ಟ್ಯಾಂಕರ್‌ಗೆ ಸಿಗುವ ನೀರು ಬಿಬಿಎಂಪಿಗೆ ಏಕಿಲ್ಲ?

| Published : Mar 07 2024, 01:47 AM IST / Updated: Mar 07 2024, 03:06 PM IST

ಟ್ಯಾಂಕರ್‌ಗೆ ಸಿಗುವ ನೀರು ಬಿಬಿಎಂಪಿಗೆ ಏಕಿಲ್ಲ?
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಟ್ಯಾಂಕರ್‌ಗಳಿಗೆ ಸಿಗುವಷ್ಟು ಸಲೀಸಾಗಿ ಬಿಬಿಎಂಪಿಗೆ ಯಾಕೆ ನೀರು ಸಿಗುತ್ತಿಲ್ಲ ಎಂದು ಜನರು ಪ್ರಶ್ನಿಸಿದ್ದಾರೆ. 110 ಹಳ್ಳಿಗಳಲ್ಲಿ ನೀರಿನ ಬವಣೆ ತೀವ್ರಗೊಂಡಿದೆ.

ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿಯುವುದಕ್ಕೆ ಹನಿ ನೀರಿಗೂ ಪರದಾಡುತ್ತಿರುವ 110 ಹಳ್ಳಿ ವ್ಯಾಪ್ತಿಯಲ್ಲಿ ದುಬಾರಿ ದರ ಮೊತ್ತಕ್ಕೆ ನೀರು ಪೂರೈಕೆ ಮಾಡುವ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಕೊಳವೆ ಬಾವಿಯಲ್ಲಿ ಭರಪೂರ ಸಿಗುವ ನೀರು, ಬಿಬಿಎಂಪಿಗೆ ಅಧಿಕಾರಿಗಳಿಗೇಕೆ ಸಿಗುತ್ತಿಲ್ಲ? ಇದು ನಾಗರೀಕರು ಬಿಬಿಎಂಪಿ ಎದುರಿಡುತ್ತಿರುವ ದೊಡ್ಡ ಪ್ರಶ್ನೆ.

ರಾಜಧಾನಿ ಬೆಂಗಳೂರಿನ ಹೊರ ವಲಯದ 110 ಹಳ್ಳಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ನೀರು ಪೂರೈಕೆ ಮಾಡುವ ಜವಾಬ್ದಾರಿ ಹೊಂದಿರುವ ಬಿಬಿಎಂಪಿಯ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. 

ಹೀಗಾಗಿ, ಬಡವರಿಗೆ, ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಮಾಡುವುದಕ್ಕೆ ಆಗುತ್ತಿಲ್ಲ. ಆದರೆ, ಖಾಸಗಿ ಟ್ಯಾಂಕರ್‌ ಮಾಲೀಕರು ರಾಜಾರೋಷವಾಗಿ ದಿನ ನಿತ್ಯ ಸಾವಿರಾರು ಲೀಟರ್ ನೀರನ್ನು ಕೊಳವೆ ಬಾವಿಗಳಿಂದ ಹೊರ ತೆಗೆದು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ.

ಟ್ಯಾಂಕರ್‌ ಮಾಫಿಯದೊಂದಿಗೆ ಅಧಿಕಾರಿಗಳು ಶಾಮೀಲು ಆಗಿರುವುದರಿಂದ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಕೊಳವೆ ಬಾವಿಯಲ್ಲಿ ದೊರೆಯುವ ನೀರಿನ ನಿಧಿ ಬಿಬಿಎಂಪಿ ಅಧಿಕಾರಿಗಳಿಗೆ ಯಾಕೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.ಅಂತರ್ಜಲ ಮಾಫಿಯ ಪಾಲು

ನೀರಿನ ಸಮಸ್ಯೆ ಹೆಚ್ಚಾಗುತ್ತಿದಂತೆ ಟ್ಯಾಂಕರ್‌ ಮಾಫಿಯಾ ಹೆಚ್ಚಾಗಿದ್ದು, ಬೇಕಾ ಬಿಟ್ಟಿ ಕೊಳವೆ ಬಾವಿ ಕೊರೆದು ನೀರೇತ್ತಿ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಬೇಕಾ ಬಿಟ್ಟಿ ನೀರನ್ನು ಮೇಲೆತ್ತುತ್ತಿರುವುದರಿಂದ 110 ಹಳ್ಳಿಯ ವ್ಯಾಪ್ತಿಯಲ್ಲಿ ಜನರು ತಮ್ಮ ಮನೆಗೆ ಕೊರೆಸಿಕೊಂಡ ಕೊಳವೆ ಬಾವಿಗಳಲ್ಲಿಯೂ ನೀರಿನ ಮಟ್ಟ ಕುಸಿಯುತ್ತಿದೆ. 

ಬಹುತೇಕರ ಕೊಳವೆ ಬಾವಿಗಳು ಒಣಗಿ ಹೋಗುತ್ತಿವೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.ಟ್ಯಾಂಕರ್‌ ನೀರೇ ಗತಿ

110 ಹಳ್ಳಿಯ ವ್ಯಾಪ್ತಿಯ 51 ಹಳ್ಳಿಗಳಿಗೆ ವಾರಕ್ಕೆ ಒಂದು ಬಾರಿ ಮಾತ್ರ ಕುಡಿಯುವುದಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ 59 ಹಳ್ಳಿಗಳಿಗೆ ಕೊಳವೆ ಬಾವಿಗಳ ನೀರನ್ನು ಪೂರೈಕೆ ಮಾಡಲಾಗುತ್ತಿದೆ. 

