ಸಾರಾಂಶ
ವಡಗೇರಾ : ಕಲ್ಯಾಣ ಕರ್ನಾಟಕ ಯಾವುದರಲ್ಲಿಯೂ ಹಿಂದುಳಿದಿಲ್ಲ. ನಮ್ಮ ಮನಸ್ಥಿತಿ ಹಿಂದುಳಿದಿದೆ. ಇದನ್ನು ತಿದ್ದುವ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಇದಕ್ಕೆ ಮುಖ್ಯ ಕಾರಣ ನಮ್ಮ ಮನಸ್ಥಿತಿ ಅಷ್ಟೇ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಬೆಳೆಸುವ ಮುಖ್ಯ ಧ್ಯೇಯವನ್ನು ಇಟ್ಟುಕೊಂಡು ಭಾರತೀಯ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಡಾ. ಮರಿಯಪ್ಪ ನಾಟೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋನಹಳ್ಳಿ ಮಠದ ನಿತ್ಯಾನಂದ ಸ್ವಾಮಿ, ಬಬಲಾದಿಯ ಮಸ್ತೆಪ್ಪ ಪೂಜಾರಿ, ರಾಚಯ್ಯಸ್ವಾಮಿ ಸ್ಥಾವರಮಠ, ಗ್ರಾಪಂ ಉಪಾಧ್ಯಕ್ಷೆ ರಂಗಮ್ಮ ಹುಲಿ, ವಿರುಪಾಕ್ಷಯ್ಯ ಸ್ವಾಮಿ, ಸೂಗರೆಡ್ಡಿಗೌಡ ಮಾಪಾ, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಸಂಗುಗೌಡ ಮಾಪಾ, ರಾಜಶೇಖರ ಕಾಡಂನೋರ್, ಶರಣಭೂಪಾಲರೆಡ್ಡಿ ಗುರುಸಣಗಿ, ಸಿದ್ದಪ್ಪ ಕಡೇಚೂರ, ಹಣಮಂತ್ರಾಯ ಜಡಿ, ಯಂಕಣ್ಣ ಬಸವಂತಪೂರ, ರಡ್ಡೆಪ್ಪ ಜಡಿ, ದೇವಪ್ಪ ಕಡೇಚೂರ, ಲಿಂಗರಾಜ ಕೊಡಂಗಲ್, ಹುಲೆಪ್ಪ ಗುರುಸಣಗಿ, ಶರಣು ಇಟಗಿ, ಭೀಮಣ್ಣ ಚಿನ್ನಿ, ಶಿವಕುಮಾರ ಕೊಂಕಲ್, ಭೀಮು ಬಸವಂತಪೂರ, ಶ್ರೀದೇವಿ ಸೇರಿದಂತೆ ಇತರರಿದ್ದರು.
;Resize=(128,128))
;Resize=(128,128))
;Resize=(128,128))