ. ಕೃಷಿ ಪೂರಕ ಕೈಗಾರಿಕೆಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಿನ್ನೆಲೆ ರೈತರು ಬೆಳೆದಂತೆ ಉತ್ಪನ್ನಗಳಿಗೆ ಪೂರಕವಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದು ರೈತ ಮುಖಂಡರ ಒತ್ತಾಯವಾಗಿದೆ. ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಜಿಲ್ಲೆಯ ಪ್ರವಾಸಿ ತಾಣಗಳಾದ ಭಕ್ತಶ್ರೇಷ್ಠ ಕನಕದಾಸರ ಕಾಗಿನೆಲೆಯನ್ನು ಕೂಡಲ ಸಂಗಮದ ಮಾದರಿಯಲ್ಲಿ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಕನಕದಾಸರ ಜನ್ಮಭೂಮಿ ಬಾಡ, ಶಿಶುನಾಳ ಶರೀಫಗಿರಿ, ಗೋಟಗೊಡಿಯ ಉತ್ಸವರಾಕ್ ಗಾರ್ಡ್‌ನ್, ರಾಣಿಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಸ್ಥಳಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಿದೆ.2 ವಿವಿಗಳಿಗೆ ಅನುದಾನ
ಜಿಲ್ಲೆಯಲ್ಲಿರುವ ಜಾನಪದ ವಿಶ್ವವಿದ್ಯಾಲಯ ಹಾಗೂ ಹಾವೇರಿ ವಿಶ್ವವಿದ್ಯಾಲಯ ಸಮರ್ಪಕ ಅನುದಾನ ಇಲ್ಲದೇ ಸೊಗರುತ್ತಿವೆ. ಇಲ್ಲಿ ಕೂಡ ಮೂಲಭೂತ ಸೌಕರ್ಯಗಳು ಇಲ್ಲದೇ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆ ಸರ್ಕಾರ ಈ ವಿಶ್ವವಿದ್ಯಾಲಯಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಅಭಿವೃದ್ಧಿ ಕ್ರಮ ಕೈಗೊಳ್ಳಬೇಕಿದೆ.ತುಂಗೆಗೆ ಬೇಕು ಬ್ಯಾರೇಜ್ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಹಿನ್ನೆಲೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಕಂಚಾರಗಟ್ಟಿ ಬಳಿಯಲ್ಲಿರುವ ಕುಡಿಯುವ ನೀರಿನ ಜಾಕವೆಲ್ ಬಳಿಯಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣದ ಅಗತ್ಯವಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವತ್ತ ಆದ್ಯತೆ ನೀಡಬೇಕಿದೆ. ಜಿಲ್ಲಾ ಕೇಂದ್ರವಾಗಿ 28 ವರ್ಷ ಕಳೆದಿದ್ದರೂ ತರ್ತು ಸಂದರ್ಭ, ಹೃದಯ ತೊಂದರೆ, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆಗೆ ಕರೆದುಕೊಂಡು ಹೋಗುವ ಸ್ಥಿತಿ ಇದೆ.ಜೊತೆಗೆ ಮೆಡಿಕಲ್ ಕಾಲೇಜು ಉದ್ಘಾಟನೆ, ಬೀಜೋತ್ಪಾದನಾ ಸಂಸ್ಕರಣಾ ಘಟಕ, ನೀರಾವರಿ ಯೋಜನೆಗಳು, ಹಾವೇರಿ-ಗದಗ, ಶಿವಮೊಗ್ಗ-ರಾಣಿಬೆನ್ನೂರ ರೈಲು ಮಾರ್ಗ ಹಾಗೂ ಹಾವೇರಿ ರೈಲು ನಿಲ್ದಾಣ ಮೇಲ್ದರ್ಜೆ ಸೇರಿದಂತೆ ಹತ್ತು ಹಲವಾರು ಆಶಾಭಾವನೆಗಳೊಂದಿಗೆ ಹೊಸ ವರ್ಷ ಸ್ವಾಗತಿಸಲಾಗುತ್ತಿದೆ.
