ಸಾರಾಂಶ
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು ಎಂದು ಪ್ರಾಂಶುಪಾಲರಾದ ಮೇದುರ ವಿಶಾಲ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬುದ್ಧಿವಂತಿಕೆ ಯಾರದ್ದೂ ಸೊತ್ತಲ್ಲ. ವಿದ್ಯಾರ್ಥಿಗಳು ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು ಎಂದು ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೇದುರ ವಿಶಾಲ ಹೇಳಿದ್ದಾರೆ. ಸ್ಥಳೀಯ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ 2024- 25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.ನಿವೃತ್ತ ಪ್ರಾಂಶುಪಾಲ, ಸಂಸ್ಥೆಯ ನಿರ್ದೇಶಕರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಶಾಲೆಯ ಪ್ರಾಂಶುಪಾಲ ಕಲ್ಯಾಣಂಡ ಶಾರದಾ ಮಾತನಾಡಿದರು.
ಶ್ರೀರಾಮ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೆರವಂಡ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ, ಕೊಂಬಂಡ ಗಣೇಶ, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳoಡ ನವೀನ್ ಅಪ್ಪಯ್ಯ, ಕಲಿಯಂಡ ಕೌಶಿಕ್ ಕುಶಾಲಪ್ಪ ಇದ್ದರು.ಪ್ರಾಂಶುಪಾಲ ಬಿ.ಎಂ.ಶಾರದಾ ಸ್ವಾಗತಿಸಿದರು. ಕೆ.ಎಸ್.ಶೋಭಾ ನಿರೂಪಿಸಿದರು. ಚಂದ್ರಕಲಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಲೀಲಾವತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿ.ಎಸ್ ಅನಿತಾ ವಂದಿಸಿದರು.