ಸಾರಾಂಶ
ರೈತರ ಒಕ್ಕೂಟದಲ್ಲಿ ಒಗ್ಗಟ್ಟು ಇದ್ದರೆ ರೈತ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಒಂಕಾರಪ್ಪ ಹೇಳಿದರು. ತಾಲೂಕಿನ ಶ್ರೀರಾಂಪುರದಲ್ಲಿ ದುರ್ಗದ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಏರ್ಪಡಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡಪ್ರಭ ಹೊಸದುರ್ಗ ರೈತರ ಒಕ್ಕೂಟದಲ್ಲಿ ಒಗ್ಗಟ್ಟು ಇದ್ದರೆ ರೈತ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಒಂಕಾರಪ್ಪ ಹೇಳಿದರು. ತಾಲೂಕಿನ ಶ್ರೀರಾಂಪುರದಲ್ಲಿ ದುರ್ಗದ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಏರ್ಪಡಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕಂಪನಿ ಅಭಿವೃದ್ಧಿಯಾಗಲು ಸದಸ್ಯರ ಸಹಕಾರ ಮುಖ್ಯ. ಎಲ್ಲರೂ ಸ್ವಾರ್ಥ ಭಾವನೆ ಬಿಟ್ಟು ಸಂಘಟನೆಗೆ ಕೈ ಜೋಡಿಸಿದರೆ ಕಂಪನಿಯ ಅಭಿವೃದ್ಧಿಯ ಜತೆ ರೈತರು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.ಕಂಪನಿಯ ಸಿಇ ಓ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ಕಂಪನಿ ಯಾವುದೇ ಒಬ್ಬ ವ್ಯಕ್ತಿಯ ಕಂಪನಿಯಲ್ಲ. ಇದಕ್ಕೆ ರೈತರೇ ಮಾಲೀಕರಾಗಿದ್ದು, ಕಂಪನಿಯ ಮೂಲಕ ವ್ಯವಹಾರ ಮಾಡಿದ್ದೇ ಆದರೆ ಕಂಪನಿಯ ಅಭಿವೃದ್ಧಿಯ ಜತೆಗೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.ಕಂಪನಿ ಕಳೆದ ವರ್ಷ 20.26 ಕೋಟಿ ವ್ಯವಹಾರ ಮಾಡಿದ್ದು ₹4.35 ಲಕ್ಷ ಲಾಭ ಹೊಂದಿದೆ. ಮುಂದಿನ ವರ್ಷ ಪ್ರತಿ ಗ್ರಾಪಂ ಮಟ್ಟದಲ್ಲಿ ವ್ಯಾಪಾರ ಮಳಿಗೆ ತೆರೆದು ಕಂಪನಿಯ ಬ್ರಾಂಡ್ ಹೆಸರಿನಲ್ಲಿ ರಾಗಿ ಬಿತ್ತನೆ ಬೀಜ ಮಾರಾಟ ಮಾಡುವ ಗುರಿ ಇದೆ ಎಂದರು.ಕಂಪನಿಯ ಅಧ್ಯಕ್ಷೆ ಶ್ವೇತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಶಾಸಕರ ಪುತ್ರ ಅರುಣ್ ಗೋವಿಂದಪ್ಪ, ಉಪ ಕೃಷಿ ನಿರ್ದೇಶಕ ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ, ಬಬ್ಬುರು ಫಾರಂ ವಿಜ್ಞಾನಿ ಒಂಕಾರಪ್ಪ , ರೈತ ಮುಖಂಡ ಸೋಮೇನಹಳ್ಳಿ ಸ್ವಾಮಿ, ನಬಾರ್ಡ್ ನ ಡಿ.ಡಿ.ಎಂ ಕವಿತಾ, ಮಂಡ್ಯದ ವಿಕಾಸನ ಸಂಸ್ಥೆ ಯ ಕೆಂಪಯ್ಯ, ಮಹೇಶ್ ಚಂದ್ರು, ಎ.ಪಿ.ಎಂ.ಸಿ ಕಾರ್ಯದರ್ಶಿ ಗೌತಮ್ ಕಂಪನಿಯ ನಿರ್ದೇಶಕರು, ಸದಸ್ಯರು ಹಾಜರಿದ್ದರು.