ಅರಣ್ಯದೊಳಗೆ ಪ್ರವಾಸೋದ್ಯಮ ಸ್ಥಳಿತಗೊಳಿಸಿ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ರೈತರಿಗೆ ಲಾಭ ತಂದು ಕೊಡಲು ಸರ್ಕಾರ ಮುಂದಾಗಬೇಕು ಎಂದು ವಿಶ್ವ ರೈತ ಸಂಘಟನೆಯ ಸದಸ್ಯ ಹಾಗೂ ಪಾರಂಪರಿಕ ನಾಟಿ ವೈದ್ಯ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಅರಣ್ಯದೊಳಗೆ ಪ್ರವಾಸೋದ್ಯಮ ಸ್ಥಳಿತಗೊಳಿಸಿ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ರೈತರಿಗೆ ಲಾಭ ತಂದು ಕೊಡಲು ಸರ್ಕಾರ ಮುಂದಾಗಬೇಕು ಎಂದು ವಿಶ್ವ ರೈತ ಸಂಘಟನೆಯ ಸದಸ್ಯ ಹಾಗೂ ಪಾರಂಪರಿಕ ನಾಟಿ ವೈದ್ಯ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ತೋಟವೇ ಒಂದು ವಿಶ್ವವಿದ್ಯಾನಿಲಯವಾಗಿದ್ದು ಅಲ್ಲಿ ಹೊಸ ಅನ್ವೇಷಣೆ ಆಗಬೇಕು. ಹಣ್ಣು, ತರಕಾರಿ, ಸಿರಿಧಾನ್ಯ ಬಗ್ಗೆ ಅರಿವು ಮೂಡಿಸಬೇಕು. ಅದನ್ನು ಬಿಟ್ಟು ಕಾಡಿನೊಳಗೆ, ಕಾಡಿನ ಸಮೀಪದಲ್ಲಿ ರೆಸಾರ್ಟ್ ಮಾಡಿ ಮೋಜು, ಮಸ್ತಿ ಮಾಡುವುದರಿಂದ ಕಾಡುಪ್ರಾಣಿಗಳಿಗೆ ತೊಂದರೆ ಉಂಟಾಗಿ ಅವು ನಾಡಿನತ್ತ ಬರುತ್ತಿವೆ. ವೀರಪ್ಪನ್ ಇದ್ದಂತಹ ಸಂದರ್ಭದಲ್ಲಿ ಒಂದು ಕಾಡುಪ್ರಾಣಿಗಳು ನಾಡಿನತ್ತ ಸುಳಿಯುತ್ತಿರಲಿಲ್ಲ. ಕಾಡಿನ ಮೇಲೆ ಪ್ರವಾಸಿಗರ ಒತ್ತಡ ಕಡಮೆ ಇತ್ತು. ಆಗಾಗಿ ಕಾಡಿನೊಳಗೆ ರೆಸಾರ್ಟ್ ಮಾಡುವುದು ಬೇಡ. ಅನ್ನದಾತರ ಹೊಲದಲ್ಲಿ ಕೃಷಿಪ್ರವಾಸೋದ್ಯಮ ಮಾಡುವ ಮೂಲಕ ರೈತರಿಗೆ ಲಾಭ ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ವಿಪರೀತವಾಗಿದ್ದು, ಪ್ರಾಣಿ-ಮಾನವ ಸಂಘರ್ಷ ಎದುರಾಗಿದ್ದು, ಜನ, ಜಾನುವಾರು ಪ್ರಾಣ ಹಾನಿಯಾಗುತ್ತಿದೆ. ಕಾಡಿನಲ್ಲಿ ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಳವಾಗಿ ಪ್ರವಾಸೋದ್ಯಮ ಹಾದಿ ತಪ್ಪುತ್ತಿದೆ. ಅಲ್ಲದೆ, ಸೂಕ್ಷ್ಮ ಪರಿಸರ ವಲಯದಲ್ಲಿ ಗಣಿಗಾರಿಕೆ ವ್ಯಾಪಾಕವಾಗಿ ನಡೆಯುತ್ತಿದ್ದು, ಇದರಿಂದ ಕಾಡಿನಲ್ಲಿ ಸ್ವಚ್ಚಂದವಾಗಿ ಇರಬೇಕಾದ

