ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಬಳಿ ಗುರುವಾರ ಸಂಜೆ ಕಾಡಾನೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಎದುರಾಗಿದೆ.

ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಬಳಿ ಗುರುವಾರ ಸಂಜೆ ಕಾಡಾನೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಎದುರಾಗಿದೆ.

ಮಘೇಬೈಲು ಗ್ರಾಮದ ಗುಲಾಬಿ ಎಂಬುವವರ ತೋಟದಲ್ಲಿ ಅಡಕೆ, ಬಾಳೆ ಸೇರಿದಂತೆ ಗಿಡಗಳನ್ನು ನಾಶಪಡಿಸಿದ್ದು ಸುತ್ತ ಮುತ್ತಲ ಪ್ರದೇಶಗಳಲ್ಲಿ ಓಡಾಡುತ್ತಿದೆ. ಗುರುವಾರ ಸಂಜೆ ವೇಳೆ ಅಡಕೆ ಸುಲಿವ ಕೆಲಸಕ್ಕೆ ಹೋಗಿದ್ದ ತಾಯಿಯನ್ನು ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದ ಮಗನಿಗೆ ರಸ್ತೆ ಸಮೀಪ ದೂರದಲ್ಲಿ ಕಾಡಿನಲ್ಲಿ ಬಿದಿರು ತಿನ್ನುತ್ತಿದ್ದ ಕಾಡಾನೆ ಕಂಡು ಬಂದಿದ್ದು, ತಾಯಿ ಮಗ ಇಬ್ಬರೂ ಓಡಿ ಮನೆ ಸೇರಿ ಜೀವ ಉಳಿಸಿಕೊಂಡಿದ್ದಾರೆ.

ವಿಷಯವನ್ನು ಸುತ್ತಮುತ್ತಲ ಜನರಿಗೂ ತಿಳಿಸಿದ್ದಾರೆ. ಕೆಲ ದಿನಗಳಿಂದ ಆನೆ ಕಾಟದಿಂದ ನೆಮ್ಮದಿ ಕಂಡಿದ್ದ ಜನರಿಗೆ ಮತ್ತೆ ಈಗ ಆನೆ ಓಡಾಟ ನಿದ್ದೆಗೆಡಿಸಿದೆ. ಕೆಲ ತಿಂಗಳುಗಳ ಹಿಂದೆ ಕೆರೆ ಪಂಚಾಯಿತಿ ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆರೆಗೆದ್ದೆ, ಮುಡುಬ, ಶೀರ್ಲು, ಕೆರೆಕಟ್ಟೆ, ಗಣಪತಿಕಟ್ಟೆ, ಗುಲಗಂಜಿಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆನೆ ಓಡಾಟವಿತ್ತು. ಇಬ್ಬರು ಅಮಾಯಕರನ್ನು ತುಳಿದು ಹಾಕಿ ಜೀವ ಬಲಿ ಕೂಡ ಪಡೆದುಕೊಂಡಿತ್ತು. ನರಹಂತಕ ಕಾಡಾನೆ ಸೆರೆಹಿಡಿದಿದ್ದರೂ,ಕೆಲ ಸಮಯಗಳ ನಂತರ ಮತ್ತೆರೆಡು ಕಾಡಾನೆಗಳು ಪ್ರತ್ಯಕ್ಷಗೊಂಡು ಓಡಾಟ ಆರಂಬಿಸಿತ್ತು.

ಈಗ ಪ್ರವಾಸಿ ತಾಣವಾಗಿರುವ ಸಿರಿಮನೆ ಜಲಪಾತ ಸಮೀಪದ ಮಘೆಬೈಲಿನಲ್ಲಿ ಕಾಡಾನೆ ಹೆಜ್ಜೆ ಹಾಕಿರುವುದು ಪ್ರವಾಸಿಗರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಕಿಗ್ಗಾ, ಸಿರಿಮನೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ, ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ಸುತ್ತಮುತ್ತಲ ಗ್ರಾಮಸ್ಥರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

9 ಶ್ರೀ ಚಿತ್ರ 1-ಗೇರಿ ಕಿಗ್ಗಾ ಮಘೇಬೈಲು ಬಳಿ ತೋಟವೊಂದರಲ್ಲಿ ಕಾಡನೆ ಪ್ರತ್ಯಕ್ಷಗೊಂಡಿರುವುದು.