ಸಾರಾಂಶ
ಆನಂದಪುರ: ಆಚಾಪುರ ಗ್ರಾಪಂ. ಪತ್ರ ಹೊಂಡ ಗ್ರಾಮದಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಆನೆಗಳು ಬೆಳೆ ನಾಶಪಡಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ರಿ ಹೋಂಡ ಗ್ರಾಮದ ಗೀತಮ್ಮ ವೆಂಕಟಸ್ವಾಮಿ ಅವರ ಅಡಿಕೆ ತೋಟಕ್ಕೆ ಕಾಡಾನೆ ಕಳೆದ ರಾತ್ರಿ ದಾಳಿ ಮಾಡಿ ಅಡಿಕೆ, ಬಾಳೆ ಹಾಗೂ ತೆಂಗು ಬೆಳೆಗಳಿಗೆ ಹಾನಿ ಉಂಟುಮಾಡಿವೆ. 30ಕ್ಕೂ ಹೆಚ್ಚು ಅಡಿಕೆ ಮರ, ತೆಂಗಿನ ಗಿಡ, ಹಾಗೂ ಬಾಳೆಯ ಗಿಡಗಳನ್ನು ನಾಶಪಡಿಸಿವೆ. ಗಿಳಾಲ್ ಗುಂಡಿ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ತಂಗಳವಾಡಿ, ಕಣ್ಣೂರು, ಕಂಚಾಳಸರ, ಅಂಬ್ಲಿಗೋಳ, ಮೂಡಹಗಲು, ಲಕ್ಕವಳ್ಳಿ, ಕೆರೆ ಹಿತ್ಲು, ಭಾಗದಲ್ಲಿ ಕಾಡಾನೆ ನಿರಂತರವಾಗಿ ರೈತರ ಬೆಳೆಗೆ ಹಾನಿಗೊಳಿಸುತ್ತಿವೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆನೆಗಳನ್ನು ಓಡಿಸುವಲ್ಲಿ ನಿರ್ಲಕ್ಷತನ ತೋರುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಆನೆಗಳು ರೈತರ ಬೆಳೆಯನ್ನು ನಾಶಪಡಿಸುತ್ತಿವೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಶಾಸಕರು ಭೇಟಿ ಕೊಟ್ಟಾಗ ಮಾತ್ರ ಅಧಿಕಾರಿಗಳು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ನಿಯೋಜಿಸಬೇಕು. ಶಾಸಕರು ತಕ್ಷಣವೇ ಅರಣ್ಯ ಇಲಾಖೆಯವರಿಗೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.
----------------------ಫೋಟೋ: ಆನಂದಪುರ ಸಮೀಪದ ಪತ್ರೆ ಹೊಂಡ ಗ್ರಾಮದ ಗೀತಮ್ಮ ವೆಂಕಟಸ್ವಾಮಿ ಎಂಬುವರ ಅಡಿಕೆ ತೋಟಕ್ಕೆ ಭಾನುವಾರ ರಾತ್ರಿ ಕಾಡಾನೆಗಳ ನುಗ್ಗಿ ಅಡಿಕೆ, ಬಾಳೆ, ತೆಂಗು ಗಿಡಗಳನ್ನು ನಾಶಪಡಿಸಿರುವುದು.