ಇಪ್ಪತ್ತು ದಿನಗಳಿಂದ ಏಳೆಂಟು ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತ ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು, ಕೃಷಿಕರು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿ ಪೋಷಿಸಿದಂತಹ ವಿವಿಧ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೋಲಾರ್‌ ವಿದ್ಯುತ್ ತಂತಿ ಬೇಲಿಯತ್ತ ಮೊರೆ ಹೋದ ಪರಿಣಾಮ ಕಾಡಾನೆಗಳ ಕಾಟ ಸ್ವಲ್ಪ ಕಡಿಮೆ ಆಗಿದೆ.

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೆಗರ್ಜೆ ಗ್ರಾಮದ ಗಡಿಭಾಗದ ಎಸ್ಟೇಟೀನ ಸುತ್ತಮುತ್ತ ಏಳೆಂಟು ಕಾಡು ಕೋಣಗಳ ಗುಂಪು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೆಗರ್ಜೆ ಗ್ರಾಮದ ಗಡಿ ಭಾಗದಲ್ಲಿರುವ ಗುಡ್ ಪೇಟಾ ಎಸ್ಟೇಟೀನ ಸುತ್ತ ಮುತ್ತಲಿನಲ್ಲಿ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಏಳೆಂಟು ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತ ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು, ಕೃಷಿಕರು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿ ಪೋಷಿಸಿದಂತಹ ವಿವಿಧ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೋಲಾರ್‌ ವಿದ್ಯುತ್ ತಂತಿ ಬೇಲಿಯತ್ತ ಮೊರೆ ಹೋದ ಪರಿಣಾಮ ಕಾಡಾನೆಗಳ ಕಾಟ ಸ್ವಲ್ಪ ಕಡಿಮೆಗಾಗಿದೆ. ಇದರ ಬೆನ್ನಲ್ಲೇ ಹಲವು ದಿನಗಳಿಂದ ಕಡೆಗರ್ಜೆ ಹಾಗೂ ಸುತ್ತಮುತ್ತಲಿನಲ್ಲಿ ಸುಮಾರು ಏಳೆಂಟು ಕಾಡುಕೋಣಗಳ ಗುಂಪು ಪ್ರತ್ಯಕ್ಷವಾಗಿದ್ದು ಆತಂಕ ಎದುರಾಗಿದೆ.

ಸದ್ಯ ಇಲ್ಲಿಯವರೆಗೆ ಕಾಡುಕೋಣಗಳಿಂದ ಸ್ಥಳೀಯರಿಗೆ ಯಾವುದೇ ಅನಾಹುತಗಳಾಗಲಿ ಅಥವಾ ಬೆಳೆಹಾನಿಯಾಗಿರುವುದು ಕಂಡು ಬಂದಿಲ್ಲ ಎಂಬುದೇ ತುಸು ನಿರಾಳತೆಗೆ ಕಾರಣವೆನಿಸುತ್ತದೆ. ಅದೇನೇ ಇರಲಿ ಸುತ್ತಮುತ್ತಲಿನ ಕೃಷಿಕರು ತೋಟದ ಕೂಲಿ ಕಾರ್ಮಿಕರು ಜಾಗ್ರತೆಯಿಂದ ಇರುವುದು ಉತ್ತಮ ಹಾಗೂ ಕಾಡುಕೋಣಗಳ ಚಲನವಲನಗಳ ಬಗ್ಗೆ ಅರಣ್ಯ ಇಲಾಖೆಯು ಆಗಿಂದಾಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎನ್ನುವುದು ಬೆಳೆಗಾರರ ಮನವಿಯಾಗಿದೆ.