ಮದೆನಾಡು ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಜೀವಪಾಯದಿಂದ ಪಾರಾ ಘಟನೆ ಭಾನುವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲುಮದೆನಾಡು ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಜೀವಪಾಯದಿಂದ ಪಾರಾ ಘಟನೆ ಭಾನುವಾರ ಸಂಜೆ ನಡೆದಿದೆ. ಮದೆ ನಾಡು ಗ್ರಾಮದ ನಿವಾಸಿ ಭರತ್ ಕುಮಾರ್ (50) ಕಾಡಾನೆ ದಾಳಿಗೆ ಒಳಗಾದ ದುರ್ದೈವಿ.
ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿರುವ ಭರತ್ ಕುಮಾರ್ ಎಂದಿನಂತೆ ತಮ್ಮ ಬೈಕಿನಲ್ಲಿ ಮದನಾಡು - ಬೆಟ್ಟತ್ತೂರು ರಸ್ತೆಯಲ್ಲಿ ಸಂಚರಿಸುತ್ತಿರುವ ಸಂದರ್ಭ ಸಾಲಪು ಎಂಬಲ್ಲಿ ರಸ್ತೆಯ ಮಧ್ಯೆ ದಿಢೀರನೆ ಪ್ರತ್ಯಕ್ಷವಾದ ಕಾಡಾನೆಗಳ ಹಿಂಡು ದಾಳಿ ಮಾಡಿ ಸೊಂಡಿಲಿನಿಂದ ಎಸೆದ ಪರಿಣಾಮ ಕಾಲು ಮುರಿತಗೊಂಡು ತಲೆಗೂ ಗಾಯಗಳಾಗಿದ್ದು ಬೈಕ್ ಜಖಂಗೊಂಡಿದೆ. ಈ ಸಂದರ್ಭ ಸಮೀಪದ ಮನೆಯವರು ಬೊಬ್ಬೆ ಕೇಳಿ ವಿಷಯ ತಿಳಿದ ಬಳಿಕ ಗ್ರಾಮ ಪಂಚಾಯತಿ ಸದಸ್ಯ ಬಿ ಸಿ ಸಜ್ಜನ್ ವೈನೆರವನ ಪರಶುರಾಮ ಗಾಯಗೊಂಡಿರುವ ಭರತ್ ಕುಮಾರ್ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಮದೆನಾಡು ಗ್ರಾಮದಲ್ಲಿ ನಿರಂತರವಾಗಿ ಆನೆ ಹಾವಳಿ ಮುಂದುವರೆದಿದ್ದು ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಈಗಾಗಲೇ ಆನೆಗಳಿಂದ ಅಪಾರ ಕೃಷಿ ನಷ್ಟ ಹೊಂದಿರುವ ಜನರು ಈಗ ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಬಂದಿದೆ. ಇನ್ನಾದರೂ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಶಾಶ್ವತ ವಾಗಿ ಕಾಡಿಗಟ್ಟುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.