ಒಟ್ಟು 2965 ಕೊಳವೆ ಬಾವಿಗಳಿವೆ. ಈ ಪೈಕಿ ಈಗಾಗಲೇ 1,262 ಕೊಳವೆ ಬಾವಿಗಳ ಒಡಲು ಬರಿದಾಗಿದೆ. ಉಳಿದ 1,703 ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಬೇಕಾಗಿದೆ. ಆದರೆ, ಈ ನೀರು ಸಾಕಾಗುತ್ತಿಲ್ಲ. ಹೀಗಾಗಿ, ಅಲ್ಲಿನ ಜನರು ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್‌ ನೀರು ಪಡೆಯುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.ಬಾಕ್ಸ್...

66 ಹಳ್ಳಿಯಲ್ಲಿ ಸ್ಥಿತಿ ಗಂಭೀರ: 110 ಹಳ್ಳಿಯಲ್ಲಿ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಸರ್ವೇ ನಡೆಸಲಾಗಿದೆ. ಆ ವರದಿಯ ಪ್ರಕಾರ 66 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀರಾ ಗಂಭೀರವಾಗಿದೆ. 

ಉಳಿದ 44 ಹಳ್ಳಿಯಲ್ಲಿ ಭಾಗಶಃ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಇರುವ ಹಳ್ಳಿಗಳಿದ್ದು, 21 ಹಳ್ಳಿಗಳಲ್ಲಿ ಗಂಭೀರ ಸ್ಥಿತಿ ಇದೆ. 10 ಹಳ್ಳಿಯಲ್ಲಿ ಭಾಗಶಃ ಸಮಸ್ಯೆ ಕಂಡು ಬಂದಿದೆ.---ಬಾಕ್ಸ್‌---

110 ಹಳ್ಳಿಗೆ 100 ಟ್ಯಾಂಕರ್‌ ಸಾಕಾ?
ಬಿಬಿಎಂಪಿಯು 110 ಹಳ್ಳಿಯಲ್ಲಿ ನೀರಿನ ಸಮಸ್ಯೆ ಇರುವ ಕಡೆ ನೀರು ಪೂರೈಕೆ ಮಾಡುವುದಕ್ಕೆ 100 ಟ್ಯಾಂಕರ್‌ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡುವುದಾಗಿ ಹೇಳಿದೆ. 

110 ಹಳ್ಳಿಯ ಎಲ್ಲಾ ಜನರಿಗೆ 100 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸಾಧ್ಯವೇ ಎಂದು ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಅಲ್ಲದೇ, ಸುಮ್ಮನೆ ಕಣ್ಣೋರೆಸುವ ತಂತ್ರವನ್ನು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಟೇಬಲ್‌ ಮಾಡಿ...

110 ಹಳ್ಳಿಯ ನೀರಿನ ಸಮಸ್ಯೆ ವಿವರವಿಧಾನಸಭಾ ಕ್ಷೇತ್ರತೀವ್ರ ಸಮಸ್ಯೆ ಇರುವ ಹಳ್ಳಿಭಾಗಶಃ ಸಮಸ್ಯೆ ಇರುವ ಹಳ್ಳಿಯಲಹಂಕ44ಬ್ಯಾಟರಾಯನಪುರ54ಕೆ.ಆರ್.ಪುರ83ಮಹದೇವಪುರ2110ಯಶವಂತಪುರ136ದಾಸರಹಳ್ಳಿ06

ಬೆಂಗಳೂರು ದಕ್ಷಿಣ1413ಅನೇಕಲ್‌10ಒಟ್ಟು6644110 ಹಳ್ಳಿ ಕೊಳವೆ ಬಾವಿ ವಿವರವಿಧಾನಸಭಾ ಕ್ಷೇತ್ರಒಟ್ಟು ಕೊಳವೆ ಬಾವಿಬತ್ತಿದ ಕೊಳವೆ ಬಾವಿನೀರು ಇರುವ ಕೊಳವೆ ಬಾವಿ

ಬೊಮ್ಮನಹಳ್ಳಿ418162256ದಾಸರಹಳ್ಳಿ22469155ಮಹದೇವಪುರ916291625ಕೆ.ಆರ್‌.ಪುರ929571358ಯಲಹಂಕ478169309ಒಟ್ಟು2,9651,2621,703

ವರ್ತೂರು ಭಾಗದಲ್ಲಿ ನೀರಿನ ಸಮಸ್ಯೆ ಪರಿಹಾರ ಮಾಡುವುದಕ್ಕೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಟ್ಯಾಂಕರ್‌ ನೀರಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಗಮಿಸಿದರೆ, ಅಧಿಕಾರಿಗಳು ಮತ್ತು ಟ್ಯಾಂಕರ್‌ ಮಾಲೀಕರು ಶಾಮೀಲ್‌ ಆಗಿದ್ದಾರೆ ಎನ್ನಿಸುತ್ತಿದೆ.

-ದೀಪಕ್‌, ವರ್ತೂರು ನಿವಾಸಿ.