ಸಾರಾಂಶ
ಚಾಮರಾಜನಗರದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಮೂರು ದಿನಗಳ ಭಗೀರಥ ಪ್ರೀಮಿಯರ್ ಲೀಗ್-ಐಪಿಎಲ್ ಸೀಸನ್ -೨ ಕ್ರಿಕೆಟ್ ಪಂದ್ಯಾವಳಿಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ನಗರದಲ್ಲಿ ‘ಭಗೀರಥ ಪ್ರೀಮಿಯರ್‌ಲೀಗ್-ಐಪಿಎಲ್ ಸೀಸನ್-೨’ ಮೂರು ದಿನಗಳ ಪಂದ್ಯಾವಳಿಗೆ ಎಡಿಸಿ ಚಾಲನೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಮೂರು ದಿನಗಳ ಭಗೀರಥ ಪ್ರೀಮಿಯರ್ ಲೀಗ್-ಐಪಿಎಲ್ ಸೀಸನ್ -೨ ಕ್ರಿಕೆಟ್ ಪಂದ್ಯಾವಳಿಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್ ಮಾತನಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಪ್ರತಿಯೊಬ್ಬರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ, ಶಾಲಾ ವಿದ್ಯಾರ್ಥಿಗಳು ಕೂಡ ಕೇವಲ ಓದುವುದಕ್ಕೆ ಸೀಮಿತವಾಗಬಾರದು, ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.ಇಂದು ನಗರದಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಬೇಕು, ತೀರ್ಪುಗಾರರು ನಿಷ್ಪಕ್ಷಪಾತವಾದ ತೀರ್ಪು ನೀಡಬೇಕು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಅದರಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪಂದ್ಯದ ಆಯೋಜಕರಾದ ಮಾರ್ಕೆಟ್ ಅಧ್ಯಕ್ಷ ಕಿಟ್ಟಿ, ಕೆಟಿಆರ್ ಮಹೇಶ್, ರುದ್ರ, ಜವರ, ಸಲೀಂ, ಮಂಜು.ಎಂ.ಶೆಟ್ಟಿ, ರಾಹುಲ್, ಪ್ರದೀಪ್, ಪ್ರಕಾಶ್,ಫೈನಾಪಲ್ ಮಂಜು, ಸುವರ್ಣ ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಶಿವಣ್ಣ, ಚನ್ನಶೆಟ್ಟಿ, ಶ್ರೀನಿವಾಸ್, ಪ್ರಕಾಶ್‌ಜೈನ್, ಮಂಜು, ಶಿವಕುಮಾರ್, ಹರೀಶ್ ಸೇರಿದಂತೆ ವಿವಿಧ ಕ್ರೀಡಾಪಟುಗಳು ಹಾಜರಿದ್ದರು.