ಸಾರಾಂಶ
ಯವಕಪಾಡಿ ಗ್ರಾಮದ ಕಬ್ಬಿನಕಾಡಿನಲ್ಲಿ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಯವಕಪಾಡಿ ಗ್ರಾಮದ ಕಬ್ಬಿನಕಾಡಿನಲ್ಲಿ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.ಕಾಡಾನೆಗಳು ಮಞ0ಡ್ರ ಸುರೇಶ್ ಮತ್ತು ಸರು ಅವರ ಮನೆಯಂಗಳಕ್ಕೆ ಬಂದು ಅಡ್ಡಾಡಿದ್ದಲ್ಲದೆ ಮನೆಯ ಸುತ್ತಮುತ್ತಲಿನ ತೋಟದಲ್ಲಿದ್ದ ಬಾಳೆ, ಕಾಫಿ ಮತ್ತು ಕೃಷಿ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಪಡಿಸಿವೆ . ಗ್ರಾಮ ಸುತ್ತಮುತ್ತಲ ಬೆಳೆಗಾರರ ತೋಟಗಳಿಗೆ. ಕಾಡಾನೆಗಳು ಲಗ್ಗೆ ಇಟ್ಟಿವೆ. ಹತ್ತಾರು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಕಾಡಾನೆಗಳ ಉಪಟಳ ನುಂಗಲಾರದ ತುತ್ತಾಗಿದೆ. ಇದೀಗ ಬತ್ತದ ನಾಟಿ ಮುಗಿದ ಅವಧಿಯಾಗಿದ್ದು ಪೈರುಗಳು ನಾಶವಾದರೆ ರೈತರು ಬತ್ತದ ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಲಿದೆ. ಕಳೆದ ಇದೆ ಅವಧಿಯಲ್ಲಿ ನಾಟಿ ಗದ್ದೆಗಳಿಗೂ ಕಾಡಾನೆ ದಾಳಿ ನಡೆಸಿದವು, ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಗಳಿಂದಾಗಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಜೀವ ಹಾನಿ ಸಂಭವಿಸುವ ಮೊದಲು ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಬೆಳೆಗಾರರರು ಒತ್ತಾಯಿಸಿದ್ದಾರೆ.