ಪ್ರೀತಿ, ಸಹಬಾಳ್ವೆ, ಸಹೋದರತೆಯಿಲ್ಲದೇ ಸಮಾಜ ನಶಿಸುತ್ತದೆ: ದೊರೈರಾಜು

| Published : Jan 31 2024, 02:19 AM IST

ಪ್ರೀತಿ, ಸಹಬಾಳ್ವೆ, ಸಹೋದರತೆಯಿಲ್ಲದೇ ಸಮಾಜ ನಶಿಸುತ್ತದೆ: ದೊರೈರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೀತಿಯ ಮೇಲೆ ಜಗತ್ತು ನಿಂತಿದೆಯೇ ಹೊರತು ದ್ವೇಷದಿಂದಲ್ಲ, ನಾವು ಪ್ರೀತಿಯನ್ನು ಕಳೆದುಕೊಂಡು ದ್ವೇಷವನ್ನು ಹುಟ್ಟುಹಾಕಿ ನಾಶವಾಗುತ್ತಿದ್ದೇವೆ. ಮಾನವೀಯತೆ ಉಳಿಯಬೇಕಾದರೆ ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆ ಜನಾಂಗೀಯ ಹೆಸರಿನಲ್ಲಿ ನಡೆಯುವ ಧ್ವೇಷವನ್ನು ಅಳಿಸಬೇಕಾಗಿದೆ.

ಹಿರಿಯ ಚಿಂತಕ ದೊರೈರಾಜು । ಸೌಹಾರ್ದ ಪರಂಪರೆಯ ಅಭಿಯಾನ, ಮಹಾತ್ಮ ಗಾಂಧಿಜೀ ಹುತಾತ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಪ್ರೀತಿಸುವ - ಸಹಬಾಳ್ವೆ, ಸೋದರತೆ ಇಲ್ಲದ ಸಮಾಜ ಅನಾರೋಗ್ಯದಿಂದ ನಶಿಸಿ ಪ್ರಗತಿಯನ್ನು ಕಾಣದೆ ಹಾಳಾಗುತ್ತದೆ. ಹಾಗಾಗಿ ಎಲ್ಲರನ್ನು ಸಮಾನತೆಯಿಂದ ಕಾಣುವ ಸಮ ಅರೋಗ್ಯಕರ ಸಮಾಜಕ್ಕೆ ಎಲ್ಲರೂ ಒಂದಾಗಿ ದುಡಿಯಬೇಕಾಗಿದೆ ಎಂದು ಹಿರಿಯ ಚಿಂತಕ ಪ್ರೊ. ಕೆ. ದೋರೈರಾಜು ಅವರು ಕರೆ ನೀಡಿದರು.

ಸೌಹಾರ್ದ ಪರಂಪರೆಯ ಅಭಿಯಾನ, ಮಹಾತ್ಮಗಾಂಧಿ ಹುತಾತ್ಮ ದಿನ ಹಾಗೂ ಸೌಹಾರ್ದತಾ ಮಾನವ ಸರಪಳಿಯ ಭಾಗವಾಗಿ ಸ್ವಾತಂತ್ರ್ಯ ಚೌಕದಿಂದ ಟೌನ್ ಹಾಲ್ ವೃತ್ತದವರೆಗೂ ನಡೆದ ಮಾನವ ಸರಪಳಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೀತಿಯ ಮೇಲೆ ಜಗತ್ತು ನಿಂತಿದೆಯೇ ಹೊರತು ದ್ವೇಷದಿಂದಲ್ಲ, ನಾವು ಪ್ರೀತಿಯನ್ನು ಕಳೆದುಕೊಂಡು ದ್ವೇಷವನ್ನು ಹುಟ್ಟುಹಾಕಿ ನಾಶವಾಗುತ್ತಿದ್ದೇವೆ. ಮಾನವೀಯತೆ ಉಳಿಯಬೇಕಾದರೆ ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆ ಜನಾಂಗೀಯ ಹೆಸರಿನಲ್ಲಿ ನಡೆಯುವ ಧ್ವೇಷವನ್ನು ಅಳಿಸಬೇಕಾಗಿದೆ. ಗಾಂಧಿಜೀಯ ಕನಸಾದ ಪ್ರೀತಿ, ಸಹನೆಯನ್ನುಕಟ್ಟಿ ಬೆಳೆಸುವ ಮೂಲಕ ಸೌಹಾರ್ದ ನಾಡನ್ನು ಕಟ್ಟಿ ಬೆಳೆಸೋಣ ಎಂದು ಕರೆ ನೀಡಿದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ರಾಮನ ಹೆಸರಿನಲ್ಲಿ ರಾಜಕೀಯ ಬೇಡ, ಎಲ್ಲರಿಗೂ ಬೇಕಾದ ರಾಮನ ಭಕ್ತಿ ಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದರು.