ವನ್ಯಜೀವಿಗಳು ನಾಡಿನತ್ತ ಮುಖ ಮಾಡುತ್ತಿರುವ ಪರಿಣಾಮ ನಿತ್ಯವೂ ಜಾನುವಾರುಗಳ ಬಲಿಯಾಗುತ್ತಿವೆ. ಕೆಲವು ಕಡೆ ಮನುಷ್ಯನ ಮೇಲೂ ದಾಳಿಯಾಗಿ ವನ್ಯಜೀವಿಗಳು ಬಲಿ ತೆಗೆದುಕೊಂಡಿದೆ. ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಸಂಘರ್ಷಮಿತಿ ಮೀರಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಳವಾಗಿ ರೈತರು ಕೃಷಿ ತೊರೆದು ಹಲವು ವರ್ಷಗಳಿಂದ ನಿರಂತರವಾಗಿ ಗುಳೆ ಹೋಗುತ್ತಿದ್ದಾರೆ. ಕಾಡಿನಿಂದ ದೂರಇರುವ ಗ್ರಾಮಗಳಲ್ಲೂ ಕಾಡುಪ್ರಾಣಿ ಭಯದಿಂದ ಜನರು ತಮ್ಮ ಜಮೀನು ತೋಟಗಳಿಗೆ ಹೋಗಲು ಆಗುತ್ತಿಲ್ಲ. ಜಿಲ್ಲೆಗೆ ಅರಣ್ಯ ಸಚಿವರು, ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆದರೂ ಕೂಡ ಸರ್ಕಾರಗಳು ಇದನ್ನು ತಡೆಗಟ್ಟುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಕೂಡಲೇ ಪ್ರವಾಸೋದ್ಯಮ ಇಲಾಖೆ ಕಾಡಿನೊಳಗೆ ಪ್ರವಾಸೋದ್ಯಮ ನಿಲ್ಲಿಸಬೇಕು. ರೆಸಾರ್ಟ್ ನಿಲ್ಲಿಸಬೇಕು, ಗಣಿಗಾರಿಕೆ ನಿಲ್ಲಿಸಬೇಕು. ಆಗ ಮಾತ್ರ ಕಾಡುಪ್ರಾಣಿಗಳು ಅರಣ್ಯದಲ್ಲಿ ನೆಮ್ಮದಿಯಾಗಿ ಇರುತ್ತವೆ. ಇದರ ಬಗ್ಗೆ ಅರಣ್ಯ ಸಚಿವರು,

ಮುಖ್ಯಮಂತ್ರಿಗಳು ಗಮನಹರಿಸಬೇಕು. ಇಲ್ಲದಿದ್ದರೆ ಕಾಡುಪ್ರಾಣಿಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ'''''''' ಎಂದು ಎಚ್ಚರಿಸಿದರು. ವನ್ಯಜೀವಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಶೇ. 100ರಷ್ಟು ಅನುದಾನ ನೀಡುವ ಮೂಲಕಮುಂದಿನ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹಸಿಕಡ್ಲೆ ಖರೀದಿ ಕೇಂದ್ರ ತೆರಯಲು ಆಗ್ರಹ:

ಹಸಿಕಡ್ಲೆ ಖರೀದಿ ಕೇಂದ್ರವನ್ನು ಗ್ರಾಮ ಮಟ್ಟದಲ್ಲಿ ಈ ಕೂಡಲೇ ತೆರೆದು ದಳ್ಳಾಳಿಗಳು ಹಾವಳಿ ನಿಲ್ಲಿಸಬೇಕು. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಹಸಿಕಡ್ಲೆಗೆ5 875 ರು. ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರವು ಕೂಡ ಕನಿಷ್ಠ 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ಜನರಿಗೆ ಮಾರಕವಾಗಿರುವಡೆಡ್ಲಿ ಆನ್ ಲೈನ್ ಗೇಮ್ ರದ್ದುಪಡಿಸಬೇಕು ಮತ್ತು ಜಿಲ್ಲೆಯಲ್ಲಿ ಇಸ್ಪೀಟ್‌ ಹಾವಳಿ ಹೆಚ್ಚಾಗಿದ್ದು ಜನರು ಹಾದಿತಪ್ಪುತ್ತಿದ್ದಾರೆ ಇದನ್ನು ನೂತನ ಎಸ್ಪಿ ಅವರು ತಡೆಗಟ್ಟಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹದೇವಸ್ವಾಮಿ ಹಾಜರಿದ್ದರು.