ನಾಲ್ಕು ಬಾರಿ ಸಂಸದರಾಗಿರುವವರ ಕೊಡುಗೆ ಏನು ಇಲ್ಲ

| Published : Apr 29 2024, 01:32 AM IST

ನಾಲ್ಕು ಬಾರಿ ಸಂಸದರಾಗಿರುವವರ ಕೊಡುಗೆ ಏನು ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಈ ಭಾಗಕ್ಕೆ ನಾಲ್ಕು ಬಾರಿ ಸಂಸದರಾಗಿರುವವರ ಕೊಡುಗೆ ಏನು ಇಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಈ ಭಾಗಕ್ಕೆ ನಾಲ್ಕು ಬಾರಿ ಸಂಸದರಾಗಿರುವವರ ಕೊಡುಗೆ ಏನು ಇಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಭಾನುವಾರದಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಹನುಮಂತಾಪುರ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಹಳೇಬೆಳವನೂರು, ತುರ್ಚಘಟ್ಟ, ಹೊಸನಾಯ್ಕನಹಳ್ಳಿ, ಕೈದಾಳ್, ಗಿರಿಯಾಪುರ, ಕುಕ್ಕುವಾಡ, ಹೊಸಕೊಳೆನಹಳ್ಳಿ ಮತ್ತು ಹಳೇಕೊಳೆನಹಳ್ಳಿ, ನಾಗರಸನಹಳ್ಳಿ, ಜಡಗನಹಳ್ಳಿ, ಬಲ್ಲೂರು, ಶೀರಗಾನಹಳ್ಳಿ, ಕನಗೊಂಡನಹಳ್ಳಿಗ್ರಾಮಗಳಲ್ಲಿಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪನವರು ಈ ಭಾಗದ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇನ್ನಷ್ಟು ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ನಾಲ್ಕು ಬಾರಿ ಸಂಸದರಾಗಿರುವವರು ಇಲ್ಲಿ ಒಮ್ಮೆಯಾದರು ಬಂದು ಈ ಭಾಗದಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಈ ಭಾಗದಲ್ಲಿ ಶಾಮನೂರು ಶಿವಶಂಕರಪ್ಪನವರು ಅಭಿವೃದ್ಧಿ ಮಾಡದಿದ್ದರೆ. ಸಂಸದರನ್ನು ನೆಚ್ಚಿ ಕುಳಿತಿದ್ದರೆ ಜನರು ಸಂಕಷ್ಟ ಪರಿಸ್ಥಿತಿ ಅನುಭವಿಸಬೇಕಾಗುತ್ತಿತ್ತು. ಇಂತಹ ಸಂಸದರನ್ನು ಮನೆಗೆ ಕಳುಹಿಸಬೇಕಿದೆ ಎಂದು ಕರೆ ನೀಡಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಗ್ರಾಮಾಂತರ ಪ್ರದೇಶದವರು ಸದಾ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ಲೋಕಸಭೆಗೆ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದು, ಹೆಚ್ಚಿನ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನಕಾಂಗ್ರೆಸ್ ಪಕ್ಷತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆ ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ''''''''''''''''ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ'''''''''''''''' ಭರವಸೆ ನೀಡಲಾಗಿದ್ದು, ಹಲವು ಯೋಜನೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆತರುತ್ತೇವೆಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಿ.ಸಿ.ನಿಂಗಪ್ಪ, ಆರನೇಕಲ್ಲು ಮಂಜಣ್ಣ, ಕುಕ್ಕವಾಡ ಮಂಜುನಾಥ್, ಹದಡಿ ಹಾಲಪ್ಪ, ತುರ್ಚಘಟ್ಟದ ಬಸವರಾಜಪ್ಪ, ಅನ್ವರ್, ರಿಯಾಜ್‌ಅಹ್ಮದ್, ಸತೀಶ್, ಉಜ್ಜಪ್ಪ, ಚಂದ್ರಶೇಖರಪ್ಪ, ಮಹೇಂದ್ರ, ಗಿರೀಶ್, ಶಿರಮಗೊಂಡನಹಳ್ಳಿ ರುದ್ರೇಶ್, ಚಂದ್ರಪ್ಪ, ಶಶಿ, ಕೈದಾಳ್ ಮಲ್ಲಿಕಾರ್ಜುನ್, ಹಳೇ ಬಿಸಲೇರಿಗಂಗಣ್ಣ, ಕುಬೇರ, ಎ.ಕೆ.ನೀಲಪ್ಪ, ಶಿರಮಜಾಂಬವಂತ, ಸಂತೋಷ್, ದೇವೆಂದ್ರಪ್ಪ, ಹನುಮಂತಪ್ಪ, ಶಂಕರ್, ಲಿಂಗೇಶ್, ರಾಜಣ್ಣ, ಕರಿಬಸಪ್ಪ, ಪರಮೇಶಪ್ಪ, ತಿಪ್ಪೇಶ್, ಶಂಭಣ್ಣ, ಅಜ್ಜಣ್ಣ, ಸಾಗರ್, ಜರೀಕಟ್ಟೆ ಹನುಮಂತಪ್ಪ, ಬಟ್ಲಕಟ್ಟೆ ಬೀರೇಶ್, ಮಹೇಂದ್ರ, ಚನ್ನಬಸಪ್ಪ, ಸಿದ್ದಪ್ಪ, ಬಲ್ಲೂರು ಸ್ವಾಮಿ, ದೇವೆಂದ್ರಪ್ಪ, ಬಸವರಾಜ್, ಚಿಕ್ಕಣ್ಣ, ಸಿದ್ದಪ್ಪ, ಮಹಾಂತೇಶ್, ಆರನೇಕಲ್ಲು ಹನುಮಂತಪ್ಪ, ತಿಪ್ಪೇಶ್, ಮಹಾದೇವಪುರ ಕೃಷ್ಣ, ಚಂದ್ರಪ್ಪ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.