ಮಹಿಳೆಯರು ಹೋರಾಟ ಮಾಡಿ ಸವಾಲು ಎದುರಿಸಿ

| Published : Oct 25 2024, 01:08 AM IST / Updated: Oct 25 2024, 01:09 AM IST

ಮಹಿಳೆಯರು ಹೋರಾಟ ಮಾಡಿ ಸವಾಲು ಎದುರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟೀಷರ ವಿರುದ್ಧ ಚನ್ನಮ್ಮಾಜಿಯು ಹೋರಾಟ ಮಾಡಿದ ಮಾದರಿಯಲ್ಲಿ ಮಹಿಳೆಯರು ಹೋರಾಟ ಮಾಡಿ ನಮ್ಮ ಮುಂದಿರುವ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಬ್ರಿಟೀಷರ ವಿರುದ್ಧ ಚನ್ನಮ್ಮಾಜಿಯು ಹೋರಾಟ ಮಾಡಿದ ಮಾದರಿಯಲ್ಲಿ ಮಹಿಳೆಯರು ಹೋರಾಟ ಮಾಡಿ ನಮ್ಮ ಮುಂದಿರುವ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಕೋಟೆ ಆವರಣದಲ್ಲಿರುವ ರಾಣಿ ಚನ್ನಮ್ಮಾ ವೇದಿಕೆಯಲ್ಲಿ ಕಿತ್ತೂರ ರಾಣಿ ಸಂಸ್ಥಾನದ ಕುರಿತು ರಾಜ್ಯಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ದಿನ ನಿತ್ಯ ಅತ್ಯಾಚಾರಗಳು ನಡೆಯುತ್ತಲೇ ಚನ್ನಮ್ಮಾಜಿಯು ಹೇಗೆ ತನ್ನ ಸಾಮ್ರಾಜ್ಯ ಹಾಗೂ ಪರಿವಾರವನ್ನು ಕಾಪಾಡಲು ಗುಂಪು ಕಟ್ಟಿಕೊಂಡು ಬ್ರಿಟೀಷರ ವಿರುದ್ಧ ಹೇಗೆ ಹೋರಾಟ ನಡೆಸಿದರೋ ಅದೇ ರೀತಿ ಈಗ ಮಹಿಳೆಯರು ಎರಡನ್ನು ಸಮಾನವಾಗಿ ಧೈರ್ಯದಿಂದ ಎದುರಿಸಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಅವರ ಜೀವನವನ್ನು ಸುಭದ್ರಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದರು.ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಚನ್ನಮ್ಮಾಜಿಯು ಸ್ವಾತಂತ್ರ್ಯಕ್ಕಾಗಿ ಖಡ್ಗ ಹಿಡಿದು ಯುದ್ಧ ಮಾಡಿದ್ದಳು. ಆದರೆ, ಇಂದು ನಾವುಗಳು ಸಂವಿಧಾನಡಿಯಲ್ಲಿ ಜಾಗತಿಕ ಯುದ್ಧವನ್ನು ಸಾರುವ ಕಾಲಬಂದಿದೆ. ಹೆಣ್ಣಿಗೆ ಅವಕಾಶ ಕೊಟ್ಟರೇ ದೇಶ ಬದಲಾವಣೆ ಹೊಂದುತ್ತದೆ ಎಂದು ಜವಾಹರಲಾಲ ನೇಹರುವರ ಮಾತನ್ನು ನೆಣಪಿಸಿ ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಾಗಿದೆ ಎಂದು ತಿಳಿಸಿದರು.ವಿಚಾರಗೋಷ್ಠಿಯಲ್ಲಿ ಕಿತ್ತೂರ ರಾಣಿ ಚನ್ನಮ್ಮನಳ ಹೋರಾಟದಿಂದ ಯುವ ಪಿಳಿಗೆ ಮೇಲೆ ಪರಿಣಾಮಗಳು ಎಂಬ ವಿಷಯದ ಕುರಿತು ಸಂಪದಾ ಕೇರಿಮನಿ, 200ನೇ ವಿಜಯೋತ್ಸವ ಪೂರ್ವದಲ್ಲಿ ಚನ್ನಮ್ಮನ ಕುರಿತು ಬಂದಿರುವ ಸಾಹಿತ್ಯ, ಅಮೃತಾ ಶೆಟ್ಟಿ, ಕಿತ್ತೂರ ಹಾಗೂ ಸಮಕಾಲಿನ ಪ್ರಭುತ್ವಗಳ ಸಂಬಂಧಗಳು ಕವಿತಾ ಕುಸುಗಲ್ಲ, ಕಿತ್ತೂರು ಅಂದು ಇಂದು ಸವಿತಾ ದೇಶಮುಖ ಅವರು ವಿಷಯಗಳನ್ನು ಮಂಡಿಸಿದರು. ಶಾಹಿನ್ ಅಕ್ತಾರ್ ಸ್ವಾಗತ, ಗಾಯತ್ರಿ ಅಜ್ಜನ್ನವರ ವಂದನೆ ಸಲ್ಲಿಸಿದರು.ನಮ್ಮ ಸರ್ಕಾರವು ಈ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದೆ. ಅದೇ ರೀತಿ ಚನ್ನಮ್ಮಾಜಿಯ 200ನೇ ವಿಜಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

-ಪ್ರಿಯಾಂಕಾ ಜಾರಕಿಹೊಳಿ, ಚಿಕ್ಕೋಡಿ ಸಂಸದೆ.