ಸಾರಾಂಶ
ಬೆಂಗಳೂರು ಅಣ್ಣಮ್ಮ ದೇವಿಯ ಅರ್ಚಕರಿಗೆ ಕುಣಿಗಲ್ ನಲ್ಲಿ ವಾಮಾಚಾರ
ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಕಣಿವೆ ಪಾಳ್ಯ ಗ್ರಾಮದ ದೇವಾಲಯದ ಬಳಿ ಇರುವ ಜೋಡಿ ಜಗಳಗಂಟಿ ಮರದ ಬಳಿ ಬೆಂಗಳೂರಿನ ಅಣ್ಣಮ್ಮ ದೇವಾಲಯದ ಅರ್ಚಕ ವರ್ಗದವರ ಫೋಟೋ ಬಳಸಿ ವಾಮಾಚಾರ ಮಾಡಿರುವ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಅರ್ಚಕರು ದೂರು ನೀಡಿದ್ದಾರೆ.ಗ್ರಾಮದ ದೇವಾಲಯದ ಬಳಿ ಇರುವ ಜೋಡಿ ಜಗಳಗಂಟಿ ಎಂಬ ಮರದ ಬಳಿ ಆಗಸ್ಟ್ 8ರ ಗುರುವಾರ ಬೆಳಿಗ್ಗೆ ಹಲವಾರು ಪುರುಷರ ಮಹಿಳೆಯರ ಮತ್ತು ವೃದ್ಧರ ಭಾವಚಿತ್ರಗಳನ್ನು ಬಳಸಿ ಮರಕ್ಕೆ ಫೋಟೋಗಳನ್ನು ತಾಮ್ರದ ಮಳೆಗಳಿಂದ ಮರಕ್ಕೆ ಹೊಡೆದು ನಂತರ ಬಿಳಿಯ ಬಟ್ಟೆಯಿಂದ ಸುತ್ತುವರಿದು ಮುಚ್ಚಲಾಗಿತ್ತು. ಈ ಕೃತ್ಯ ನಡೆದ ಸ್ಥಳದಲ್ಲಿ ಬಲಿ ನೀಡಿರುವ ಗುರುತು ಹಾಗೂ ಚಾಕು ಮತ್ತು ಇತರ ಮದ್ಯದ ಬಾಟಲುಗಳು ಸೇರಿದಂತೆ ಹಲವಾರು ವಾಮಾಚಾರ ಕುರುಹುಗಳು ಪತ್ತೆಯಾಗಿದ್ದವು. ಈ ಘಟನೆಯಿಂದ ಗಾಬರಿಗೊಂಡ ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ವಾಮಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಅಣ್ಣಮ್ಮ ದೇವಾಲಯದ ಕುಟುಂಬ ಸದಸ್ಯರು ಭಾವಚಿತ್ರಗಳು ಎಂದು ತಿಳಿದು ಬಂದಿದೆ. ವಿಷಯ ತಿಳಿದು ಅರ್ಚಕರ ಕುಟುಂಬದ ಸದಸ್ಯರು ಘಟನೆ ಸ್ಥಳಕ್ಕೆ ಭೇಟಿ ನೀಡಿ ವಾಮಾಚಾರದ ಕುರುಹುಗಳನ್ನು ಪರಿಶೀಲಿಸಿ ನಂತರ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ, ಪೊಲೀಸರು ವಾಮಾಚಾರ ನಿಗ್ರಹ ಕಾಯ್ದೆ ಅಡಿ ತನಿಖೆ ಆರಂಭಿಸಿದ್ದು ವಾಮಾಚಾರ ಮಾಡಿರುವ ಖದೀಮರಿಗಾಗಿ ಬಲೆ ಬೀಸಿದ್ದಾರೆ. ಸ