ಕಾಡುಪ್ರಾಣಿ ಹಾವಳಿ: ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

| Published : Nov 21 2024, 01:01 AM IST

ಕಾಡುಪ್ರಾಣಿ ಹಾವಳಿ: ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬೆಬೆಳ್ಳೂರು, ಪುದುಕೋಟೆ , ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳಲ್ಲಿ ತಿಂಗಳುಗಳಿದ ಕಾಡಾನೆಗಳ ಉಪಟಳ ನಿರಂತರವಾಗಿದೆ. ಜೊತೆಗೆ ವ್ಯಾಘ್ರ ಭೀತಿಯೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಬೆಳೆಗಾರರು ಬುಧವಾರ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬೆಬೆಳ್ಳೂರು, ಪುದುಕೋಟೆ , ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳಲ್ಲಿ ತಿಂಗಳುಗಳಿದ ಕಾಡಾನೆಗಳ ಉಪಟಳ ನಿರಂತರವಾಗಿದೆ. ಜೊತೆಗೆ ವ್ಯಾಘ್ರ ಭೀತಿಯೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಬೆಳೆಗಾರರು ಬುಧವಾರ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಜಾಥಾ ತೆರಲಿ ಪಟ್ಟಣದ ಗಡಿಯಾರ ಕಂಭದ ಬಳಿ ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಸತತ ಐದು ವರ್ಷಗಳಿಂದ ಕಾಡಾನೆ ದಾಳಿಯಿಂದಾಗಿ ಈ ಭಾಗದ ರೈತಾಪಿ ವರ್ಗ ಕಂಗಾಲಾಗಿದೆ. ಬೆಳೆಗಳು ನಾಶವಾಗಿ ಆರ್ಥಿಕವಾಗಿ ಕಂಗೆಟ್ಟಿದ್ದೇವೆ. ತೋಟದ ಮಾಲೀಕರು ಬೀದಿ ಬರುವ ಪರಿಸ್ಥಿತಿ ಉಂಟಾಗಿದೆ. ಕಾಡಾನೆ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕಾರ್ಮಿಕರು ತೋಟಕ್ಕೆ ತೆರಳದೆ ಕಾಫಿ ತೋಟಗಳು ಅವನತಿಯತ್ತ ಸಾಗಿದೆ. ಪರಿಹಾರ ಯೋಜನೆಯಲ್ಲಿ ಕಿಂಚಿತ್ತು ಹಣ ನೀಡಿ ರೈತರ ಕಣ್ಣೀರು ಒರೆಸುವ ಕಾರ್ಯ ಅರಣ್ಯ ಇಲಾಖೆ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾಡಾನೆ ಜೊತೆ ಹುಲಿ ದಾಳಿ ಭೀತಿಯೂ ಎದುರಾಗಿದೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರಕ್ಕೆ ಮುಂದಾಗದಿರುವುದು ಗ್ರಾಮಸ್ಥರಲ್ಲಿ ಅರಣ್ಯ ಇಲಾಖೆಯ ಮೇಲಿರುವ ನಂಬಿಕೆ ಕಳೆದುಕೊಂಡಂತಾಗಿದೆ. ಹುಲಿ ಗ್ರಾಮದ ವಿವಿಧ ಭಾಗಗಳಲ್ಲಿ ಪ್ರತ್ಯಕ್ಷನಾಗಿ ಭಯದ ವಾತವರಣ ಸೃಷ್ಟಿ ಮಾಡಿದ್ದು, ಮಕ್ಕಳು ಕಾರ್ಮಿಕರು ಗ್ರಾಮಸ್ಥರು ಭಯದ ನೆರಳಿನಲ್ಲಿ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ. ಹುಲಿ ಹಿಡಿಯಲು ಬೋನ್ ಇರಿಸಿ ರಕ್ಷಣೆ ಮಾಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಹೇಳಿದರು.

ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಅಟ್ಟಿ. ಕಾರ್ಯಾಚರಣೆಗೆ ಮುಂದಾಗಬೇಡಿ. ಕಾಡಾನೆಗಳ ಉಪಟಳದಿಂದ ಕಾಫಿ ತೋಟಗಳು ನಾಶವಾಗಿದೆ. ಯಾವುದೇ ಪರಿಹಾರದಿಂದ ಮುಕ್ತಿ ಕಾಣಲು ಸಾದ್ಯವಾಗುದಿಲ್ಲ. ಸರ್ಕಾರವು ಜಿಲ್ಲೆಯ ವಿವಿಧಡೆಗಳಲ್ಲಿ ನಡೆಯುತ್ತಿರುವ ಕಾಡಾನೆಗಳ ದಾಳಿ ಫಟನೆ ಗಂಭೀರವಾಗಿ ಪರಿಗಣಸಿಬೇಕು ಅಲ್ಲದೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥ ಚೆಂಬಂಡ ಕರುಣ್ ಕಾಳಯ್ಯ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕಾಡಾನೆಗಳ ಸಮಸ್ಯೆ ಜ್ವಲಂತ ಸಮಸ್ಯೆಯಾಗಿದ್ದು. ಇಲಾಖೆಯು ಪ್ರತಿಯೋಂದು ಹಂತದಲ್ಲಿ ಕಾಡಾನೆಗಳನ್ನು ಕಾರ್ಯಾಚರಣೆಯ ಮೂಲಕ ಕಾಡಿಗೆ ಅಟ್ಟುವ ಕಾರ್ಯ ನಿರತವಾಗಿದೆ. ಹುಲಿ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತಿದ್ದೇವೆ. ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಹುಲಿ ಚಲನವಲನಗಳ ಮಾಹಿತಿ ಪಡೆದುಕೊಂಡು ಹುಲಿ ಸೆರೆ ಹಿಡಿಯಲು ಯತ್ನಿಸುವುದಾಗಿ ಹೇಳಿದರು. ಇನ್ನೂ 20 ದಿನಗಳ ಅವಧಿಯಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಕಾಡಾನೆ, ಹುಲಿ ದಾಳಿ ಸಮಸ್ಯೆ ನಿಗದಿತ ಅವಧಿಯಲ್ಲಿ ಪರಿಹರಿಸದೇ ಇದ್ದಲ್ಲಿ ಗ್ರಾಮಸ್ಥರು, ಬೆಳೆಗಾರರು ಜಂಟಿಯಾಗಿ ಕಚೇರಿಯ ಮುಂದೆ ಅನಿರ್ದಿಷ್ಟ ಕಾಲ ಧರಣಿ ಮಾಡುವುದಾಗಿ ಇಲಾಖೆಯ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಚೆಂಬೆಬೆಳ್ಳೂರು, ಪುದುಕೋಟೆ, ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳ ಗ್ರಾಮಸ್ಥರಾದ ಉಳ್ಳಿಯಡ ಜೀವನ್, ಕೊಳುವಂಡ ಗಣಪತಿ, ವೀರಪ್ಪ, ಚೆಂಗಪ್ಪ, ಚಂಬಂಡ ಸಂತೋಷ್, ಜನತಾ, ಪಿ. ನಾಚಪ್ಪ, ಚಾರಿಮಂಡ ಜೀವನ್, ಮಂಡೇಪಂಡ ಗಣೇಶ್ ಕುಟ್ಟಂಡ ಪ್ರಭು ಒಕ್ಕಲಿಗರ ಡಾಲು ಮತ್ತಿತರರಿದ್ದರು.