ಸಾರಾಂಶ
ತಾಲೂಕಿನ ಕಿಕ್ಕೆರಿಕಟ್ಟೆ ಗ್ರಾಮದಲ್ಲಿ ನಡದ ಘಟನ
- ತಾಲೂಕಿನ ಕಿಕ್ಕೆರಿಕಟ್ಟೆ ಗ್ರಾಮದಲ್ಲಿ ನಡದ ಘಟನೆ
ಕನ್ನಡಪ್ರಭ ವಾರ್ತೆ ಹುಣಸೂರುತಾಲೂಕಿನ ಕಿಕ್ಕೆರಿಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಲ್ಟ್ರಿ ರಾಜಣ್ಣ ಎಂಬವರ ಪತ್ನಿ ಕಾವೇರಮ್ಮ (68) ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಕಾವೇರಿ ಅವರು ತಮ್ಮ ಮನೆಯ ಮುಂಭಾಗ ಕಸ ಗುಡಿಸುವ ಸಮಯದಲ್ಲಿ ಹಿಂದೆ ಬಂದ ಸಲಗ ಅವರ ಮೇಲೆ ಹಠಾತ್ ದಾಳಿ ನಡೆಸಿದೆ. ತಕ್ಷಣ ಪಕ್ಕದಲ್ಲಿದ್ದ ಅವರ ಪತಿ ಕಿರುಚಿಕೊಂಡಾಗ ಗಾಬರಿಯಾಗಿ ಸಲಗ ಬಿಟ್ಟು ಅರಣ್ಯದ ಕಡೆ ಓಡಿ ಹೋಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ಪರಿಶೀಲಿಸಿದರು. ಶಾಸಕ ಜಿ.ಡಿ. ಹರೀಶ್ ಗೌಡ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಕಾವೇರಿ ಅವರ ಆರೋಗ್ಯ ವಿಚಾರಿಸಿದರು.