ಸಾರಾಂಶ
ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ ದಿನ ವೃದ್ಧೆಯೊರ್ವರು ಬಸ್ಸಿನ ಮೆಟ್ಟಿಲಿಗೆ ನಮಸ್ಕರಿಸಿ ಬಸ್ ಹತ್ತಿರುವುದು ದೊಡ್ಡ ಸುದ್ದಿಯಾಗಿತ್ತು. ಚಿಕ್ಕಮಗಳೂರಿನಲ್ಲಿ ಮಹಿಳೆಯೋಬ್ಬರು ಇದೇ ಮೊದಲ ಬಾರಿಗೆ ತಿರುಪತಿಗೆ ಹೊರಟಿರುವ ರೈಲಿಗೆ ನಮಸ್ಕರಿಸಿದರು.
ಚಿಕ್ಕಮಗಳೂರು: ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ ದಿನ ವೃದ್ಧೆಯೊರ್ವರು ಬಸ್ಸಿನ ಮೆಟ್ಟಿಲಿಗೆ ನಮಸ್ಕರಿಸಿ ಬಸ್ ಹತ್ತಿರುವುದು ದೊಡ್ಡ ಸುದ್ದಿಯಾಗಿತ್ತು. ಚಿಕ್ಕಮಗಳೂರಿನಲ್ಲಿ ಮಹಿಳೆಯೋಬ್ಬರು ಇದೇ ಮೊದಲ ಬಾರಿಗೆ ತಿರುಪತಿಗೆ ಹೊರಟಿರುವ ರೈಲಿಗೆ ನಮಸ್ಕರಿಸಿದರು.
ಇದಕ್ಕೆ ಕಾರಣ, ಈ ಮಹಿಳೆ ವರ್ಷಕ್ಕೆ 3-4 ಬಾರಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ತೆರಳುತ್ತಾರೆ. ಇಷ್ಟು ಬಾರಿ ಹೋಗಿ ಬರಲು ಕಾರಣ ವೆಂಕಟೇಶ್ವರ ಅವರ ಮನೆ ದೇವರು.
ಇಲ್ಲಿನ ಹಿರೇಮಗಳೂರಿನ ನಿವಾಸಿ ಲಕ್ಷ್ಮೀ ಬಾಯಿ ಚಿಕ್ಕಮಗಳೂರಿನಿಂದ ತಿರುಪತಿಗೆ ನೇರವಾಗಿ ರೈಲು ಸಂಚಾರ ಪ್ರಾರಂಭ ವಾದ ಹಿನ್ನಲೆಯಲ್ಲಿ ರೈಲಿಗೆ ಭಕ್ತಿಯ ಬೀಳ್ಕೋಡುಗೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ ಪ್ರಧಾನಮಂತ್ರಿ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯಿಂದ ಇದು ಸಾಧ್ಯ ವಾಗಿದೆ. ಹೀಗಾಗಿ ಆ ತಾಯಿಗೆ ತಿರುಪತಿಗೆ ರೈಲು ಆರಂಭವಾಗಿರುವುದಕ್ಕೆ ಸಂತೋಷವಾಗಿದೆ. ತಿರುಪತಿ ತಿಮ್ಮಪ್ಪನಿಗೆ ಎಷ್ಟು ನಮಸ್ಕಾರ ಸಲ್ಲಿಸುತ್ತೇನೋ ಅಷ್ಟು ನಮಸ್ಕಾರವನ್ನು ಆ ತಾಯಿಗೆ ಸಲ್ಲಿಸುತ್ತೇನೆ ಎಂದರು.