ಸಾರಾಂಶ
ಗದಗ: ದೇಶದ ಸುವರ್ಣ ಭವಿಷ್ಯಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಚೇರ್ಮನ್ ಡಾ.ಪ್ರಭಾಕರ ಕೋರೆ ಹೇಳಿದರು.ಕೆಎಲ್‌ಇ ಸಂಸ್ಥೆಯಲ್ಲಿ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಮತಯಾಚಿಸಲು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈ ಬಾರಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲಿದ್ದರೆ ದೇಶ ಇನ್ನು ೫೦ ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ ಎಂದು ಆರ್ಥಿಕ ತಜ್ಞರು ಹೇಳ್ತಾರೆ. ಮೋದಿ ಅವರನ್ನು ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸೋದು ನನ್ನ ಆದ್ಯ ಕರ್ತವ್ಯ ಎಂದರು.ಮನೆಯ ಹಿರಿಯ ಸರಿಯಾಗಿದ್ದರೆ ಎಲ್ಲವೂ ಸರಿ ಇದ್ದಂತೆ. ಅದೇ ರೀತಿ ದೇಶದ ನಾಯಕ ಸರಿಯಾಗಿದ್ದರೆ ಸಮೃದ್ಧವಾಗಿ ಶಾಂತವಾಗಿ ಎಲ್ಲವೂ ಸರಿಯಾಗಿರುತ್ತದೆ. ಭಾರತೀಯ ಜನತಾ ಪಾರ್ಟಿಯ ೧೦ ವರ್ಷದ ಆಡಳಿತದಲ್ಲಿ ಯಾವುದೇ ಹಗರಣಗಳು ಆಗಿಲ್ಲ. ಕೇವಲ ಅಭಿವೃದ್ಧಿ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ಮಾತನಾಡಿ, ದೇಶದಲ್ಲಿ ಕಳೆದ ೭೦ ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಮಾಡಲಾರದಂತಹ ಕೆಲಸವನ್ನು ಕೇವಲ ೧೦ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡುವ ಮೂಲಕ ವಿಶ್ವಕ್ಕೆ ಭಾರತವನ್ನು ಮಾದರಿಯ ದೇಶವನ್ನಾಗಿ ಮಾಡಿದ್ದಾರೆ. ಹಾಗೆಯೇ ಪ್ರಪಂಚಕ್ಕೆ ಭಾರತ ವಿಶ್ವಗುರುವಾಗಿ ಬೆಳೆಯುತ್ತಿದೆ. ಇಂತಹ ಭವ್ಯ ಭಾರತದ ಕನಸು ಕಟ್ಟಿಕೊಂಡು ಶ್ರಮಿಸುತ್ತಿರುವಂತಹ ಪ್ರಧಾನಿ ನರೇಂದ್ರ ಮೋದಿ ಮೊತ್ತೊಮ್ಮೆ ೩ನೇ ಭಾರಿಗೆ ಪ್ರದಾನಿಯನ್ನಾಗಿ ಮಾಡುವಂತಹ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದರು.ಈ ಸಂದರ್ಭದಲ್ಲಿ ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮನವಳ್ಳಿ, ಸ್ಥಾನಿಕ ಅಧ್ಯಕ್ಷ ಸಂಶಿಮಠ, ಈಶಣ್ಣ ಮನವಳ್ಳಿ, ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡರಾದ ಭರತ್ ಬೊಮ್ಮಾಯಿ, ಅನಿಲ್ ಮೆಣಸಿನಕಾಯಿ, ಕಾಂತಿಲಾಲ್ ಬಂಸಾಲಿ, ಅನಿಲ ಅಬ್ಬಿಗೇರಿ, ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ, ಶಶಿಧರ ದಿಂಡೂರ, ಕೆ.ಪಿ. ಕೋಟಿಗೌಡರ, ಸಂತೋಷ ಅಕ್ಕಿ, ರಾಜೇದ್ರಪ್ರಸಾದ ಹೊಂಗಲ್ ಸೇರಿದಂತೆ ಪಕ್ಷದ ಹಿರಿಯರು, ಹಲವು ಸಂಸ್ಥೆಗಳ ಹಿರಿಯರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))