ಬನ್ನೂರಲ್ಲಿ ಕಾಡಾನೆ ದಾಳಿ

| Published : Feb 27 2024, 01:35 AM IST

ಸಾರಾಂಶ

ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.

ಬಾಳೆಹೊನ್ನೂರು: ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.

ಬನ್ನೂರು ಗ್ರಾಮದ ಕುಂಬ್ರುಮನೆ ಎಂಬಲ್ಲಿ ಪವನ್ ಎಂಬುವರ ತೋಟಕ್ಕೆ ನುಗ್ಗಿರುವ ಕಾಡಾನೆ ಹತ್ತಾರು ಅಡಕೆ ಮರಗಳನ್ನು ಮುರಿದು ಹಾಳುಗೆಡವಿದೆ. ಅಕ್ಕಪಕ್ಕದ ತೋಟಗಳಿಗೂ ಲಗ್ಗೆ ಇಟ್ಟಿರುವ ಕಾಡಾನೆ ಅಡಕೆ, ಕಾಫಿ ಗಿಡಗಳನ್ನು ಮುರಿದು ಹಾಳು ಮಾಡಿದೆ.

ಈ ಭಾಗದಲ್ಲಿ ನಿರಂತರವಾಗಿ ಕಾಡಾನೆ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

೨೬ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಕುಂಬ್ರುಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ತುತ್ತಾಗಿರುವ ಅಡಕೆ ತೋಟ.