ಸಾರಾಂಶ
ಕೊರಟಗೆರೆ: ತಾಲೂಕಿನ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಕೆ.ಜಿ.ಬೇವಿನಹಳ್ಳಿಯ ಅರಳಿಕಟ್ಟೆಯ ಮೇಲೆ ಸಾರ್ವಜನಿಕರು ಮತ್ತು ಪೋಷಕರೊಂದಿಗೆ ಶೈಕ್ಷಣಿಕ ಚರ್ಚೆ ಮತ್ತು ಅರಿವು ಕಾರ್ಯಕ್ರಮ ಏರ್ಪಡಿಸಲಾಯಿತು.
ಕೊರಟಗೆರೆ: ತಾಲೂಕಿನ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಕೆ.ಜಿ.ಬೇವಿನಹಳ್ಳಿಯ ಅರಳಿಕಟ್ಟೆಯ ಮೇಲೆ ಸಾರ್ವಜನಿಕರು ಮತ್ತು ಪೋಷಕರೊಂದಿಗೆ ಶೈಕ್ಷಣಿಕ ಚರ್ಚೆ ಮತ್ತು ಅರಿವು ಕಾರ್ಯಕ್ರಮ ಏರ್ಪಡಿಸಲಾಯಿತು.
ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷಾ ಮಾತನಾಡಿ ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಇಲಾಖೆ ರೂಪಿಸುತ್ತಿರುವ ಹೊಸ ಹೊಸ ಯೋಜನೆಗಳ ಬಗ್ಗೆ, ಶಾಲಾ ವ್ಯವಸ್ಥೆಯಲ್ಲಿ ಹಮ್ಮಿಕೊಳ್ಳುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಮನೆಗಳಲ್ಲಿ ಓದುವ ವಾತಾವರಣವನ್ನು ಕಲ್ಪಿಸಿಕೊಟ್ಟು ಶಾಲೆ ಮತ್ತು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಮಕ್ಕಳು ನಿತ್ಯ ಶಾಲೆಗೆ ಹಾಜರಾಗುವಂತೆ ಮಾಡುವ ಉದ್ದೇಶವಾಗಿದೆ ಎಂದು ತಿಳಿಸಿದರು.ಒಬ್ಬ ವಿದ್ಯಾರ್ಥಿ ಸುಶಿಕ್ಷಿತನಾಗಿ, ಸಂಸ್ಕಾರವಂತನಾದರೆ ಅವರ ವ್ಯಕ್ತಿತ್ವದಿಂದ ಒಂದು ಮನೆ ನಂದಾದೀಪವಾಗುತ್ತದೆ. ಒಂದು ಮನೆ ಆದರ್ಶ ಕುಟುಂಬವಾದರೆ ಒಂದು ಗ್ರಾಮ ಮಾದರಿಯಾಗುತ್ತದೆ ಹಾಗೂ ಗ್ರಾಮದಿಂದ ತಾಲೂಕು, ಜಿಲ್ಲೆ, ರಾಜ್ಯ ರಾಷ್ಟ್ರದ ಅಭ್ಯುದಯವಾಗುತ್ತದೆ ಆದರೆ ಪೋಷಕರಿಗೆ ಇಚ್ಛಾಶಕ್ತಿ ಇರಬೇಕು. ತನ್ನ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಮುಂದೊಂದು ದಿನ ಈ ಸಮಾಜಕ್ಕೆ ಆದರ್ಶ ವ್ಯಕ್ತಿಯಾದರೆ ಹೇಗಿರುತ್ತೆ ಎಂದು ಅನೇಕ ಉದಾಹರಣೆಗಳೊಂದಿಗೆ ಶೈಕ್ಷಣಿಕ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವೀನ್, ಶಿಕ್ಷಣ ಸಂಯೋಜಕರಾದ ಗಂಗಾಧರ್. ಶ್ರೀಮತಿ.ಗಂಗಮ್ಮ, ಹಿರಿಯ ಪ್ರಾಥಮಿಕ ಪಾಠಶಾಲೆಯ ಮು.ಶಿ.ಶ್ರೀರಂಗಯ್ಯ, ಶಿಕ್ಷಕರಾದ ಅಶ್ವತ್ಥನಾರಾಯಣ, ಚಿಕ್ಕಪ್ಪಯ್ಯ, ಕೃಷ್ಣಪ್ಪ, ಅಶೋಕ್‌ಪೂಜಾರ್, ದುಡ್ಡನಹಳ್ಳಿ ಗ್ರಾಮದ ಮುಖಂಡರಾದ ರಂಗರಾಜಣ್ಣ, ಎಸ್.ಡಿ.ಎಂ.ಸಿ. ಅದ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.