ಆಶ್ರಯ ಮನೆ ಲೋಕಾರ್ಪಣೆಹಾವೇರಿ ನಗರಕ್ಕೆ ಕುಡಿಯುವ ನೀರು, ಯುಜಿಡಿ ಅನುಷ್ಠಾನಕ್ಕೆ ಮೊದಲ ಪ್ರಾಶಸ್ತ್ರ್ಯ. ಹಾವೇರಿ ನಗರದಲ್ಲಿ ಹಾಳಾಗಿರುವ ರಸ್ತೆ ದುರಸ್ತಿ, ಜಿಲ್ಲಾಧಿಕಾರಿ ಕಚೇರಿ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ, ಶಾಂತಿನಗರದಲ್ಲಿ 450 ಆಶ್ರಯ ಮನೆಗಳನ್ನು ಫೆಬ್ರವರಿಯಲ್ಲಿ ಲೋಕಾರ್ಪಣೆ ಮಾಡುತ್ತೇವೆ. ಎರಡನೇ ಹಂತದ್ದೂ ಆದಷ್ಟು ಬೇಗ ಪೂರ್ತಿಗೊಳಿಸಲು ಪ್ರಯತ್ನಿಸುತ್ತೇನೆ.
* ರುದ್ರಪ್ಪ ಲಮಾಣಿ, ಶಾಸಕರು ಹಾವೇರಿನೀರಾವರಿಗೆ ಆದ್ಯತೆಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಪೈಪ್‌ಲೈನ್ ಮೂಲಕ ರೈತರ ಜಮೀನುಗಳಿಗೆ ನೀರಾವರಿ, ಸೌಲಭ್ಯ, ಬ್ಯಾಡಗಿಯಲ್ಲಿ ಮುಖ್ಯರಸ್ತೆ ಅಗಲೀಕರಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಡುವುದು, ಮೀಸಲಿಟ್ಟ ಜಾಗೆಯಲ್ಲಿ ಸುಸಜ್ಜಿತ ಈಜುಗೊಳ ನಿರ್ಮಾಣ, ಅಂತಾರಾಷ್ಟ್ರೀಯ ಒಣಮೆಣಸಿನಕಾಯಿ ಮಾರುಕಟ್ಟೆಗೆ ಮೂಲಸೌಕರ್ಯ ಜೊತೆಗೆ ಹೈಟೆಕ್ ಕೋಲ್ಡ್ ಸ್ಟೋರೇಜ್‌ಗಳ ನಿರ್ಮಾಣ, ರೈತರ ಅನು ಕೂಲಕ್ಕಾಗಿ ಇನ್ನಷ್ಟು ಗ್ರಿಡ್‌ಗಳ ಹೆಚ್ಚಳಕ್ಕೆ ಆದ್ಯತೆ ನೀಡಲಿದ್ದೇನೆ.
* ಬಸವರಾಜ ಶಿವಣ್ಣನವರ, ಬ್ಯಾಡಗಿ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು.ಶೈಕ್ಷಣಿಕ ಕ್ಷೇತ್ರದ ಸುಧಾರಣೆ10 ಸಾವಿರ ಕುಟುಂಬಗಳಿಗೆ ಶಾಶ್ವತವಾಗಿ ಮನೆ ಮಾಲಿಕತ್ವ ದೊರಕಿಸುವ ಕಾರ್ಯವನ್ನು 2026ರಲ್ಲಿ ಪೂರ್ಣಗೊಳಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಶೈಕ್ಷಣಿಕ ಕ್ಷೇತ್ರದ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಶಾಲೆ, ವಸತಿ ನಿಲಯಗಳ ಸ್ಥಾಪನೆಗೆ ಕಾಳಜಿ ವಹಿಸಲಾಗುವುದು. ತಾಲೂಕಿನ ಜನತೆಯ ನೆಮ್ಮದಿಯ ಜೀವನಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಹೆಚ್ಚಿಸಲು ಗಮನ ನೀಡಲಾಗುವುದು. ಮಹತ್ವಾಕಾಂಕ್ಷೆಯ ನರೇಗಲ್, ಕೂಸನೂರು ಏತ ನೀರಾವರಿ ಯೋಜನೆಯ ಅನುಷ್ಠಾನ, ನೀರಾವರಿ ಕಾಲುವೆ, ಚೆಕ್ ಡ್ಯಾಂ, ಗೇಟ್ ಗಳ ಸುಧಾರಣೆಯ ಮೂಲಕ ಅಂತರ್ಜಲ ಮರುಪೂರಣಗೊಳಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಒತ್ತಾಸೆ ಹೊಂದಲಾಗಿದೆ.