ಶೈಲಾ ನಾಗರಾಜು ಮಾತನಾಡಿ, ನಾವು ಬುದ್ದ, ಗಾಂಧಿ, ಅಂಬೇಡ್ಕರ್, ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರೂ ಇಂದು ಮನುಷ್ಯತ್ವ ಕಳೆದುಕೊಂಡು ಹಿಂಸೆಯ ಕೂಪದಲ್ಲಿ ಬದುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಸೌಹಾರ್ದತೆಯ ನಡೆ ಪ್ರತಿಯೊಬ್ಬರಲ್ಲೂ ಮೂಡಿಬರಬೇಕು ಎಂದರು.

ಸಿಐಟಿಯ ಸೈಯದ್ ಮುಜೀಬ್‌ ಮಾತನಾಡಿ, ಧ್ವೇಷದಿಂದ ನಾಡಿನ ಸಾಮರಸ್ಯವನ್ನು ಕದಡುವ ಶಕ್ತಿಗಳನ್ನು ತಿರಸ್ಕರಿಸಿ ಕೂಡಿ ಬಾಳುವ ಹಾಗೂ ಸೇರಿ ನಲಿವ ಕನ್ನಡತನವನ್ನು ಕನ್ನಡದ ಜನತೆ ತನ್ನದಾಗಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸೌಹಾರ್ಧತೆ ಅತೀ ಮುಖ್ಯವಾದುದು ಎಂದರು.

ಯುವ ಚಿಂತಕ ನಿಖೀತ್‌ ರಾಜ್ ಮೌರ್ಯ ಮಾತನಾಡಿ, ಭಾರತ ಹಿಂಸೆಯನ್ನು ತ್ಯಜಿಸಿ ಬದುಕಿದ ದೇಶ. ನಾವು ಹಿಂಸೆಯನ್ನು ತ್ಯಜಿಸಿ, ಪ್ರೀತಿಯಿಂದ ಬದುಕಬೇಕಾಗಿದೆ. ಆ ನಿಟ್ಟಿನಲ್ಲಿ ಯಾವುದೇ ಜಾತಿ, ಧರ್ಮದವರಾಗಿದ್ದರೂ ಇಂದು ಮನುಷ್ಯರಾಗಿ ಬದುಕುವ ಅವಶ್ಯಕತೆಯಿದೆ ಎಂದರು.

ತಾಜುದ್ದೀನ್ ,ಪಂಡಿತ್‌ ಜವಾಹರ್, ಅಸದುಲ್ಲಾ ಬೇಗ್, ಅಪ್ಸರ್‌ಖಾನ್, ಅರುಣ ಇನ್ನುಮುಂತಾದವರು ಮಾತನಾಡಿದರು.

