ದೆವ್ವ ಬಿಡುಸುವುದಾಗಿ ಹೇಳಿ ಥಳಿತ : ಮಹಿಳೆ ಸಾವು

| N/A | Published : Jul 08 2025, 12:32 AM IST / Updated: Jul 08 2025, 09:06 AM IST

woman

ಸಾರಾಂಶ

ದೆವ್ವ ಬಿಡುಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಥಳಿಸಿ ಕೊಂದಿರುವ ಘಟನೆ ಸಮೀಪದ ಜಂಬರಗಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಮೃತ ಮಹಿಳೆ.

ಹೊಳೆಹೊನ್ನೂರು: ದೆವ್ವ ಬಿಡುಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಥಳಿಸಿ ಕೊಂದಿರುವ ಘಟನೆ ಸಮೀಪದ ಜಂಬರಗಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಮೃತ ಮಹಿಳೆ.

ಭಾನುವಾರ ರಾತ್ರಿ 9.30ಕ್ಕೆ ಮೃತೆ ಗೀತಮ್ಮನ ಮನೆಗೆ ಬಂದ ಆಶಾ ಎಂಬ ಮಹಿಳೆ ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸುವುದಾಗಿ ಗೀತಮ್ಮಳ ಮಗನ ಹತ್ತಿರ ಹೇಳಿದ್ದಾಳೆ. ಮಗ ಸಂಜಯ್ ಆಶಾಳ ಮಾತಿಗೆ ಒಪ್ಪಿಕೊಂಡು ದೆವ್ವ ಬಿಡಿಸಲು ಒಪ್ಪಿಕೊಂಡಿದ್ದಾನೆ.

ನಂತರ ಗೀತಮ್ಮನ ಮನೆಯ ಮುಂಭಾಗದಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ಮಾಡುತ್ತಿದಂತೆ ಗೀತಮ್ಮನ ಮೇಲೆ ದೇವ್ವ ಬಂದಿದೆ ಎನ್ನಲಾಗುತ್ತಿದು ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಿಕೊಂಡು ಮನೆಯಿಂದ ಜಂಬರಗಟ್ಟೆ ಹೋರಗಿನ ಮರವೊಂದರ ಕೆಳಗೆ ಕರೆದುಕೊಂಡು ಹೋಗಿದ್ದಾರೆ. ಪೂಜೆ ಮಾಡಿದ ಕೆಲ ಹೊತ್ತಿನಲ್ಲೆ ಗೀತಮ್ಮ ಮೈ ಮೇಲೆ ದೇವ್ವ ಬಂದವರಂತೆ ಕೂಗಾಡಲು ಶುರು ಮಾಡಿದ್ದಾರೆ. ಅಷ್ಟರಲ್ಲೆ ಆಶಾಳ ಮೈ ಮೇಲೂ ಚೌಡಮ್ಮ ದೇವರು ಬಂದಿದೆ ಎನ್ನಲಾಗುತ್ತಿದೆ. 

ಆಶಾ ಗೀತಮ್ಮರಿಬ್ಬರ ಕೂಗಾಟ ಜೋರಾಗಿದೆ. ಶಬ್ದ ಕೇಳಿ ಕೆಲವರು ಸ್ಥಳಕ್ಕೆ ಬಂದು ಇಬ್ಬರ ಕೂಗಾಟ ರಂಪಾಟದ ವಿಡಿಯೋ ಮಾಡಿಕೊಂಡಿದ್ದಾರೆ. ಜನ ಸೇರುತ್ತಿದಂತೆ ದೇವರು ಬಂದ ಆಶಾ ವಿಡಿಯೋ ಮಾಡುತ್ತಿದ ಕೆಲವರನ್ನು ವಾಪಸ್‌ ಕಳಿಸಿ ಪೂಜೆ ಮುಂದುವರೆಸಿದ್ದಾರೆ. ಅಲ್ಲೆ ಇದ್ದ ಮರದ ಟೊಂಗೆಯೊಂದನ್ನು ಕಿತ್ತುಕೊಂಡ ಆಶಾ ಗೀತಮ್ಮಗೆ ತಳಿಸಲು ಶುರು ಮಾಡಿದ್ದಾರೆ. ನಾನು ಹೋಗುವುದಿಲ್ಲ ಎಂದು ಹಠ ಮಾಡುತ್ತಿದ ಗೀತಮ್ಮನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆಯಲ್ಲಿದ ತಣ್ಣಿರೆರಚಿದ್ದಾರೆ. ಚಳಿ ತಳಾಲಾಗದೆ ನಡುಗುತ್ತಿದ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ ಆತ್ಮ ಹೋರ ಹೋಗಿದೆ ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮನನ್ನು ಆಶಾ ಮನೆಗೆ ಕಳಿಸಿದ್ದಾರೆ.

ಆದರೆ, ನಡೆಯಲಾಗದೆ ಸ್ಥಿತಿಯಲ್ಲಿದ್ದ ಗೀತಮ್ಮ ತೀವ್ರ ಅಸ್ವಸ್ಥವಾಗಿದ್ದರು. ಆಗ ಕೂಡಲೇ ಅವರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗೀತಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದೇವರು ಬಂದ ಮಹಿಳೆ ದೆವ್ವ ಬಿಡುಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಸ್ಥಳೀಯ ಮುಖಂಡರು ರಾಜಿ ಪಂಚಾಯಿತಿ ನಡೆಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಮೃತೆ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ. ಆರೋಪಿ ಆಶಾಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

Read more Articles on