ಕಾಡು ಹಂದಿ ಬೇಟೆ: ಓರ್ವನ ಬಂಧನ 6ಜನ ಪರಾರಿ

| Published : Jul 25 2025, 12:30 AM IST

ಸಾರಾಂಶ

ಶೀಬಿ ಗಸ್ತಿನ ವ್ಯಾಪ್ತಿಯ ಕಳ್ಳಂಬೆಳ್ಳ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೇ ನಂ 89ರಲ್ಲಿ ಕಾಡು ಹಂದಿ ಸುಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ 4 ಕಾಡುಹಂದಿಗಳ ಮೃತದೇಹ ಹಾಗೂ ಒಂದು ಬೈಕ್‌, ಒಂದು ಸತ್ತರ್‌, ಒಂದು ಚೂರಿ ಹಾಗೂ ಮಾಂಸ ಕತ್ತರಿಸಲು ಬಳಸುವ 2 ಮರದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ಶಿ ಶಿರಾ

ಗುರುವಾರ ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿ ಬೋರಸಂದ್ರ ಗ್ರಾಮದ ವಾಸಿಯಾದ ಲೋಕೇಶ ರಂಗದಾಸಪ್ಪ, ಸಿದ್ದಪ್ಪ ಬಿನ್‌ ತಿಪ್ಪೇಸ್ವಾಮಿ, ರಾಮಣ್ಣ ಬಿನ್‌ ಗೋವಿಂದಪ್ಪ ರವಿ , ರಮೇಶ, ಮೂರ್ತಿ ಬಿನ್‌ ತಿಗಳಪ್ಪ, ರಂಗಯ್ಯ ಬಿನ್‌ ಲೇಟ್‌ ರಾಜಣ್ಣ ಎಂಬುವವರು ಸೇರಿ ಕಾಡುಹಂದಿಗಳನ್ನು ಬೇಟೆಯಾಡಿ ಕಾಡಿನಲ್ಲಿಯೇ ಬೇಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅರಣ್ಯಾ ಸಂರಕ್ಷಣಾಧಿಕಾರಿ ಶಶಿಧರ ಜಿ.ಆರ್‌ ಮಾರ್ಗದರ್ಶನದಲ್ಲಿ, ಮಧುಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ ಎಚ್‌, ಶಿರಾ ವಲಯದ ವಲಯ ಅರಣ್ಯಾಧಿಕಾರಿ ನವನೀತ್‌ ಟಿ.ಎನ್‌, ಉಪವಲಯ ಅರಣ್ಯಾಧಿಕಾರಿ ನಾಗರಾಜು , ಶೀಬಿ ಗಸ್ತಿನ ಅರಣ್ಯ ಪಾಲಕ ನಿಂಗರಾಜು, ಸಹಾಯಕ ಸಿಬ್ಬಂದಿ ನಿಜಲಿಂಗಪ್ಪ ಇವರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಲೋಕೇಶ್ ಮಾತ್ರವೇ ಸೆರೆ ಸಿಕ್ಕಿದ್ದು ಉಳಿದವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಶಿರಾ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ (ರಕ್ಷಣಾ) ಕಾಯ್ದೆ-1972ರ ಕಲಂ 2(16),9,39,51 ರಡಿ ಪ್ರಕರಣ ದಾಖಲಿಸಿ ಪರಾರಿಯಾದ 6 ಜನ ಆರೋಪಿಗಳ ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.