ಮಾನವ ಸರಪಳಿಯಲ್ಲಿ ಡಿ,ಎಸ್.ಎಸ್ ನ ಹಿರಿಯ ಮುಖಂಡ ನರಸಿಂಹಯ್ಯ, ಜನವಾದಿ ಮಹಿಳಾ ಸಂಘಟನೆಯ ಟಿ. ಅರ್. ಕಲ್ಪನಾ, ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೆಶ್, ರಂಗಧಾಮಯ್ಯ, ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿಯ ಅನುಪಮಾ, ಕೃಷ್ಣಮೂರ್ತಿ, ಯುವ ಮುಂದಾಳು ಗೌಸ್ ಪಾಷ, ಉಮರ್ ಫಾರೂಕ್, ಮನೆಗೆಲಸಗಾರರ ಸಂಘದ ಅನುಸೂಯ, ಎಐಟಿಯುಸಿನ ಕಂಬೆಗೌಡ, ಮುನಿಸಿಪಲ್ ಕಾರ್ಮಿಕರ ಸಂಘದ ಮಾರುತಿ, ನಾಗರಾಜು, ಹಮಾಲಿ ಕಾರ್ಮಿಕ ಸಂಘದ ಗಂಗಾಧರ್, ರೈತ ಸಂಘದ ರವೀಶ್, ಪ್ರಾಂತರೈತ ಸಂಘದ ಅಧ್ಯಕ್ಷ ದೊಡ್ಡ ನಂಜಯ್ಯ, ಬಸವರಾಜು, ಅಂಗನವಾಡಿ ನೌಕರರ ಸಂಘದ ಗೌರಮ್ಮ, ಜಬಿನಾ, ಪುಟಪಾತ್ ವ್ಯಾಪಾರಿಗಳ ಸಂಘದ ವಸೀಮ ಅಕ್ರಂ, ಮುತ್ತುರಾಜ್ ನಗರ ವ್ಯಾಪಾರಿ ಸಮಿತಿ ಸದಸ್ಯರಾದ ಜಗದೀಶ್, ರವಿನಾಯಕ್, ಅಟೋ ಚಾಲಕ ಸಂಘ ಇಂತಿಯಾಜ್, ಸಿದ್ದರಾಜು, ಸಮುದಾಯ ಸಂಚಾಲಕ ಅಶ್ವಥಯ್ಯ, ವಿದ್ಯಾರ್ಥಿ ನಾಯಕ ವಿನಯ್, ನಟರಾಜಪ್ಪ, ನಿವೃತ್ತ ನೌಕರರ ಸಂಘ, ವರದಕ್ಷಿಣೆ ವಿರೋಧಿ ವೇದಿಕೆಯ ಪಾರ್ವತಮ್ಮರಾಜ್‌ಕುಮಾರ್, ತುಮಕೂರು ಸೈನ್ಸ್ ಸೆಂಟರ್ ಪಿ. ಪ್ರಸಾದ್, ಪಿ,ಎಫ್, ಪಿಂಚಣಿದಾರರ ಸಂಘದ ಟಿ.ಜಿ. ಶಿವಲಿಂಗಯ್ಯ, ಕಟ್ಟಡಕಾರ್ಮಿಕರ ಸಂಘದ ಕಲೀಲ್, ಶಂಕಪ್ಪ, ಉಪಸ್ಥಿತರಿದ್ದರು.

----------

ತುಮಕೂರಿನಲ್ಲಿ ಸೌಹಾರ್ದ ಪರಂಪರೆಯ ಅಭಿಯಾನ, ಮಹಾತ್ಮಗಾಂಧಿ ಹುತಾತ್ಮ ದಿನ ಹಾಗೂ ಸೌಹಾರ್ದತಾ ಮಾನವ ಸರಪಳಿಯ ಭಾಗವಾಗಿ ಸ್ವಾತಂತ್ರ್ಯ ಚೌಕದಿಂದ ಟೌನ್ ಹಾಲ್ ವೃತ್ತದವರೆಗೂ ಮಾನವ ಸರಪಳಿ ಕೈಗೊಳ್ಳಲಾಯಿತು.