ಸಾರಾಂಶ
ಬೆಳಗಾವಿ: ಕಾಡು ಹಂದಿಯನ್ನು ಬೇಟೆ ಆಡಿ ತೆಗೆದುಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ಅರಣ್ಯ ಇಲಾಖೆಯ ಅಧಿಕಾರಗಳು ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಆರು ಜೀವಂತ, ಮೂರು ಸತ್ತ ಕಾಡು ಹಂದಿಗಳನ್ನು ರಕ್ಷಣೆ ಮಾಡಿದ ಘಟನೆ ರಾಯಬಾಗ ರಾಜವಾಡಿ, ಬೂದಿಹಾಳ ಕ್ರಾಸ್ ಹತ್ತಿರ ಭಾನುವಾರ ನಡೆದಿದೆ.
ಬೆಳಗಾವಿ: ಕಾಡು ಹಂದಿಯನ್ನು ಬೇಟಿ ಆಡಿ ತೆಗೆದುಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ಅರಣ್ಯ ಇಲಾಖೆಯ ಅಧಿಕಾರಗಳು ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಆರು ಜೀವಂತ, ಮೂರು ಸತ್ತ ಕಾಡು ಹಂದಿಗಳನ್ನು ರಕ್ಷಣೆ ಮಾಡಿದ ಘಟನೆ ರಾಯಬಾಗ ರಾಜವಾಡಿ, ಭೂದಿಹಳ ಕ್ರಾಸ್ ಹತ್ತಿರ ಭಾನುವಾರ ನಡೆದಿದೆ.
ರಾಯಬಾಗ ತಾಲೂಕಿನ ಮೇಕಳಿ ಗ್ರಾಮದವರು ಬಂಧಿತರು. ಗುಲ್ಬರ್ಗ ಅರಣ್ಯದಲ್ಲಿ ಬೇಟೆಯಾಡಿ ಹಂದಿಗಳನ್ನು ಹಿಡಿದು ತಂದಿದ್ದಾರೆ ಎನ್ನಲಾಗಿದೆ. ನಸಿಕಿನ ಜಾವ ಬುಲೆರೋ ಪಿಕಪ್‌ನಲ್ಲಿ ಆರು ಕಾಡು ಹಂದಿಗಳು ಸೇರಿದಂತೆ ೩ ಸತ್ತ ಹಂದಿಗಳನ್ನು ತೆಗೆದುಕೊಂಡು ಹೋಗುವಾಗ ಬೆಳಗಾವಿ ಅರಣ್ಯ ಸಂಚಾರಿ ದಳ ಬೆಳಗಾವಿ ಎಸಿಎಫ್ ಕವಿತಾ ಇರನಟ್ಟಿ, ಆರ್‌ಎಫ್‌ಒ ಪುರುಷೋತ್ತಮ್ ರಾವುಜಿ, ಡೆಪ್ಯೂಟಿ ಆರ್‌ಎಫ್‌ಒ ಸಿಂಬದಿಗಳಾದ ಬಿರಾದಾರ ಗಂಟಿ, ಕವಿತಾ ಪ್ರವೀಣ ಜೋತಿ ಅಧಿಕಾರಿಗಳು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.