ಸಾರಾಂಶ
ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಸರ್ಕಾರದ ಹೊಸ ಆದೇಶದಿಂದ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್ ಮತ್ತು ಪಡಿತರ ಸೌಲಭ್ಯ ಗಳನ್ನು ಮರಳಿ ಕಲ್ಪಿಸಿ ಕೊಡುವಂತೆ ವೃದ್ಧ ವಿಧವೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ. ಕನಕಪುರದಲ್ಲಿ ಹೊಸ ಕಬ್ಬಾಳು ಗ್ರಾಮದ ವೃದ್ಧೆ ವಿಧವೆ ಮಹಿಳೆ ಪಾರ್ವತಮ್ಮ ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.
ಕನ್ನಡಪ್ರಭ ವಾರ್ತೆ ಕನಕಪುರ
ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಸರ್ಕಾರದ ಹೊಸ ಆದೇಶದಿಂದ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್ ಮತ್ತು ಪಡಿತರ ಸೌಲಭ್ಯ ಗಳನ್ನು ಮರಳಿ ಕಲ್ಪಿಸಿ ಕೊಡುವಂತೆ ವೃದ್ಧ ವಿಧವೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.ತಾಲೂಕಿನ ಸಾತನೂರು ಹೋಬಳಿಯ ಹೊಸ ಕಬ್ಬಾಳು ಗ್ರಾಮದ ವೃದ್ಧೆ ವಿಧವೆ ಮಹಿಳೆ ಪಾರ್ವತಮ್ಮ ಬಿಪಿಎಲ್ ಕಾರ್ಡ್ ಸೌಲಭ್ಯ ಸ್ಥಗಿತಗೊಂಡಿರುವುದಕ್ಕೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೊಸ ಕಬ್ಬಾಳು ಗ್ರಾಮದಲ್ಲಿ ತನ್ನ ಮಗನೊಂದಿಗೆ ವಾಸ ವಿರುವ 60 ವರ್ಷದ ಇಳಿ ವಯಸ್ಸಿನ ವೃದ್ಧ ಮಹಿಳೆ ಪಾರ್ವತಮ್ಮಇವರ ಪತಿ ಕಳೆದ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು, ಇದ್ದ ಒಬ್ಬ ಮಗನು ಉದ್ಯೋಗವಿಲ್ಲದೆ ನಿರುದ್ಯೋಗಿಯಾಗಿ ಸರ್ಕಾರ ಕೊಡುತ್ತೀ ಬರುತ್ತಿದ್ದ ಪಡಿತರ ಮತ್ತು ವಿಧವಾ ವೇತನದ ಸೌಲಭ್ಯಗಳಿಂದಲೇ ತಾಯಿ ಮಗ ಜೀವನ ನಡೆಸುತ್ತಿದ್ದರು ಈಗ ಅದು ಸ್ಥಗಿತ ಗೊಂಡಿರುವುದು ವೃದ್ಧ ಮಹಿಳೆ ದಿಕ್ಕು ತೋಚದಂತಾಗಿದೆ.
ಸರ್ಕಾರ ಕೆಲವು ಮಾನದಂಡಗಳ ಆಧಾರದ ಮೇಲೆ ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಆದೇಶ ಮಾಡಿದೆ ಆದರೆ ವೃದ್ಧೆ ವಿಧವಾ ಮಹಿಳೆ ಹೇಳುವ ಪ್ರಕಾರ ಈ ಕುಟುಂಬ ತೆರಿಗೆ ಪಾವತಿ ವ್ಯಾಪ್ತಿಗೂ ಬರುವುದಿಲ್ಲ ವಾರ್ಷಿಕ ಆದಾಯದ ಮಿತಿಗೂ ಒಳಪಡುವುದಿಲ್ಲ ಹೀಗಿದ್ದರೂ ಕೂಡ ವೃದ್ಧ ಮಹಿಳೆಯ ಬಿಪಿಎಲ್ ಕಾರ್ಡ್ ಅನರ್ಹರ ಪಟ್ಟಿಗೆ ಸೇರಿಸಿ ರದ್ದುಪಡಿಸುವುದು ಮಹಿಳೆ ಯನ್ನು ಮುಂದೇನು ಎಂಬ ಚಿಂತೆಗೀಡು ಮಾಡಿದೆ. ಈ ವೃದ್ಧ ಮಹಿಳೆ ತನ್ನ ಮಗನೊಂದಿಗೆ ವಾಸ ಮಾಡುತ್ತಾ ಸರ್ಕಾರ ಬಡವರಿಗಾಗಿ ನೀಡುತ್ತಿರುವ ಬಿಪಿಎಲ್ ಕಾರ್ಡ್ ಸೌಲಭ್ಯವನ್ನು ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ ಕೂಡಲೇ ಮಹಿಳೆಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಕೊಡಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನನಗೆ ಹಣ ಬರುತ್ತಿಲ್ಲ ನನ್ನ ಮಗ ಕೂಡ ನಿರುದ್ಯೋಗಿ ನನಗೂ ಸಹ ವಯಸ್ಸಾಗಿದೆ. ಕೂಲಿ ಮಾಡುವ ಶಕ್ತಿಯೂ ನನ್ನಲ್ಲಿಲ್ಲ ಸರ್ಕಾರ ಕೊಡುತ್ತಿದ್ದ ಪಡಿತರ ಮತ್ತು ವಿಧವಾ ವೇತನ ನಂಬಿಕೊಂಡು ಜೀವನ ಮಾಡುತ್ತಿದ್ದೆ. ಆದರೆ ಈಗ ಕಳೆದ ಒಂದು ವರ್ಷದಿಂದ ವಿಧವಾ ವೇತನವೂ ಬರುತ್ತಿಲ್ಲ. ಸರ್ಕಾರ ನನ್ನ ಬಿಪಿಎಲ್ ಕಾರ್ಡನ್ನು ರದ್ದು ಮಾಡಿ ಪಡಿತರವನ್ನು ಕೊಡದೆ ಸ್ಥಗಿತಗೊಳಿಸಿದ್ದಾರೆ. ಸರ್ಕಾರದ ಎಲ್ಲಾ ಸೌಲಭ್ಯಗಳು ನಿಂತಿವೆ ನಾವು ಬಡವರು ಹೊಟ್ಟೆ ತುಂಬಿಸಿಕೊಳ್ಳಲು ಅಕ್ಕಿ ಇಲ್ಲದಂತಾಗಿದೆ. - ಪಾರ್ವತಮ್ಮ, ಅಸಹಾಯ ವೃದ್ಧೆ.