* ಶ್ರೀನಿವಾಸ ಮಾನೆ, ಶಾಸಕ ಹಾನಗಲ್ಶಾಶ್ವತ ಕುಡಿಯುವ ನೀರು ಯೋಜನೆಶಿಗ್ಗಾಂವಿ ಸವಣೂರ ತಾಲೂಕಿನಲ್ಲಿ 20 ಸಾವಿರ ಕುಟುಂಬಗಳ ಜನತೆಗೆ ಪಟ್ಟಾ ವಿತರಣೆಯನ್ನು ಮಾಡುವದು, ಶಿಗ್ಗಾಂವಿ, ಸವಣೂರ ಬಂಕಾಪುರಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಮಂಜೂರಾಗಿದ್ದು ಅದನ್ನು ಜಾರಿಗೊಳಿಸುವದು, ಸವಣೂರ ಏತ ನೀರಾವರಿ ಯೋಜನೆ, ಶೈಕ್ಷಣಿಕವಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಪಿಎಸ್‌ಸಿ ಶಾಲೆ ಪ್ರಾರಂಭಿಸುವುದು, ತೆವರಮಳ್ಳಳ್ಳಿ ಹಾಗೂ ಹಿರೇಬೆಂಡಿಗೇರಿ ಆಸ್ಪತ್ರೆಯನ್ನು ಅಭಿವೃದ್ದಿ ಪಡಿಸುವದು, ಸವಣೂರ ನಗರಸಭೆ ಹಾಗೂ ತಡಸ, ಹುಲಗೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮಾಡುವದು, ವರದಾ ಬೇಡ್ತಿ ಕುರಿತು ಯೋಜನೆ ಜಾರಿ ಮಾಡುವ ಗುರಿಯನ್ನು ಹೋಂದಲಾಗಿದೆ .
* ಯಾಶೀರ್ ಅಹ್ಮದಖಾನ್ ಪಠಾಣ, ಶಾಸಕರು, ಶಿಗ್ಗಾಂವಿಉದ್ಯಮ ತರಲು ಆದ್ಯತೆರೈತರ ಆದಾಯ ಹೆಚ್ಚಿಸುವ ಯೋಜನೆಗಳು, ಉದ್ಯಮಗಳನ್ನು ರಾಣಿಬೆನ್ನೂರಿಗೆ ತರಿಸಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಚಿಂತನೆಯಿದೆ. ನಗರದ ಸೌಂದರ್ಯೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಹೊಸ ಬಸ್ ನಿಲ್ದಾಣ ನಿರ್ಮಾಣದ ಮೂಲಕ ಸುಧಾರಿತ ಸಾರಿಗೆ ವ್ಯವಸ್ಥೆ ಮತ್ತು ರಾಣಿಬೆನ್ನೂರನ್ನು ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪಿಸುವುದು ನಮ್ಮ ಸ್ಪಷ್ಟ ಸಂಕಲ್ಪವಾಗಿದೆ. ಜನರ ಸಹಕಾರದೊಂದಿಗೆ ಸಮಗ್ರ ಅಭಿವೃದ್ಧಿಯ ರಾಣಿಬೆನ್ನೂರು ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ.
* ಪ್ರಕಾಶ ಕೋಳಿವಾಡ, ಶಾಸಕರು, ರಾಣಿಬೆನ್ನೂರು