ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌, ಪಾಕ್‌ ಪರ ಘೋಷಣೆ ಕೂಗಿದಾಗ ಎಲ್ಲಿದ್ರಿ?: ನಾರಾಯಣಸಾ ಭಾಂಡಗೆ

| Published : Oct 15 2025, 02:08 AM IST

ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌, ಪಾಕ್‌ ಪರ ಘೋಷಣೆ ಕೂಗಿದಾಗ ಎಲ್ಲಿದ್ರಿ?: ನಾರಾಯಣಸಾ ಭಾಂಡಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಎಸ್‌ಎಸ್‌ ನಿಷೇಧ ಹೇಳಿಕೆ ನೀಡುವ ಪ್ರಿಯಾಂಕ್‌ ಖರ್ಗೆ ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಆದಾಗ, ಹಾದಿ ಬೀದಿ ಹಿಡಿದು ವಿಧಾನಸೌಧದವರೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಅವರು ಹಾಗೆ ಕೂಗೇ ಎಲ್ಲ ಎಂದು ಸಮರ್ಥಿಸಿಕೊಳ್ಳುವ ಗೂಸುಂಬೆ ರಾಜಕಾರಣಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆರ್‌ಎಸ್‌ಎಸ್‌ ನಿಷೇಧ ಹೇಳಿಕೆ ನೀಡುವ ಪ್ರಿಯಾಂಕ್‌ ಖರ್ಗೆ ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಆದಾಗ, ಹಾದಿ ಬೀದಿ ಹಿಡಿದು ವಿಧಾನಸೌಧದವರೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಅವರು ಹಾಗೆ ಕೂಗೇ ಎಲ್ಲ ಎಂದು ಸಮರ್ಥಿಸಿಕೊಳ್ಳುವ ಗೂಸುಂಬೆ ರಾಜಕಾರಣಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಾಗ್ದಾಳಿ ನಡೆಸಿದರು.ಸಚಿವ ಪ್ರಿಯಾಂಕ್‌ ಖರ್ಗೆ ಆರ್.ಎಸ್.ಎಸ್ ಬ್ಯಾನ್‌ ಮಾಡುವ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಹಾಗೂ ಬಾಗಲಕೋಟೆ ಬ್ಲಾಕ್‌ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಹೆಸರೂ ಗಂಡೋ ಹೆಣ್ಣೋ ಎಂಬುವುದನ್ನು ಮೊದಲು ಸಾಬೀತು ಪಡಿಸಲಿ ಆಮೇಲೆ ನೋಡೋಣ ಎಂದು ಹೇಳಿದರು. ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರಭಕ್ತಿ ಸಂಘಟನೆ, ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿಶೇಷ ಕೊಡುಗೆ ನೀಡಿದ್ದು, ಜನರಲ್ಲಿ ದೇಶಪ್ರೇಮ ತುಂಬುವ ಏಕೈಕ ರಾಷ್ಟ್ರಭಕ್ತ, ದೇಶಕ್ಕೆ ಸಮರ್ಪಿತ ಸಂಘಟನೆ. ಜಾತಿ, ಧರ್ಮ ಬೇಧಭಾವ ಮಾಡಲ್ಲ, ಅನೇಕ ಸಂತರು ಶರಣರು, ಲಕ್ಷಾಂತರ ದೇಶಭಕ್ತರು ಸಂಘದಲ್ಲಿದ್ದಾರೆ. ಹೈಕಮಾಂಡ್‌ ಮೆಚ್ಚಿಸಲು ಪ್ರಿಯಾಂಕ್‌ ಖರ್ಗೆ ಆರೆಸ್ಸೆಸ್ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಸುದೀರ್ಘ 100 ವರ್ಷಗಳಿಂದ ರಾಷ್ಟ್ರಸೇವೆ, ಸಮಾಜ ಸೇವೆಯಲ್ಲಿ ಆರ್.ಎಸ್.ಎಸ್‌ ತೊಡಗಿಸಿಕೊಂಡಿದೆ. ಇನ್ನೂ 100 ವರ್ಷ ಕಳೆದರೂ ಸಂಘವನ್ನು ಬ್ಯಾನ್‌ ಮಾಡಲು, ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಸರ್ಕಾರಿ ಜಾಗಗಳಲ್ಲಿ ಆರ್.ಎಸ್.ಎಸ್. ಕಾರ್ಯ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂಗೆ ಪತ್ರ ಬರೆದಿರುವುದು ಹಾಸ್ಯಾಸ್ಪದ. ತಮ್ಮ ಸ್ವಂತ ಜಿಲ್ಲೆ ಕಲಬುರಗಿಯಲ್ಲಿ ಶೈಕ್ಷಣಿಕ ರಂಗದಲ್ಲಿ ಮೂಲಸೌಕರ್ಯ, ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಹಿಂದುಳಿದಿದ್ದು, ರೈತರು ಬರಗಾಲ ಪರಿಹಾರಕ್ಕೆ ಆಗ್ರಹಿಸಿ ಬೀದಿ ಮೇಲೆ ಹೋರಾಟ ಮಾಡುತ್ತಿದ್ದಾರೆ, ಭಾಗ್ಯವತಿ ಅಗ್ಗಿಮಠ ಎನ್ನುವ ಗ್ರಂಥಪಾಲಕಿ ಸಂಬಳ ಬಂದಿಲ್ಲ ಕುಟುಂಬ ನಿರ್ವಹಣೆ ಆಗುತ್ತಿಲ್ಲ ಎಂದು ಮರಣ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟ ವ್ಯವಸ್ಥೆಗೆ ಸಚಿನ್‌ ಪಾಂಚಾಳ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ದೇಶ ವಿರೋಧಿ ಹೇಳಿಕೆ ನೀಡಿವ ಎಸ್ಡಿಪಿಐ ಬ್ಯಾನ್‌ ಮಾಡೋಕೆ ಅಸರ್ಮಥತೆ ಹಾಗೂ ಭಯ ಪಡುವ ಮರಿ ಖರ್ಗೆಯನ್ನು ಸಚಿವ ಸಂಪೂಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಉಪಾಧ್ಯಕ್ಷ ಶೋಭಾ ರಾವ, ಶಶಿಕಲಾ ಮಜ್ಜಗಿ, ಸರಸ್ವತಿ ಕುರಬರ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ ಸೇರಿದಂತೆ ಅನೇಕ ಜನ ಕಾರ್ಯಕರ್ತರು ಭಾಗವಹಿಸಿದ್ದರು.

ಕುಕ್ಕರ್‌ ಬ್ಲಾಸ್ಟ್ ಆದಾಗ, ಪಾಕ್‌ ಪರ ಘೋಷಣೆ ಕೂಗಿದಾಗ, ಪ್ಯಾಲೆಸ್ತೀನ್, ಲೆಬನಾನ್ ದೇಶಗಳ ಉಗ್ರ ಭಾವಚಿತ್ರ ಹಾಗೂ ಧ್ವಜ ಹಿಂಡಿದು ಅವರ ಪರ ಘೋಷಣೆ ಕೂಗಿದಾಗ ತನಿಖೆ ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ಪ್ರಿಯಾಂಕ್‌ ಖರ್ಗೆಯವರಿಗೆ ಭಯ ಕಾಡಿದಿಯೇ.

ನಾರಾಯಣಸಾ ಭಾಂಡಗೆ ರಾಜ್ಯಸಭಾ ಸದಸ್ಯರು ಬಾಗಲಕೋಟೆ