ಕಾಡಾನೆ ದಾಳಿ ತೆಂಗಿನ ಸಸಿ ನಾಶ

| Published : Mar 24 2025, 12:31 AM IST

ಸಾರಾಂಶ

ಗುಂಡ್ಲುಪೇಟೆ: ತಾಲೂಕಿನ ಆಲತ್ತೂರು ಗ್ರಾಮದ ಬಳಿ ಕಾಡಾನೆ ದಾಳಿ ನಡೆಸಿ ಐದು ತೆಂಗಿನ ಸಸಿಗಳನ್ನು ಮುರಿದು ಹಾಕಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಗುಂಡ್ಲುಪೇಟೆ: ತಾಲೂಕಿನ ಆಲತ್ತೂರು ಗ್ರಾಮದ ಬಳಿ ಕಾಡಾನೆ ದಾಳಿ ನಡೆಸಿ ಐದು ತೆಂಗಿನ ಸಸಿಗಳನ್ನು ಮುರಿದು ಹಾಕಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಟಿ.ಶಾಂತೇಶ್ ಗೆ ಸೇರಿದ ತೋಟದಲ್ಲಿ ಕಾಡಾನೆ ದಾಳಿ ಇಟ್ಟು ತೆಂಗಿನ ಸಸಿಗಳನ್ನು ಒದ್ದು ಮುರಿದು ಹಾಕಿವೆ. ಕಳೆದ ವಾರದಿಂದ ಮೂರು ಬಾರಿ ಕಾಡಾನೆಗಳು ಟಿ.ಶಾಂತೇಶ್‌ಗೆ ಸೇರಿದ ತೋಟದಲ್ಲಿ ತೆಂಗಿನ ಸಸಿಗಳನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿಗೆ ಆಲತ್ತೂರು, ಮಂಚಹಳ್ಳಿ ಸುತ್ತ ಮುತ್ತ ರೈತರು ಆತಂಕಗೊಂಡಿದ್ದಾರೆ. ರೈತರ ಆತಂಕವನ್ನು ಅರಣ್ಯ ಇಲಾಖೆ ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.